Love is Blind : 56 ವರ್ಷದ ಮಹಿಳೆಯೊಂದಿಗೆ 19 ರ ಯುವಕನ ಲವ್ | ಪ್ರೀತಿಗೆ ಕಣ್ಣಿಲ್ಲ!!!

ಪ್ರೀತಿ ಕುರುಡು ಅನ್ನೋದು ಎಲ್ಲರಿಗೂ ಗೊತ್ತು. ಹಾಗೆಯೇ ಆ ಮಾತಿಗೆ ತಕ್ಕಂತೆ ಎಷ್ಟೋ ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ, ಕೇಳಿದ್ದೇವೆ. ಹಾಗೆಯೇ ಒಂದು ಘಟನೆ ಥೈಲ್ಯಾಂಡ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

 

ಹೌದು 19ರ ಹದಿಹರೆಯದ ಯುವಕ, 56 ವರ್ಷದ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಘಟನೆ ಥೈಲ್ಯಾಂಡ್ ದೇಶದಿಂದ ವರದಿಯಾಗಿದೆ.

19 ವರ್ಷದ ವುತಿಚಾಯ್ ಹಾಗೂ 56 ವರ್ಷದ ಜನ್ಹಾ ನಮುಂಗ್ರಾಕ್ ಅವರು ಮದುವೆಯಾಗುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ, ವಿಡಿಯೊಗಳನ್ನು ಹಾಕುವವರು ಇವರ ಸಂದರ್ಶನಕ್ಕೆ ಮುಗಿಬಿದ್ದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಪ್ರೀತಿಗೆ ಜಾತಿ ಮತ ಅಂತಸ್ತು, ವಯಸ್ಸು, ಅಂದ ಚಂದ ಯಾವುದು ಇಲ್ಲ’ ಎನ್ನುವುದಕ್ಕೆ ಈ ಜೋಡಿ ಸಾಕ್ಷಿಯಾಗುತ್ತಿದ್ದಾರೆ.

ವುತಿಚಾಯ್ 10 ವರ್ಷದವರಿದ್ದಾಗ ಜನ್ಹಾ ನಮುಂಗ್ರಾಕ್ ಅವರ ಪರಿಚಯವಾಗಿತ್ತು. ಆಗ ಜನ್ಹಾಗೆ 46 ವರ್ಷ ವಯಸ್ಸಾಗಿತ್ತು ಎಂದು ಮಾಧ್ಯಮಗಳು ಹೇಳಿವೆ. ಜನ್ಹಾ ಮತ್ತು ವುತಿಚಾಯ್ ನೆರೆಹೊರೆಯವರು ಎನ್ನಲಾಗಿದೆ. ಜನ್ಹಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದು ಅವರಿಗೆ ವುತಿಚಾಯ್ ಸಹಾಯ ಮಾಡುತ್ತಾರೆ. ಜನ್ಹಾ ಅವರು ವಿಚ್ಛೇದಿತೆಯಾಗಿದ್ದು ಅವರಿಗೆ ಮೂವರು ಮಕ್ಕಳಿದ್ದಾರೆ. ನಮ್ಮ ವಯಸ್ಸಿನ ಅಂತರದ ಬಗ್ಗೆ ನನಗೆ ಬೇಸರವಿಲ್ಲ ಹಾಗೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ನಾನು ಮುಜುಗರಪಟ್ಟುಕೊಳ್ಳುವುದಿಲ್ಲ ಎಂದು ವುತಿಚಾಯ್ ಹೇಳಿದ್ದಾರೆ. ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Leave A Reply

Your email address will not be published.