KMF Recruitment 2022: 487 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತವು ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

 

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20-10-2022 ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19-11-2022

ಹುದ್ದೆಗಳ ವಿವರ : ಸಹಾಯಕ ನಿರ್ದೇಶಕರು (ವಿವಿಧ ವಿಭಾಗ): 39
ವಿಜಿಲೆನ್ಸ್ ಆಫೀಸರ್ : 01
ಸುರಕ್ಷತಾ ಅಧಿಕಾರಿ : 01
ಕಾರ್ಮಿಕ ಕಲ್ಯಾಣ / ಕಾನೂನು ಅಧಿಕಾರಿ : 01
ಅಧೀಕ್ಷಕ (ಖರೀದಿ / ಉಗ್ರಾಣ) (ವಿವಿಧ ವಿಭಾಗ): 20
ಹಿರಿಯ ಕೆಮಿಸ್ಟ್(ವಿವಿಧ ವಿಭಾಗ) 6
ಲೆಕ್ಕ ಸಹಾಯಕ ದರ್ಜೆ-1 : 13
ಡೈರಿ ಮೇಲ್ವಿಚಾರಕ ದರ್ಜೆ-2 : 01
ಆಡಳಿತ ಸಹಾಯಕ ದರ್ಜೆ-2: 40
ಲೆಕ್ಕ ಸಹಾಯಕ ದರ್ಜೆ-2: 30
ಮಾರುಕಟ್ಟೆ ಸಹಾಯಕ ದರ್ಜೆ-2: 23
ಲ್ಯಾಬ್ ಸಹಾಯಕ ದರ್ಜೆ-2(ವಿವಿಧ ವಿಭಾಗ): 30
ಹಿರಿಯ ತಾಂತ್ರಿಕ : 10
ಶೀಘ್ರಲಿಪಿಗಾರ ದರ್ಜೆ-02: 01
ಕಿರಿಯ ಸಿಸ್ಟಂ ಆಪರೇಟರ್ : 14
ಹಿರಿಯ ಕೋ-ಆರ್ಡಿನೇಟರ್ : 06
ಕಿರಿಯ ತಾಂತ್ರಿಕ (ವಿವಿಧ ಟ್ರೇಡ್): 200
ಕೋ-ಆರ್ಡಿನೇಟರ್ : 10

ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.500.
ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ ರೂ.1000.

ವಿದ್ಯಾರ್ಹತೆ : ಎಸ್ಎಸ್ಎಲ್‌ಸಿ/ ಐಟಿಐ / ಡಿಪ್ಲೊಮ/ ಡಿಗ್ರಿ ಪಾಸ್ ಮಾಡಿರಬೇಕು. ಉನ್ನತ ಮಟ್ಟದ ಹುದ್ದೆಗಳಿಗೆ ವಿದ್ಯಾರ್ಹತೆ ಜತೆಗೆ, ಕನಿಷ್ಠ ಕಾರ್ಯಾನುಭವಗಳನ್ನು ಹೊಂದಿರಬೇಕು.

ಅರ್ಜಿಯನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಇತರೆ ಯಾವುದೇ ಮಾರ್ಗದಲ್ಲಿ ಸಲ್ಲಿಸಲು ಅವಕಾಶ ಇಲ್ಲ. ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸಬೇಕು. ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದಲ್ಲಿ, ಒಂದೇ ನೊಂದಣಿ ಸಂಖ್ಯೆಯಡಿಯಲ್ಲಿಯೇ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.