ಚೂಯಿಂಗ್ ಗಮ್ ಅಗಿಯೋದು ಕೆಟ್ಟ ಅಭ್ಯಾಸನಾ ? ಅಲ್ಲವೆಂದಾದರೆ ಇದರ ಪ್ರಯೋಜನ ಏನು? ಇಲ್ಲಿದೆ ಎಲ್ಲಾ ಉತ್ತರ

ಚಾಕಲೇಟ್ ಬಿಟ್ಟರೆ ಹೆಚ್ಚಿನವರ ನೆಚ್ಚಿನ ಚೂಯಿಂಗ್ ಗಮ್ ಏಷ್ಟೋ ಜನರ ಪಾಲಿಗೆ ವರದಾನದಂತೆ, ಧೂಮಪಾನದ ಜೊತೆಗೆ ಕುಡಿಯುವ ಅಭ್ಯಾಸ ಕರಗತ ಮಾಡಿಕೊಂಡವರಿಗೆ ಇತರರಿಗೆ ಕಿರಿಕಿರಿ ಆಗಬಾರದು ಇಲ್ಲವೆ ತಮ್ಮ ಬಾಯಿಯ ದುರ್ವಾಸನೆ ದೂರ ಮಾಡಿಕೊಳ್ಳುವ ನೆಪದಲ್ಲಿ ಚೂಯಿಂಗ್ ಗಮ್ ಜಗಿಯುತ್ತಾರೆ.

ಪ್ರತಿಯೊಂದು ವಿಚಾರದಲ್ಲೂ ಒಳಿತು ಕೆಡುಕುಗಳಿರುವಂತೆ ಚೂಯಿಂಗ್ ಗಮ್ ಅಗಿಯುವುದರಿಂದ ಪ್ರಯೋಜನದ ಜೊತೆಗೆ ಕೆಲ ಸಮಸ್ಯೆಗಳನ್ನು ಒಳಗೊಂಡಿದೆ.

ಚೂಯಿಂಗ್‌ ಗಮ್ ನಿಂದ ದುರ್ವಾಸನೆ ದೂರವಾಗುವ ವಿಚಾರ ಹೆಚ್ಚಿನವರಿಗೆ ತಿಳಿದಿರಬಹುದು. ಇದರ ಜೊತೆಗೆ
ಚೂಯಿಂಗ್ ಗಮ್ ಅನೇಕ ವಿಧದ ವಿಟಮಿನ್ಗಳನ್ನು ಹೊಂದಿದ್ದು, ಬಾಯಿಯಲ್ಲಿ ಕರಗುತ್ತದೆ. ಇದಲ್ಲದೆ ಚೂಯಿಂಗ್ ಗಮ್ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.


ಚ್ಯೂಯಿಂಗ್​ ಗಮ್​ನಲ್ಲಿರುವ ಸಿಹಿಕಾರಕಗಳು ಒಸಡುಗಳಿಗೆ ಹಾನಿಯುಂಟು ಮಾಡುತ್ತದೆ ಹಾಗಾಗಿ ಚ್ಯೂಯಿಂಗ್​ ಗಮ್​ ಅನ್ನು ಹೆಚ್ಚು ತಿನ್ನುವುದು ಸೂಕ್ತವಲ್ಲವೆಂದು ಹೇಳಲಾಗುತ್ತದೆ ಆದರೂ ಕೂಡ ಕೆಲವು ಸಕಾರಾತ್ಮಕ ಪರಿಣಾಮಗಳನ್ನು ಸಮ್ಮಿಳಿತವಾಗಿದ್ದು, ಚ್ಯೂಯಿಂಗ್​ ಗಮ್ ಆತಂಕ, ಒತ್ತಡ ನಿವಾರಣೆ, ಕೆಟ್ಟ ಉಸಿರನ್ನು ಕೂಡ ನಿವಾರಿಸಲು ಸಹಾಯ ಮಾಡುತ್ತದೆ.


ಚೂಯಿಂಗ್ ಗಮ್ ರಕ್ತದ ಹರಿವನ್ನು ಹೆಚ್ಚಿಸುವ ಕಾರ್ಯ ನಿರ್ವಹಿಸುತ್ತದೆ. ಇದರ ಜೊತೆಗೆ ಜ್ಞಾಪಕಶಕ್ತಿಯನ್ನು ಸುಧಾರಿಸುತ್ತದೆ. ಚೂಯಿಂಗ್ ಗಮ್ ನಿದ್ರೆ ಬರದಂತೆ ಎಚ್ಚರವಾಗಿರಲು ಸಹಾಯ ಮಾಡುತ್ತದೆ.


ಏಕಾಗ್ರತೆ (Concentration) ತೋರಲು ಸಾಧ್ಯವಾಗದಿದ್ದಾಗ ಚೂಯಿಂಗ್ ಗಮ್ ಅಗಿದರೆ ಕೆಲಸದ ಮೇಲೆ ಉತ್ತಮವಾಗಿ ಗಮನಹರಿಸಲು ಮತ್ತು ಗೊಂದಲವನ್ನು ತಡೆಯಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಗಾಯಗಳು ಬೇಗ ಗುಣವಾಗಲು ಸಹಾಯ ಮಾಡುತ್ತದೆ.


ಇತ್ತೀಚಿನ ಸಂಶೋಧನೆಯೊಂದು ಚೂಯಿಂಗ್ ಗಮ್ ಅನೇಕ ವಿಧದ ಜೀವಸತ್ವಗಳನ್ನು ಹೊಂದಿರುತ್ತದೆ ಎಂದು ಹೇಳಿದ್ದು, ಇದು ಜೀರ್ಣಕ್ರಿಯೆಯನ್ನು ಬಲಪಡಿಸುವ ಜೊತೆಗೆ ಆಯಾಸವನ್ನು ಕೂಡ ನಿವಾರಿಸುತ್ತದೆ. ಹಾಗೂ ಒತ್ತಡದ ಹಾರ್ಮೋನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೆಚ್ಚು ಕಾಲ ಚೂಯಿಂಗ್ ಗಮ್ ಅಗಿಯುವ ಅಭ್ಯಾಸ ದಿಂದ ಲಾಲಾರಸ ಹೆಚ್ಚು ಉತ್ಪಾದನೆಯಾಗುತ್ತದೆ. ಬಾಯಿಯ ಲಾಲಾರಸವು ಹಲ್ಲು ಮತ್ತು ಬಾಯಿಗೆ ರಕ್ಷಣಾತ್ಮಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದಲ್ಲದೆ, ಇದರ ಜೊತೆಗೆ ಹಲ್ಲುಗಳಿಗೆ ಹಾನಿ ಉಂಟಾಗುವುದಿಲ್ಲ.


ಆದರೆ ಕೆಲ ಸಂಶೋಧನೆ ಪ್ರಕಾರ ಚೂಯಿಂಗ್ ಗಮ್ ತಿಂದರೆ ದುರ್ವಾಸನೆ ಕಡಿಮೆಯಾಗುವ ಬದಲಿಗೆ ಕ್ರಮೇಣವಾಗಿ ಹೆಚ್ಚುವ ಜೊತೆಗೆ ಆ ಕ್ಷಣಕ್ಕೆ ಬಾಯಿ ವಾಸನೆ ಕಡಿಮೆಯಾದಂತೆ ಕಂಡು ಬಂದರೂ, ಬಾಯಿಯಲ್ಲಿ ಬ್ಯಾಕ್ಟಿರೀಯಾಗಳು ಹೆಚ್ಚಾಗಿ, ಹುಳುಕು ಹಲ್ಲಿಗೂ ಕಾರಣವಾಗುತ್ತದೆ.


ಇದರಲ್ಲಿ ಬಳಸುವ ಕೃತಕ ಸಿಹಿ ಪದಾರ್ಥಗಳು ಬ್ರೈನ್ ಟ್ಯೂಮರ್‌ ಹಾಗೂ ಕ್ಯಾನ್ಸರ್‌ಗೂ ಕಾರಣವಾಗುವ ಸಾದ್ಯತೆ ಇದೆ. ಜಗಿಯುವಾಗ ಅದಲ್ಲಿರುವ ರಸ ಎಂಜಿಲಿನೊಂದಿಗೆ ಹೊಟ್ಟೆಗೆ ಸೇರಿ ಅಜೀರ್ಣವಾಗುವಂತೆ ಮಾಡುವುದರಿಂದ ದೇಹದ ತೂಕ ಕೂಡ ಹೆಚ್ಚುತ್ತದೆ.


ಅತಿಯಾದರೆ ಅಮೃತವೂ ವಿಷವೇ ಎಂಬ ಮಾತಿನಂತೆ ಎಲ್ಲವೂ ಹಿತ ಮಿತವಾಗಿದ್ದರೆ ಒಳಿತು.. ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಎದುರಾಗುವುದು ನಿಶ್ಚಿತ.

Leave A Reply

Your email address will not be published.