ಬ್ರಿಟಿಷ್ ಪ್ರಧಾನಿಯಾಗಿ ಆಯ್ಕೆ ಆಗಿದ್ದು ರಿಷಿ ಸುನಕ್, ಶುಭಾಶಯಗಳ ಮಹಾಪೂರ ಹರಿದು ಬರ್ತಿರೋದು ಕ್ರಿಕೆಟರ್ ಆಶಿಶ್ ನೆಹ್ರಾಗೆ !!!

ಭಾರತೀಯ ಮೂಲದ, ಇನ್ಫೋಸಿಸ್ ನಾರಾಯಣ ಮೂರ್ತಿಯ ಅಳಿಯ ರಿಷಿ ಸುನಕ್ ಬ್ರಿಟನ್‌ನ ನೂತನ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ. ಒಂದು ಕಡೆ ರಿಷಿ ಸುನಕ್ ಭಾರತೀಯ ಮೂಲದವನೆಂದು ತಿಳಿದು ಜನರು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ರಿಷಿ ಸುನಾಕ್ ಬ್ರಿಟಿಷ್ ಪ್ರಧಾನಿಯೆಂಬುವುದು ಖಚಿತವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಸಕತ್ ಆಕ್ಟಿವ್ ಆಗಿದೆ. ಅಲ್ಲಿ ಹಾಸ್ಯಮಯವಾದ ಚರ್ಚೆ ಸೃಷ್ಟಿ ಆಗಿದೆ. ಇದೀಗ ನೆಟ್ಟಿಗರು ರಿಷಿ ಸುನಕ್ ಪ್ರಧಾನಿಯಾಗಿರುವುದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಯಾಕಿರಬಹುದು ಕಾರಣ ?

 

ಬ್ರಿಟಿಷ್ ಪ್ರಧಾನಿ ಆದದ್ದು ರಿಷಿ ಸುನಾಕ್, ಶುಭಾಶಯ ನೀಡುತ್ತಿರುವುದು ಭಾರತೀಯ ಕ್ರಿಕೆಟ್ ನ ಸ್ಪೀಡ್ ಬೌಲರ್ ಆಶಿಶ್ ನೆಹ್ರಾಗೆ !!! ಇದಕ್ಕೆ ಕಾರಣ ಏನಪ್ಪಾ ಅಂದರೆ, ಇವರಿಬ್ಬರ ಮುಖದ ಹೋಲಿಕೆಯಲ್ಲಿ ಇರುವ ಅಗಾಧ ಸಾಮ್ಯತೆ !

ಸಾಮಾಜಿಕ ಜಾಲತಾಣದಲ್ಲಿಯಂತೂ ರಿಷಿ ಸುನಕ್ ಹಾಗೂ ಆಶಿಶ್ ನೆಹ್ರಾ ಫೋಟೋಗಳನ್ನೂ ಅಕ್ಕ ಪಕ್ಕ ಹಾಕಿ ತಾಳೆ ನೋಡು ತಮಾಷೆ ಮಾಡುತ್ತಿದ್ದಾರೆ. ಅರೆ, ಹೌದಲ್ಲ, ಇಬ್ರೂ ಒಂದೇ ಥರ ಇದ್ದಾರೆ ಅಂತಿದ್ದಾರೆ. ಜತೆಗೆ ತಮಗಿಷ್ಟ ಬಂದಂತಹಾ ತಮಾಷೆಯ ಶೀರ್ಷಿಕೆ ನೀಡಿ ಜಾಲತಾಣದಲ್ಲಿ ತೇಲಿ ಬಿಡುತ್ತಿದ್ದಾರೆ. ಒಬ್ಬರಂತೂ ರಿಷಿ ಸುನಕ್ ಫೋಟೋ ಹಾಕಿ, ಬ್ರಿಟನ್‌ನ ನೂತನ ಪ್ರಧಾನಿ ಆಶಿಶ್ ನೆಹ್ರಾಗೆ ಶುಭಾಶಯ ಎಂದು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು ಗೌಂಡ್‌ನಲ್ಲಿ ಬೌಲಿಂಗ್ ಮಾಡಿಕೊಂಡಿದ್ದ ನೆಹ್ರಾ, ಬ್ರಿಟನ್ ಪ್ರಧಾನಿ ಯಾವಾಗ ಆದರು ಎಂದು ತಮಾಷೆಯಾಡಿದ್ದಾರೆ. ತಮಾಷೆ ಜಾರಿಯಲ್ಲಿದೆ….!

ಆಗಿನ ಸ್ಪೀಡ್ ಬೌಲರ್ ಆಶಿಶ್ ನೆಹ್ರಾ ಈಗ ಐಪಿಎಲ್‌ನಲ್ಲಿ ಗುಜರಾತ್ ತಂಡದ ಕೋಚ್. ಈ ಸಮಯದ ಫೋಟೋವೊಂದನ್ನು ಪೋಸ್ಟ್ ಮಾಡಿ, ನೆಹ್ರಾ ಐಪಿಎಲ್ ಸಮಯದಲ್ಲಿ ಯುಕೆ ಪ್ರಧಾನಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಟ್ವಿಟರ್‌ನಲ್ಲಂತೂ ಒಬ್ಬರು, ‘ 2003 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಕಬಳಿಸಿದ್ದ ನೆಹ್ರಾ, ಇದೀಗ 2022 ರಲ್ಲಿ ಬ್ರಿಟನ್‌ನ ಪ್ರಧಾನಿ. ಈವರೆಗಿನ ಅವರ ಪಯಣ ಅದ್ಭುತವಾದದ್ದು. ನಿಮಗಿದೋ ,ಶುಭಾಶಯ ‘ ಎಂದು ಸ್ವಾರಸ್ಯಕರವಾಗಿ ಪೋಸ್ಟ್ ಮಾಡಿದ್ದಾರೆ.

ಇನ್ನೊಬ್ಬರು, DJSingh ಎಂಬವರು ಟ್ವಿಟರ್‌ನಲ್ಲಿ ತಮಾಷೆಯಾಗಿ ಶುಭಾಶಯ ತಿಳಿಸುತ್ತಾ, ಆಶಿಶ್ ನೆಹ್ರಾ ಹಾಗೂ ರಿಷಿ ಸುನಕ್- ಈ ಇಬ್ಬರೂ ಅಂದು ಕುಂಭ ಮೇಳದ ಗೌಜಿಯಲ್ಲಿ ಬೇರ್ಪಟ್ಟು ಕಾಣೆಯಾದ ಸಹೋದರರಂತೆ ಕಾಣುತ್ತಿದ್ದಾರೆ ಎಂದು ಕಿಚಾಯಿಸಿದ್ದಾರೆ. ಅಷ್ಟರ ಮಟ್ಟಿಗೆ ಇದೆ ಅವರಿಬ್ಬರ ನಡುವಿನ ಹೋಲಿಕೆ.

Leave A Reply

Your email address will not be published.