ರಾಜ್ಯದಲ್ಲಿನ ಬರೊಬ್ಬರಿ 10,899 ಮಸೀದಿಗಳಿಗೆ ಲೌಡ್ ಸ್ಪೀಕರ್ ಬಳಕೆಗೆ ರಾಜ್ಯ ಸರ್ಕಾರ ಅನುಮತಿ :

ಇಲ್ಲಿಯವರೆಗೆ ಲೌಡ್ ಸ್ಪೀಕರ್ ಬಳಕೆಯಿಲ್ಲದೆ ಮಸೀದಿಯ ಸೊಬಗು ಕಮ್ಮಿಯಾಗಿತ್ತು.ಈಗ ಧ್ವನಿವರ್ಧಕ ಬಳಕೆಗೆ ಒಟ್ಟಾಗಿ 10,899 ಮಸೀದಿಗಳಿಗೆ ಅನುಮತಿ ನೀಡಿದೆ ರಾಜ್ಯ ಸರ್ಕಾರ.ಇದರಿಂದ ಮಸೀದಿಯ ಕಳೆ ಇನ್ನಷ್ಟು ಹೆಚ್ಚಾಯಿತು.ಲೌಡ್ ಸ್ಪೀಕರ್ ನಿಂದ ತಮ್ಮ ಮಸೀದಿಯ ಕಾರ್ಯಕ್ರಮಗಳು ಊರ ತುಂಬಾ ಪಸರಿಸುತ್ತದೆ.

ಹಿಂದೂ ಸಂಘಟನೆಗಳು ಮಸೀದಿಗಳಲ್ಲಿ ನಡೆಯುವ ನಮಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮಸೀದಿ, ದೇವಸ್ಥಾನ ಹಾಗೂ ಚರ್ಚ್ ಗಳಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಬೇಕು ಹಾಗೂ ಅದರ ಜೊತೆಗೆ ಲೌಡ್ ಸ್ಪೀಕರ್ ಬಳಕೆಗೆ ನಿಯಮಗಳನ್ನು ರೂಪಿಸಬೇಕು ಎಂದು ಭಾರಿ ಚರ್ಚೆ ನಡೆದಿತ್ತು.ಈ ಪ್ರಯುಕ್ತ ಮಸೀದಿ, ದೇವಸ್ಥಾನ ಹಾಗೂ ಚರ್ಚ್ ಗಳಲ್ಲಿ ಲೈಸೆನ್ಸ್ ಇಲ್ಲದೆ ಧ್ವನಿವರ್ಧಕ ಬಳಸಬಾರದು ನಿರ್ಬಂಧ ಹಾಕಲಾಗಿತ್ತು.

ಮಸೀದಿ, ಮಂದಿರ ಹಾಗೂ ಚರ್ಚ್ ಗಳಲ್ಲಿ ಧ್ವನಿವರ್ದಕ ಬಳಕೆ ಮಾಡಲು 17 ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಬಂದಿದ್ದವು.ಇದರಲ್ಲಿ 10,899 ಮಸೀದಿಗಳು, 3 ಸಾವಿರಕ್ಕೂ ಅಧಿಕ ಹಿಂದೂ ದೇವಾಲಯ 1,400 ಕ್ಕೂ ಹೆಚ್ಚು ಚರ್ಚ್ ಗಳಿಗೆ ಸರ್ಕಾರ ಅನುಮತಿ ನೀಡಿದೆ.ಇನ್ನು ಸರ್ಕಾರ 2 ವರ್ಷದ ಅವಧಿಗೆ ಅನುಮತಿ ನೀಡಿದ್ದು, ಅನುಮತಿ ಪಡೆದ ಧಾರ್ಮಿಕ ಕೇಂದ್ರಗಳು 450 ರೂಪಾಯಿ ಮೌಲ್ಯವನ್ನು ಪಾವತಿಸಬೇಕಿದೆ.

Leave A Reply

Your email address will not be published.