ಉಪ್ಪಿನಂಗಡಿ : ತನಗೆ ಬೇಕಿದ್ದ ಸ್ಥಳದಲ್ಲಿ ಬಸ್ ನಿಲ್ಲಿಸಿಲ್ಲ ಎಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದ ಕುಡುಕ

Share the Article

ಉಪ್ಪಿನಂಗಡಿ:ವ್ಯಕ್ತಿಯೋರ್ವ ತನಗೆ ಬೇಕಿದ್ದ ಸ್ಥಳದಲ್ಲಿ ಬಸ್ ನಿಲ್ಲಿಸಿಲ್ಲ ಎಂದು ಕೆಎಸ್‌ಆರ್‌ಟಿಸಿ ಬಸ್ ಗೆ ಕಲ್ಲೆಸೆದ ಘಟನೆ ಘಟನೆ‌‌ ಉಪ್ಪಿನಂಗಡಿಯಲ್ಲಿ ನಡೆದಿದೆ.

ಅ.24 ರಂದು ಘಟನೆ ನಡೆದಿದ್ದು,ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಬಸ್ ನ ಗಾಜಿಗೆ ಕಲ್ಲು ಎಸೆದು ಪುಡಿ ಮಾಡಲಾಗಿದೆ.

ಉಪ್ಪಿನಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಈತ ತನಗೆ ಬೇಕಾದ ಸ್ಥಳದಲ್ಲಿ ಬಸ್ ನಿಲ್ಲಿಸಲು ಸೂಚಿಸಿದ್ದಾನೆ. ಬಸ್ ನಿಲ್ಲದೆ ಮುಂದೆ ಸಾಗಿದೆ‌. ಬಳಿಕ ಬಸ್‌ ನಿಲ್ಲಿಸಿದ ಜಾಗದಲ್ಲಿ ಬಸ್ ನಿಂದ ಇಳಿದು ಕಾರ್ಮಿಕ ಬಸ್‌ನ ಗಾಜಿಗೆ ಕಲ್ಲು ಎಸೆದಿರುವ ಬಗ್ಗೆ ವರದಿಯಾಗಿದೆ.

Leave A Reply