ಯಾರು ಕರೆದ್ರೂ ನಿರೂಪಕಿ ಅನುಶ್ರೀ ‘ ಎಲ್ಲಿಗೂ ‘ ‘ ಬರಲ್ಲ ‘ವಂತೆ । ‘ ಅವಳು ಬರಲ್ಲ ಬಿಡೋ.. ಬರೀ ಐ ಲವ್‌ ಯೂ ಅಂತಾಳೆ ಅಷ್ಟೇ’ ಎಂದ ಕ್ರೇಜಿಸ್ಟಾರ್ ರವಿಚಂದ್ರನ್

ಖ್ಯಾತ ನಿರೂಪಕಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕರ್ನಾಟಕದ ಮನೆ ಮಗಳು ಅನು ಎಲ್ಲರಿಗೂ ಚಿರಪರಿಚಿತ. ಸುಂದರ ಚೆಲುವೆಯ ಮುದ್ದಾದ ಮಾತು ಕೇಳದೆ ಕನ್ನಡಿಗರು ರಾತ್ರಿ ಮಲಗುವುದೇ ಇಲ್ಲ. ಹಾಗೆ, ಅನುಶ್ರೀ ಎಲ್ಲರಿಗೂ ಅಚ್ಚುಮೆಚ್ಚು. ಸದ್ಯ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರೆಬಲ್‌ ಸ್ಟಾರ್‌ ಪುತ್ರ ಅಭಿಷೇಕ್‌ ಇಬ್ಬರೂ ಸೇರಿ ಅನುಶ್ರೀ ಕಾಲೆಳೆದಿದ್ದು ನೋಡಲು ಮಸ್ತ್‌ ಮಜಾ ನೀಡುತ್ತಿದೆ.

 

ಜೀ ಕುಟುಂಬ ಅವಾರ್ಡ್ಸ್-2022ʼ ಕಾರ್ಯಕ್ರಮದಲ್ಲಿ ಒಂದು ರಸಮಯ ಸನ್ನಿವೇಶವನ್ನು ಸೃಷ್ಟಿಸಿದ್ದರು ಕ್ರೇಜಿಸ್ಟಾರ್ ರವಿಚಂದ್ರನ್. ಅಲ್ಲಿ ರವಿಚಂದ್ರನ್ ಅವರು ಕನ್ನಡದದ ಖ್ಯಾತ ಕ್ಯೂಟ್ ನಿರೂಪಕಿ ಅನುಶ್ರೀಯಾ ಕಾಲನ್ನು ಹಿಡಿಯದೇ, ಕಾಲೆಳೆದಿದ್ದಾರೆ ! ಕರಾವಳಿಯ ಈ ಸುಂದರ ಚೆಲುವೆಯ ಮುದ್ದಾದ ಮಾತು ಕೇಳದೆ ಕನ್ನಡಿಗರು ರಾತ್ರಿ ಮಲಗುವುದೇ ಇಲ್ಲ. ಮಾತು ಕೇಳಿ ಮಲಗಿದರಂತೂ ಅವತ್ತು ನಿದ್ರೆ ನಿಕಾಲಿ. ಹಾಗೆ ಆಕೆ ಎಲ್ಲಾವರ್ಗಕ್ಕೂ ಇಷ್ಟವಾಗುವ ನಟಿ. ಸದ್ಯ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರೆಬಲ್‌ ಸ್ಟಾರ್‌ ಪುತ್ರ ಅಭಿಷೇಕ್‌ ಇಬ್ಬರೂ ಸೇರಿ ಅನುಶ್ರೀ ಕಾಲೆಳೆದಿದ್ದು ನೋಡಲು ಮಸ್ತ್‌ ಮಜಾ ನೀಡಿದೆ.

ಅವತ್ತು ಕನ್ನಡದದ ʼಜೀ ಕುಟುಂಬ ಅವಾರ್ಡ್ಸ್-2022ʼ ಕಾರ್ಯಕ್ರಮ. ರಸಿಕ, ಮದನ ಮಲ್ಲ ರವಿಚಂದ್ರನ್ ಮತ್ತು ಅಭಿಷೇಕ್‌ ಅಂಬರೀಷ್‌ ಇಬ್ಬರೂ ಅಲಿ ಸಮಾಚಾರಭದಲ್ಲಿ ಭಾಗವಹಿಸಿದ್ದರು. ವೇದಿಕೆ ಮೇಲೆ ಅಭಿಷೇಕ್‌ ಬರುತ್ತಿದ್ದಂತೆ ” ನಮಸ್ಕಾರ ಅಣ್ಣ, ನಮಸ್ಕಾರ ರವಿಮಾಮ ಹಾಗೂ ನಮಸ್ತೆ ಅನುಶ್ರೀಯವರೇ ” ಅಂತ ಹೇಳುತ್ತಾರೆ. ಈ ಮಾತಿಗೆ ನಮ್ಮ ಮಲ್ಲ, ” ಅದನ್ನ ಮಾತ್ರ ಮೆಲ್ಲ ಹೇಳಪ್ಪಾ…. ಏನೇ ಮಾಡಿದ್ರೂ ಅವಳು ಎಲ್ಲಿಗೂ ಬರಲ್ಲ ಬಿಡೋ…..ದೂರದಿಂದಲೇ ಬರೀ ಐ ಲವ್‌ ಯೂ, ಐ ಲವ್‌ ಯೂ ಅಂತಾಳೆ. ಸ್ಟೇಜ್‌ ಮೇಲೆ ನೋಡಿದ್ಯಲ್ಲ, ಶಿವರಾಜ್‌ ಕುಮಾರ್‌ಗೂ ಐ ಲವ್‌ ಯೂ ಅಂತಾಳೆ ನನಗೂ ಅದೇ ಐ ಲವ್‌ ಯೂ ಅಂತಾಳೆ.” ಹೀಗೆ ಸಿಕ್ಕ ಸಿಕ್ಕವರಿಗೆ ಐ ಲವ್‌ ಯೂ ಅಂತಾಳೆ ಅಂತ ಅನುಗೆ ಕಿಚಾಯಿಸಿದರು.

ಆಗ ಅನು ಮಧ್ಯ ಪ್ರವೇಶಿಸಿ ” ನಿಮಗೆ ಹಾಗೆ ಅನಿಸುತ್ತದಾ ಅಭಿಷೇಕ್‌ ಎಂದು ವಯ್ಯಾರ ತೋರಿದ್ದಳು ಅನುಶ್ರೀ ! ಅದಕ್ಕೆಲ್ಲ ಅಷ್ಟು ಕರಗದ ಅಭಿಷೇಕ್ ”ಸ್ವಲ್ಪ ಸ್ವಲ್ಪ ಹಾಗೆ ಅನಿಸುತ್ತೇ ” ಎಂದಿದ್ದಾರೆ. ಸ್ಟೇಜ್ ನಲ್ಲಿ ಕಾಮಿಡಿ ಸೃಷ್ಟಿಯಾಗಿ ಅಲ್ಲಿ ಕಾರ್ಯಕ್ರಮದಲ್ಲಿದ್ದ ಜನರೆಲ್ಲರೂ ನಕ್ಕಿದ್ದಾರೆ. ಆಗ ಅನುಶ್ರೀ ನಾವೆಲ್ಲಾ ಅಭಿಮಾನಿಗಳು ಯಾರನ್ನಾದ್ರೂ ಇಷ್ಟಾ ಪಟ್ರೆ, ” ಐ ಲವ್‌ ಯೂ ಅಂತ ಹೇಳ್ತೀವಿ; ಈಗ ನೀವು ಅದ್ಭುತವಾಗಿ ನಟನೆ ಮಾಡ್ತೀರಾ, ಯಂಗ್‌ ರೆಬಲ್‌ ಸ್ಟಾರ್‌ ! ರವಿ ಸರ್ ಹೆಸರಿಗೆ ಮಾತ್ರ ಬ್ಯಾಡ್‌ ಮ್ಯಾನರಿಸಮ್ ನ ಸಿನಿಮಾ ಮಾಡ್ತಾರೆ. ಅದ್ರೆ ಅವರು ಫುಲ್‌ ಗುಡ್‌ ಮ್ಯಾನ್‌. ಸೋ ವಿ ವಾಂಟ್‌ ಸೇ ಅಬಿಷೇಕ್‌ ವಿ ಲವ್‌ ಯೂ ” ಎಂದು ” ಬರ್ಲಿ ಚಪ್ಪಾಳೆ ” ಎಂದು ಸೇರಿಸಿದಳು. ಎಲ್ಲಿ ಹೇಗೆ ಮಾತಾಡ್ಬೇಕು ಅಂತ ಇವಳನ್ನು ಕೇಳಿ ಕಲಿಬೇಕು ಅಂದುಕೊಂಡಿತು ಅಲ್ಲಿದ್ದ ಸನ ಸಮೂಹ. ಒಟ್ಟಾರೆ, ” ಅನುಶ್ರೀ ಎಲ್ಲಿಗೆ ಯಾರು ಕರೆದ್ರೂ ಬರಲ್ಲ, ಸುಮ್ನೆ ಅವಳ ಬಗ್ಗೆ ಧ್ಯಾನಿಸುತ್ತ ಟೈಮ್ ವೇಸ್ಟ್ ಮಾಡ್ಬೇಡಿ’ ಅನ್ನುತ್ತಾ ಈ ವಿಷಯವನ್ನು ಇಲ್ಲಿಗೆ ಮುಗಿಸುತ್ತಿದ್ದೇವೆ.

Leave A Reply

Your email address will not be published.