Rashmika Mandanna: ತನ್ನನ್ನು ಲಾಂಚ್ ಮಾಡಿದ ಕಿರಿಕ್ ಪಾರ್ಟಿ ಪ್ರೊಡಕ್ಷನ್ ಹೌಸ್ ಬಗ್ಗೆ ಹೇಳೋಕೆ ರಶ್ಮಿಕಾಗೆ ಹಿಂಜರಿಕೆ! ಕೃತಜ್ಞತೆ ಇಲ್ಲದವಳೆಂದು ಹಿಗ್ಗಾಮುಗ್ಗ ಟ್ರೋಲ್

ಟ್ರೋಲ್ ಹಾಗೂ ನಟಿ ರಶ್ಮಿಕಾಗೆ ಅವಿನಾಭಾವ ಸಂಬಂಧ ಇದೆ. ಏಕೆಂದರೆ ಈಗ ಈ ನಟಿ ಟ್ರೋಲ್ ಆಗ್ತಾ ಇರೋದು ತನಗೊಂದು ಬ್ರೇಕ್ ಕೊಟ್ಟ ಸಿನಿಮಾದ ಕುರಿತು ಹೇಳದೇ ಧಿಮಾಕು ತೋರಿಸಿದ ಬಗೆ. ಗೊತ್ತೋ ಗೊತ್ತಿಲ್ಲದೆನೋ ಒಂದು ಹೇಳಿಕೆ ಕೊಡುವುದು ಆ ಹೇಳಿಕೆನ ಜನರು ಮತ್ತೊಂದು ರೀತಿಯಲ್ಲಿ ಅರ್ಥ ಮಾಡಿಸಿಕೊಳ್ಳುವುದು ಹೀಗೆ ಪದೇ ಪದೇ ನಡೆದು ರಶ್ಮಿಕಾ ಟ್ರೋಲ್ ಕ್ವೀನ್ ಆಗಿಬಿಟ್ಟಿದ್ದಾರೆ.

ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹಿಂದಿ ಜನಪ್ರಿಯ ಶೋ ಕರ್ಲಿ ಟೇಲ್ಸ್‌ನಲ್ಲಿ ತಮ್ಮ ಸಿನಿಮಾ ಜರ್ನಿ ಮತ್ತು ಲೈಫ್‌ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ರಶ್ಮಿಕಾ ಚಿತ್ರರಂಗಕ್ಕೆ ಕಾಲಿಡಲು ಅಡಿಪಾಯ ಹಾಕಿಕೊಟ್ಟ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳುವುದಕ್ಕೆ ಇಷ್ಟಪಡದೆ ತಮ್ಮ‌ಸಿನಿ ಜರ್ನಿ ಬಗ್ಗೆ ಮಾತಾಡಿದ್ದಾರೆ. ನಟಿಯ ಈ ನಡೆಗೆ ಕನ್ನಡಿಗರು ಮಾತ್ರ ಭಾರೀ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

‘ಕಾಲೇಜು ದಿನಗಳಲ್ಲಿ ನಾನು ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದೆ ಏಕೆಂದರೆ ನನ್ನ ಟೀಚರ್ ಒಬ್ಬರು ಹೋಗಿ ಒಮ್ಮೆ ಪ್ರಯತ್ನಿಸು ಎಂದು ಹೇಳಿದ್ದರು. ನನಗೆ ಇಷ್ಟವಿಲ್ಲದಿದ್ದರೂ ಸ್ಪರ್ಧಿಸಿದೆ. ಮೊದಲು ಸ್ಟೇಟ್ ಲೆವೆಲ್‌ನಲ್ಲಿ ಸ್ಪರ್ಧೆ ಇತ್ತು ಆನಂತರ ನ್ಯಾಷನಲ್ ಲೆವೆಲ್‌ನಲ್ಲಿತ್ತು ಆಮೇಲೆ ನಾನು ಟೈಟಲ್ ಪಡೆದುಕೊಂಡೆ. ಇದೆಲ್ಲಾ ಆದ ಮೇಲೆ ನನ್ನ ಫೋಟೋ ಮತ್ತು ಹೆಸರನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮೊದಲ ಪೇಜ್‌ನಲ್ಲಿ ಹಾಕಿದ್ದರು. ನಂತರ ನನ್ನ ನಾರ್ಮಲ್ ಕಾಲೇಜ್ ಲೈಫ್ ನಡೆಯುತ್ತಿತ್ತು.’ ಎಂದು ಜರ್ನಿ ಆರಂಭದ ದಿನಗಳನ್ನು ಮಾತಾಡಿದ್ದಾರೆ.

ಆಗ ನನಗೆ ಈ ಪ್ರೊಡಕ್ಷನ್ ಹೌಸ್‌ನಿಂದ ಕಾಲ್ ಬಂತು ಎಂದು ಹೇಳಿದ್ದಾರೆ. ಈ ಸಂದರ್ಭ ರಶ್ಮಿಕಾ ವ್ಯಂಗ್ಯವಾಗಿ ಎರಡು ಕೈಯನ್ನು ಎತ್ತಿ ವ್ಯಂಗ್ಯ ಸಿಂಬಲ್ ಕೊಟ್ಟಿದ್ದು ಈಗ ನೆಟ್ಟಿಗರು ನಟಿಯನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದ್ದಾರೆ.

https://www.instagram.com/reel/CkF6puqL4HZ/?utm_source=ig_web_copy_link

Leave A Reply

Your email address will not be published.