Kantara : ಕುಟುಂಬ ಸಮೇತ ‘ಕಾಂತಾರ’ ಸಿನಿಮಾ ವೀಕ್ಷಿಸಿದ ವೀರೇಂದ್ರ ಹೆಗ್ಗಡೆ | ಸಿನಿಮಾ ನೋಡಿ ಏನಂದ್ರು ಗೊತ್ತೇ?
ದೈವದ ಕಾರ್ಣಿಕ ಏನು ಎಂಬುದನ್ನು ತೋರಿಸಿದ ನಟ ರಿಷಬ್ ಶೆಟ್ಟಿ ಯವರಿಗೆ ಎಲ್ಲಾ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಜನ ಮೆಚ್ಚಿದ ಈ ಸಿನಿಮಾವನ್ನು ರಾಜಕಾರಣಿಗಳು, ಚಿತ್ರ ನಟರು ಹಾಡಿ ಕೊಂಡಾಡಿದ್ದರೆ.
ನಡೆದಾಡುವ ದೇವರು ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ.ಡಿ.ವೀರೆಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ಹಾಗೂ ಚಿತ್ರ ತಂಡದ ಕಲಾವಿದರೊಂದಿಗೆ ನಗರದ ಬಿಗ್ ಸಿನಿಮಾ ಮಂದಿರದಲ್ಲಿ ಶುಕ್ರವಾರ ಸಿನಿಮಾ ವೀಕ್ಷಿಸಿ ಮೆಚ್ಚುಗೆ ಪಡಿಸಿದ್ದಾರೆ.
ಖಾವಂದರು ಮಾತನಾಡಿ, ಸಿನಿಮಾ ನೋಡದೆ ತುಂಬ ದಿನಗಳಾಗಿತ್ತು. ಒಂದು ಪ್ರದೇಶದ ನಡೆ-ನುಡಿ , ಸಂಸ್ಕೃತಿ, ಆಚಾರ-ವಿಚಾರಗಳನ್ನೊಳಗೊಂಡು ಸಿನಿಮಾವು ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರದಿಂದ ಯುವಕರಿಗೆ ಹೊಸ ಕತೆ ಹಾಗೂ ಹಿಂದಿನ ನಂಬುಗೆಯ ಬಗ್ಗೆ ಸ್ಮರಿಸುತ್ತದೆ.
ನಟ ಚೇತನ್ ಬಗ್ಗೆ ಪ್ರತಿಕ್ರಿಯಿಸಿದ ಇವರು” ದೈವಾರಧನೆಯು ಧರ್ಮದ ಭಾಗ ಹೌದೋ ಅಲ್ಲವೊ ತಿಳಿದಿಲ್ಲ ಆದರೆ ಎರಡೂ ಜಿಲ್ಲೆಯಲ್ಲಿ ಆರಾಧನೆಯು ವ್ಯಾಪಕವಾಗಿ ಬೆಳೆದಿದೆ. ಧರ್ಮದ ಮೂಲ ಹುಡುಕಿದರೆ ಎಲ್ಲೂ ಸಿಗುವುದಿಲ್ಲ. ನಂಬಿಕೆ , ನಡವಳಿಕೆ, ಆರಾಧನೆ ಹಿಂದಿನಿಂದಲೂ ಬಂದ ಸಂಸ್ಕೃತಿ. ಚೇತನ್ ಅವರು ಹಿಂದೂ ಧರ್ಮದ ಸೂಕ್ಷ್ಮತೆಯನ್ನು ಯಾವ ರೀತಿ ನೋಡಿದ್ದಾರೆ ತಿಳಿದಿಲ್ಲ. ಮೂಲ ಸ್ವರೂಪ ತಿಳಿಯದೆ ಮಾತನಾಡಿದರೆ ಅದು ಬೇರೆಯೇ ಆಗುತ್ತದೆ. ಆದರೆ ನಾವು ದೈವಾರಾಧನೆ ಮಾಡಿ ದೈವಗಳಿಗೆ ಗೌರವ ಕೊಡುತ್ತೇವೆ. ದೈವ ಮೈ ಮೇಲೆ ಬಂದಾಗ ಆ ಮಾತನ್ನು ಪಾಲಿಸುತ್ತೇವೆ. ಧರ್ಮದ ಆಚರಣೆಯನ್ನು ವಿಮರ್ಶಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಇದೊಂದು ದೈವಾರಾಧನೆ ಚಿತ್ರವಾಗಿದ್ದು ಸತ್ಯ, ಧರ್ಮ, ನ್ಯಾಯವನ್ನು ಎತ್ತಿ ಹಿಡಿದಿದೆ. ದೈವಗಳು ಸತ್ಯ ಮತ್ತು ಧರ್ಮ ಹೊರತು ಪಡಿಸಿ ಯಾವುದಕ್ಕೂ ಬೆಂಬಲ ನೀಡುವುದಿಲ್ಲ ಎಂಬುದನ್ನು ಈ ಚಿತ್ರವು ತೋರಿಸಿದೆ. ಇದೊಂದು ಒಳ್ಳೆಯ ಸಂದೇಶ ಎಂದು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.