SSLC ವಿದ್ಯಾರ್ಥಿಗಳಿಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮಹತ್ವದ ಸುತ್ತೋಲೆ
2022-23 ಸಾಲಿನ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳು ಸಾಮಾನ್ಯ ವಿಷಯಗಳ ಜೊತೆ ಎರಡು ತಾಂತ್ರಿಕ ವಿಷಯಗಳನ್ನು ಅಭ್ಯಾಸ ಮಾಡಿ ಪರೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಆದೇಶಿಸಿದೆ.
ಈ ಕುರಿತು ಪರೀಕ್ಷಾ ಮಂಡಳಿ ನಿರ್ದೇಶಕರಾದ ಹೆಚ್ ಎನ್ ಗೋಪಾಲಕೃಷ್ಣ ಸುತ್ತೋಲೆ ಹೊರಡಿಸಿದ್ದು ಎರಡು ತಾಂತ್ರಿಕ ವಿಷಯಗಳಲ್ಲಿ ಒಂದು ಥಿಯರಿ ಮತ್ತೊಂದು ಪ್ರಾಯೋಗಿಕ ಪರೀಕ್ಷೆ ವಿಷಯವಾಗಿರುತ್ತದೆ. ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಪುನರಾವರ್ತಿ ಅಭ್ಯರ್ಥಿಗಳಿಗೆ ಈ ಕಛೇರಿ ಅಧಿಸೂಚನೆ ದಿನಾಂಕ 17-09-2022 ರ ಪುಟ ಸಂಖ್ಯೆ 29 ರಲ್ಲಿ ವಿವರಣೆ ನೀಡಿರುವಂತೆ ತಾಂತ್ರಿಕ ವಿಷಯ ಆಯ್ಕೆ ಮಾಡಿಕೊಳ್ಳತಕ್ಕದ್ದು ಎಂದು ಸೂಚನೆ ನೀಡಿದ್ದಾರೆ.
ಮುಂದುವರೆದು 2022-23 ನೇ ಸಾಲಿನ 10 ನೇ ತರಗತಿಯಲ್ಲಿ ಜೆಟಿಎಸ್ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಶಾಲಾ ವಿದ್ಯಾರ್ಥಿಗಳಿಗೆ ತಾಂತ್ರಿಕ ಇಲಾಖೆಯಲ್ಲಿ ಅಭಿವೃದ್ಧಿಪಡಿಸಿರುವ ಪರಿಷ್ಕೃತ ಪಠ್ಯ ಕ್ರಮವನ್ನು ಆಧರಿಸಿ ಪರೀಕ್ಷೆ ನಡೆಸಲಾಗುತ್ತದೆ ಎರಡು ತಾಂತ್ರಿಕ ವಿಷಯಗಳಲ್ಲಿ ಒಂದು ಥಿಯರಿ ಮತ್ತೊಂದು ಪ್ರಾಯೋಗಿಕ ಪರೀಕ್ಷೆ ವಿಷಯವಾಗಿರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.