DA Hike : ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಹಿತಿ! ಯಾವಾಗ? ಇಲ್ಲಿದೆ ಸಂಪೂರ್ಣ ವಿವರ!

ಕೇಂದ್ರ ಸರ್ಕಾರಿ ನೌಕರರರಿಗೆ ಈಗಾಗಲೇ ಸರಕಾರವು ತುಟ್ಟಿಭತ್ಯೆ ಹೆಚ್ಚಳ ನೀಡುತ್ತಿದೆ. ಅಂದರೆ ನವರಾತ್ರಿ, ದಸರಾ ಹಬ್ಬದ ಸಂಭ್ರಮದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡಿತ್ತು. ಕೇಂದ್ರ ಸರ್ಕಾರದಿಂದ ಕೊಂಚ ತಡವಾದರೂ ಸಿಹಿ ಸುದ್ದಿ ಕೊಟ್ಟಿದೆ.

2022 ರ ಜನವರಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಶೇಕಡ 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಪಡೆದಿದ್ದರು. ಈಗ ಅದು ಶೇಕಡ 4ಕ್ಕೆ ಹೆಚ್ಚಾಗಿದೆ. ಡಿಎ ಹೆಚ್ಚಳ ಘೋಷಣೆಯಾಗಿ ಜುಲೈ 1, 2022 ರಂತೆ ಡಿಎ ಶೇಕಡ 38ರಷ್ಟು ಪಡೆದಿದ್ದಾರೆ. ಜೊತೆಗೆ ನೌಕರರು ಎರಡು ತಿಂಗಳ ಡಿಎ ಬಾಕಿಯನ್ನು ಸಹ ಪಡೆದಿದ್ದಾರೆ.

ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಶೇಕಡ 38 ಆಗಲಿದೆ. ಹೌದು ಸೆಪ್ಟೆಂಬರ್ 2022 ರ ಸಂಬಳವು ಹೊಸ ತುಟ್ಟಿ ಭತ್ಯೆಯನ್ನು ಒಳಗೊಂಡಿರುತ್ತದೆ. ಕೇಂದ್ರ ನೌಕರರು ಜುಲೈ ಮತ್ತು ಆಗಸ್ಟ್‌ ಎರಡು ತಿಂಗಳ ಡಿಎ ಬಾಕಿಯನ್ನು ಪಡೆಯುತ್ತಾರೆ.

ಹಲವು ರಾಜ್ಯ ಸರ್ಕಾರಗಳಿಂದಲೂ ಸಿಹಿ ಸುದ್ದಿ ಬಂದಿದೆ.
ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದ ನಂತರ, ಅಸ್ಸಾಂ, ಹರ್ಯಾಣ, ಉತ್ತರ ಪ್ರದೇಶ, ಒಡಿಶಾ, ಕರ್ನಾಟಕ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು 7ನೇ ವೇತನ ಆಯೋಗದ ಶಿಫಾರಸಿನ ಅಡಿಯಲ್ಲಿ ತಮ್ಮ ರಾಜ್ಯ ನೌಕರರ ಡಿಎ ಹೆಚ್ಚಿಸಿವೆ.

7ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ
ವೇತನದ ಲೆಕ್ಕ ಈ ರೀತಿ ಇದೆ. ಶೇಕಡಾ 4 ರಷ್ಟು ಹೆಚ್ಚಾದರೆ ವೇತನದ ಲೆಕ್ಕಾಚಾರದ ಕಿರು ಮಾಹಿತಿ ಇಲ್ಲಿದೆ.
• ಓರ್ವ ನೌಕರನ ಮೂಲ ವೇತನ 56,900 ರುಪಾಯಿ ಇದ್ದರೆ, ಪ್ರಸ್ತುತ ನೌಕರ 19,346 ರುಪಾಯಿ ತುಟ್ಟಿಭತ್ಯೆ ಪಡೆಯುತ್ತಾರೆ.
• ಶೇಕಡ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ 21,622 ರುಪಾಯಿ ಪಡೆಯಲಿದ್ದಾರೆ.
• ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳದಿಂದ ವೇತನ 2,276 ರೂಪಾಯಿ ಹೆಚ್ಚಳವಾಗಲಿದೆ.
• ವಾರ್ಷಿಕವಾಗಿ ವೇತನ 27,312 ರೂಪಾಯಿ ಹೆಚ್ಚಳವಾಗಲಿದೆ.

ಒಟ್ಟಾರೆ ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರು ಪ್ರಯೋಜನ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

ತುಟ್ಟಿಭತ್ಯೆಯು ಭಾರತದಲ್ಲಿ ಓರ್ವ ವ್ಯಕ್ತಿಯ ಸಂಬಳದ ಭಾಗವೆಂದೇ ಹೇಳಬಹುದು. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಜೊತೆಗೆ ಡಿಎ ಪರಿಹಾರ ಮೊತ್ತ, ಬಾಕಿ ಮೊತ್ತ ಸೇರಿಸಲಾಗುತ್ತದೆ. ಇದರ ಜೊತೆಗೆ ಸಂಬಳ ಹೆಚ್ಚಳವನ್ನು ಪಡೆಯುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಮಾರ್ಚ್ 2023 ರಂದು ಡಿಎ ಹೆಚ್ಚಳವಾಗುವ ಮಾಹಿತಿಯಿದೆ. ಆದರೆ, ಈ ವರ್ಷದಲ್ಲಿ ಡಿಎ ಹೆಚ್ಚಳ ಮಾಡಿರುವುದರಿಂದ ಆರು ತಿಂಗಳಿಗೂ ಮುನ್ನವೇ ಡಿಎ ಹೆಚ್ಚಳ ಮಾಡಿ 2022ರ ವರ್ಷಾಂತ್ಯಕ್ಕೆ ಅಥವಾ 2023ರ ಆರಂಭದಲ್ಲೇ ಸಿಹಿ ಸುದ್ದಿ ನಿರೀಕ್ಷಿಸಬಹುದು ಎಂಬ ಮಾಹಿತಿ ಇದೆ. ಶೇ 3 ರಿಂದ 5 ರಷ್ಟು ಪ್ರಮಾಣದಲ್ಲಿ ತುಟ್ಟಿಭತ್ಯೆ ಹೆಚ್ಚಳ ನಿರೀಕ್ಷೆಯಿದೆ. ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಮಾಣ, 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯದ ಮೇಲೆ ಡಿಎ ಹೆಚ್ಚಳ ಪ್ರಮಾಣ ನಿಗದಿಯಾಗಲಿರುವುದರಿಂದ ಇದರ ಮೇಲೆ ಮಾಹಿತಿ ನೀಡಲಾಗುತ್ತದೆ.

Leave A Reply

Your email address will not be published.