ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಗಬಕ್ಕನೆ ನುಂಗಿದ ಹೆಬ್ಬಾವು | ಭಯ ಪಡೋ ಫೋಟೋ ವೈರಲ್!!!

ಹಾವು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಭಯನೇ. ಅದರಲ್ಲೂ ಹೆಬ್ಬಾವು ಅಂದ್ರೆ ಇನ್ನಷ್ಟು ಭಯ. ಅಚ್ಚರಿ ಪಡುವ ವಿಷಯವೇನೆಂದರೆ ಭಾರಿ ಗಾತ್ರದ ಹೆಬ್ಬಾವೊಂದು 54 ವರ್ಷ ಮಹಿಳೆಯನ್ನು ಜೀವಂತವಾಗಿ ನುಂಗಿರುವ ಭಯಾನಕ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

 

ಮೃತ ಮಹಿಳೆಯನ್ನು ಜಹ್ವಾಹ್ (54) ಎಂದು ಗುರುತಿಸಲಾಗಿದೆ. ಜಾಂಬಿ ಬಳಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಜಹ್ರಾ ದಿಡೀರ್ ನಾಪತ್ತೆಯಾಗಿದ್ದರು. ಆಕೆಯನ್ನು ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೂ ಆಕೆಯ ಪತ್ತೆಯಾಗಲಿಲ್ಲ . ಎರಡು ದಿನಗಳ‌ ಬಳಿಕ ತೋಟದಲ್ಲಿ ಹೊಟ್ಟೆ ತುಂಬಿಸಿಕೊಂಡ ಹೆಬ್ಬಾವು ಪತ್ತೆಯಾಗಿದೆ , ಸಂಶಯಗೊಂಡ ಸ್ಥಳೀಯರು ಹೆಬ್ಬಾವನ್ನು ಸೆರೆಹಿಡಿದಿದ್ದಾರೆ‌. ಈ ವೇಳೆ ಮಹಿಳೆಯನ್ನು ಜೀವಂತವಾಗಿ ಹೆಬ್ಬಾವು ನುಂಗಿರುವುದು ಬಹಿರಂಗವಾಗಿದೆ. ಬಳಿಕ ಆಕ್ರೋಶಗೊಂಡ ಸ್ಥಳೀಯರು ಹೆಬ್ಬಾವಿನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾರೆ. ಮಹಿಳೆಯ ಮೃತ ದೇಹವನ್ನು ಹೆಬ್ಬಾವಿನ ಹೊಟ್ಟೆ ಸೀಳಿ‌ ಹೊರಕ್ಕೆ ತೆಗೆದಿದ್ದಾರೆ.

ಈ ಕುರಿತು ಜಹ್ರಾಹ್ ​ವಾಸಿಸುತ್ತಿದ್ದ ಟೆರ್ಜುನ್ ಗಜಾ ಗ್ರಾಮದ ಮುಖ್ಯಸ್ಥ ಆಂಟೊ ಮಾತನಾಡಿ, ಹಾವು ಜಹ್ರಾಳನ್ನು ಕಚ್ಚುವ ಮೂಲಕ ದಾಳಿ ಮಾಡಿ, ನಂತರ ಅವಳನ್ನು ಉಸಿರುಗಟ್ಟಿಸಲು ಸುತ್ತಿಕೊಂಡಿದೆ . ಇದಾದ ಬಳಿಕ ಅವಳನ್ನು ಜೀವಂತವಾಗಿ ತಲೆಯಿಂದ ಪಾದದವರೆಗೂ ನುಂಗಿದೆ ಎಂದು ಹೇಳಿದ್ದಾರೆ.

ಇನ್ನು ಗ್ರಾಮದಲ್ಲಿ ಭಾರಿ ಗಾತ್ರದ ಅನೇಕ ಹೆಬ್ಬಾವುಗಳು ಕಾಣಿಸಿಕೊಳ್ಳುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ . ಅಲ್ಲದೆ, ಈ ಹಿಂದೆ 27 ಅಡಿ ಉದ್ದದ ಹೆಬ್ಬಾವು ಒಂದು ಪತ್ತೆಯಾಗಿತ್ತು. ಅದನ್ನು ಹಿಡಿಯಲು ಮೂವರು ಪ್ರಯತ್ನಿಸಿದಾದರೂ ಸಾಧ್ಯಾವಾಗಲಿಲ್ಲ ಎಂದು ಆಂಟೋ ಹೇಳಿದರು.

Leave A Reply

Your email address will not be published.