Parle G : ಪೋಲೆಂಡ್‌ನ ಎರಡನೇ ಅತಿ ದೊಡ್ಡ ಬಿಸ್ಕೆಟ್ ಉತ್ಪಾದನಾ ಕಂಪನಿ ಖರೀದಿಗೆ ಮುಂದಾದ ಪಾರ್ಲೆ ಜಿ!!!
ಬಿಸ್ಕೆಟ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯರು ಸಹ ಬಿಸ್ಕೆಟ್ ತಿನ್ನುವುದರಲ್ಲಿ ಕಡಿಮೆ ಇಲ್ಲ. ಹಾಗಿರುವಾಗ ಪಾರ್ಲೆಜಿ ಕಂಪನಿಯು ಹೊಸ ಸುದ್ದಿಯನ್ನು ನೀಡಿದೆ.
ಹೌದು ಪಾರ್ಲೆ-ಜಿ ಬಿಸ್ಕೆಟ್ ಉತ್ಪಾದಕ ಸಂಸ್ಥೆ ಪಾರ್ಲೆ ಪ್ರೊಡಕ್ಟ್ಸ್ ಕಂಪನಿಯು 1993ರಲ್ಲಿ ಸ್ಥಾಪನೆಯಾದ ಡಾ .ಗೆರಾರ್ಡ್ ಕಂಪನಿಯು ಪೋಲೆಂಡ್‌ನ ಎರಡನೇ ಅತಿ ದೊಡ್ಡ ಬಿಸ್ಕೆಟ್ ಉತ್ಪಾದನಾ ಕಂಪನಿಯಾಗಿದ್ದು ಈ ಕಂಪನಿಯನ್ನು ಖರೀದಿಸಲು ಮುಂದಾಗಿದೆ.
ಹೌದು ಪಾರ್ಲೆ-ಜಿ ಬಿಸ್ಕೆಟ್ ಉತ್ಪಾದಕ ಸಂಸ್ಥೆ ಪಾರ್ಲೆ ಪ್ರೊಡಕ್ಟ್ಸ್ ಕಂಪನಿಗೆ ಡಾ .ಗೆರಾರ್ಡ್ ಬಿಸ್ಕೆಟ್ ಕಂಪನಿ ಮೇಲೆ ದೃಷ್ಟಿ ಬಿದ್ದಿದೆ.
ಪ್ರಸ್ತುತ ದೇಶದ ಬಿಸ್ಕತ್ ಉದ್ಯಮದಲ್ಲಿ ಪ್ರಮುಖ ಸ್ಥಾನದಲ್ಲಿರುವ ಪಾರ್ಲೆ-ಜಿ ಬಿಸ್ಕೆಟ್ ಉತ್ಪಾದಕ ಸಂಸ್ಥೆ ಪಾರ್ಲೆ ಪ್ರೊಡಕ್ಟ್ಸ್ ಈಗ ಪೋಲ್ಯಾಂಡ್ ಮೂಲದ ‘ಡಾ. ಗೆರಾರ್ಡ್’ ಕಂಪನಿಯನ್ನು ಖರೀದಿಸಲು ಮುಂದಾಗಿದೆ. ಈ ಒಪ್ಪಂದಕ್ಕಾಗಿ ಪಾರ್ಲೆ ಕಂಪನಿಯು ಖಾಸಗಿ ಈಕ್ವಿಟಿ ಸಂಸ್ಥೆ ಬ್ರಿಡ್ಜ್ ಪಾಯಿಂಟ್‌ನೊಂದಿಗೆ ಮಾತುಕತೆ ನಡೆಸುತ್ತಿದೆ.
1993ರಲ್ಲಿ ಸ್ಥಾಪಿಸಲಾದ ಡಾ .ಗೆರಾರ್ಡ್ ಕಂಪನಿಯು ಪೋಲೆಂಡ್‌ನ ಎರಡನೇ ಅತಿ ದೊಡ್ಡ ಬಿಸ್ಕೆಟ್ ಉತ್ಪಾದನಾ ಕಂಪನಿಯಾಗಿದ್ದು, 2013ರಲ್ಲಿ ಇದನ್ನು ಫ್ರಾನ್ಸ್‌ನ ಗ್ರೂಪ್ ಪೌಲ್ಟ್‌ನಿಂದ ಬ್ರಿಡ್ಜ್ ಪಾಯಿಂಟ್ ಖರೀದಿಸಿತ್ತು. ಈ ಒಪ್ಪಂದದ ಬಗ್ಗೆ ಇದುವರೆಗೆ ಪಾರ್ಲೆ, ಬ್ರಿಡ್ಜ್ ಪಾಯಿಂಟ್ ಅಥವಾ ಡಾ ಗೆರಾರ್ಡ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂದು ಮಾಹಿತಿ ದೊರಕಿದೆ.
ಬ್ರಿಡ್ಜ್‌ಪಾಯಿಂಟ್ ಈ ವರ್ಷದ ಆರಂಭದಲ್ಲಿ ಡಾ ಜೆರಾರ್ಡ್ ಮಾರಾಟಕ್ಕಾಗಿ ಹೌಲಿಹಾನ್ ಲೋಕಿ ಅವರನ್ನು ನೇಮಿಸಿತ್ತು. ಆದರೆ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ ಮತ್ತು ಯುರೋಪ್‌ನಲ್ಲಿನ ಭೌಗೋಳಿಕ ರಾಜಕೀಯ ಅಸ್ಥಿರತೆಯ ಕಾರಣಕ್ಕೆ ಪ್ರಕ್ರಿಯೆ ನಿಧಾನಗೊಂಡಿದೆ. ಪಾರ್ಲೆ ಜತೆಗಿನ ಮಾತುಕತೆಗಳೂ ವಹಿವಾಟಿಗೆ ಕಾರಣವಾಗುವ ಬಗ್ಗೆ ಖಚಿತತೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ಆದರೆ ವರದಿಗಳ ಪ್ರಕಾರ, ಪೋಲೆಂಡ್‌ನ ಈ ಬಿಸ್ಕತ್ತು ತಯಾರಕ ಕಂಪನಿಯ ಅಂದಾಜು ಮೌಲ್ಯ 1,000 ದಿಂದ 1,200 ಕೋಟಿ ರೂ. ಆಗಿದ್ದು, 1,600 ಕೋಟಿ ರೂ.ನಿಂದ 2,400 ಕೋಟಿ ರೂ.ವರೆಗೂ ಏರಿಕೆಯಾಗುವ ಸಾಧ್ಯತೆ ಇದೆ.
1993ರಲ್ಲಿ ಪ್ರಾರಂಭವಾದ ಡಾ ಗೆರಾರ್ಡ್ ಪೋಲೆಂಡ್‌ನಲ್ಲಿ 200ಕ್ಕೂ ಹೆಚ್ಚು ಬಿಸ್ಕತ್ತುಗಳು ಮತ್ತು ಉಪ್ಪು ಭರಿತ ತಿನಿಸುಗಳು ಹಾಗೂ ಎರಡು ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ. ಇದರ ಪ್ರಮುಖ ವ್ಯವಹಾರವು ಕುಕೀಸ್ ಮತ್ತು ಚಾಕೊಲೇಟ್ ಉತ್ಪನ್ನಗಳಾಗಿದ್ದು, 30 ದೇಶಗಳಿಗೆ ರಫ್ತಾಗುತ್ತಿವೆ.
ಪಾರ್ಲೆಯೊಂದಿಗಿನ ಆರಂಭಿಕ ಚರ್ಚೆಗಳಲ್ಲಿ ಒಪ್ಪಂದದ ಮೂಲಕ ಬಿಸ್ಕೆಟ್ ಉತ್ಪಾದನೆ ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೆ ನಂತರ ಕಂಪನಿಯನ್ನೇ ಮಾರಾಟ ಮಾಡಲು ಬ್ರಿಡ್ಜ್ ಪಾಯಿಂಟ್ ನಿರ್ಧರಿಸಿತು. ಒಂದೊಮ್ಮೆ ಈ ವಹಿವಾಟು ಯಶಸ್ವಿಯಾದರೆ, ಬ್ರಾಂಡ್‌ಗಳನ್ನು ಖರೀದಿಸುವ ಬದಲು ಅವುಗಳನ್ನು ನಿರ್ಮಿಸುವುದರ ಮೇಲೆಯೇ ಗಮನ ಕೇಂದ್ರೀಕರಿಸಿರುವ ಸಂಪ್ರದಾಯವಾದಿ ಕಂಪನಿಯಾದ ಪಾರ್ಲೆಯ ಮೊದಲ ಸ್ವಾಧೀನ ಆಗಲಿದೆ.
1929ರಲ್ಲಿ ಪ್ರಾರಂಭವಾದ ಪಾರ್ಲೆ-ಜಿ ಕಂಪನಿಯು ಸತತ 10 ವರ್ಷಗಳಿಂದ ಜನರು ಹೆಚ್ಚು ಆಯ್ಕೆ ಮಾಡುವ ಎಫ್‌ಎಂಜಿಜಿ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಪ್ರಸ್ತುತ ಪಾರ್ಲೆ ನಂತರದ ಸ್ಥಾನದಲ್ಲಿ ಅಮುಲ್, ಬ್ರಿಟಾನಿಯಾ, ಕ್ಲಿನಿಕ್ ಪ್ಲಸ್ ಮತ್ತು ಟಾಟಾ ಗ್ರಾಹಕ ಉತ್ಪನ್ನಗಳಿವೆ.
ಪಾರ್ಲೆ ಜಿ, ಮೊನಾಕೊ ಮತ್ತು ಮೆಲೋಡಿಯಂತಹ ಬ್ರ್ಯಾಂಡ್‌ಗಳನ್ನು ಮಾರಾಟ ಮಾಡುವ ಕಂಪನಿಯು ಮಾರ್ಚ್ 2021ಕ್ಕೆ ಕೊನೆಗೊಂಡ ವರ್ಷದಲ್ಲಿ 13,682 ಕೋಟಿ ರೂ.ಗಳ ಮಾರಾಟವನ್ನು ಪ್ರಕಟಿಸಿದೆ. ವಾರ್ಷಿಕ ಆದಾಯದಲ್ಲಿ ಇದು ಬ್ರಿಟಾನಿಯಾ, ನೆಸ್ಲೆ ಸೇರಿದಂತೆ ಪ್ರತಿಸ್ಪರ್ಧಿಗಳನ್ನೆಲ್ಲ ಹಿಂದಿಕ್ಕಿ ಪಾರ್ಲೆ ಜಿ ಕಂಪನಿಯು ದೇಶದ ಅತಿದೊಡ್ಡ ಆಹಾರ ಕಂಪನಿಯಾಗಿದೆ ಎಂದು ಮಾಹಿತಿ ಇದೆ.
ಒಟ್ಟಿನಲ್ಲಿ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಪಾರ್ಲೆ ಇನ್ನೂ ವಹಿವಾಟಿಗೆ ಸಂಬಂಧಿಸಿದಂತೆ ಗಮನಾರ್ಹ ಪ್ರಗತಿ ಸಾಧಿಸಿಲ್ಲ” ಎಂದು ತಿಳಿಸಿದ್ದಾರೆ.