ಸಮಸ್ಯೆ ಹೇಳಲು ಬಂದ ಮಹಿಳೆಗೆ ಸಚಿವ ವಿ ಸೋಮಣ್ಣ ಅವರಿಂದ ಕಪಾಳಮೋಕ್ಷ!!!
ನಮಗೆ ಅತ್ಯಂತ ಅಗತ್ಯ ಇರುವ ಕೆಲವೊಂದು ಮೂಲಭೂತ ಸಮಸ್ಯೆಗಳನ್ನು ಪಡೆಯಲು ಮತ್ತು ಸಮಾಜದಲ್ಲಿ ಸಮಾನತೆ ಕಾಯ್ದುಕೊಳ್ಳಲು ಅಧಿಕಾರಿಗಳು, ಮಂತ್ರಿಗಳು, ಸಚಿವರು ಹೀಗೆ ಆಯಾಯ ವಿಭಾಗಗಳಿಗೆ ಇವರುಗಳನ್ನು ಒಮ್ಮತದಿಂದ ನೇಮಿಸುತ್ತೇವೆ. ಆದರೆ ಅಧಿಕಾರ ಅನ್ನೋದು ಅಷ್ಟೇ ತಾಳ್ಮೆಯಿಂದ ನಡೆಸಿಕೊಂಡು ಹೋಗಬೇಕಾಗುತ್ತದೆ. ಯಾಕೆಂದರೆ ಒಂದು ಗಾದೆಯ ಪ್ರಕಾರ ಹಾವು ಸಾಯಲೂ ಬಾರದು, ಕೋಲು ಮುರಿಯಲೂ ಬಾರದು, ಹಾಗೆಯೇ ಅಧಿಕಾರವನ್ನು ಸಚಿವರು ನಿಭಾಯಿಸಿಕೊಂಡು ಹೋಗುವುದು ಅವರ ಜವಾಬ್ದಾರಿ.
ಆದರೆ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವರು ಒಬ್ಬರು ಕಪಾಳಮೋಕ್ಷ ಮಾಡಿರುವಂತಹ ಘಟನೆ ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿನ್ನೆ (ಅ.22) ಸಂಜೆ ನಡೆದಿದೆ.
ಹೌದು ಚಾಮರಾಜನಗರ ದ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನ ಅ.22 ರಂದು ಸಂಜೆ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿರುತ್ತಾರೆ.
ಗ್ರಾಮದಲ್ಲಿ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಮಧ್ಯಾಹ್ನ 3.30ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಬಾರದೆ ಸಂಜೆ 6:30 ಕ್ಕೆ ಸಚಿವರು ಆಗಮಿಸಿದ್ದಾರೆ. ಇದರಿಂದಾಗಿ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಈ ಸಮಯದಲ್ಲಿ ತನ್ನ ಸಮಸ್ಯೆ ಹೇಳಿಕೊಳ್ಳಲು ಮಹಿಳೆ ಓರ್ವರು ಸಚಿವರ ಬಳಿ ತೆರಳಿದ್ದಾರೆ. ಈ ವೇಳೆ ಏನು ಎತ್ತ ಎಂದು ನೋಡದೆ ಸಚಿವ ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ.
ಈ ಮೇಲಿನ ಘಟನೆ ನಂತರ ಪರಿಸ್ಥಿತಿಯನ್ನು ಪೋಲಿಸರು ಹತೋಟಿಗೆ ತಂದರು.