ಅಸಿಡಿಟಿಗೆ ಇದನ್ನ ತಿಂದ್ರೆ ಒಳ್ಳೆಯದು ಅಂತೆ

ಇತ್ತೀಚಿನ ಕಾಲದಲ್ಲಿ ಜನರ ಜೀವನ ಶೈಲಿಯು ಅದಲು ಬದಲಾಗಿ ಆರೋಗ್ಯವೂ ಹದಗೆಡುತ್ತಿದೆ. ಇದಕ್ಕಾಗಿ ಹಲವಾರು ಬಾರಿ ವೈದ್ಯರ ಬಳಿ ಹೋಗುವುದು ತಪ್ಪುತ್ತಿಲ್ಲ. ಅದರಲ್ಲಿಯೂ ಗ್ಯಾಸ್ಟ್ರಿಕ್, ಎದೆನೋವು, ಹುಳಿತೇಗು, ಅಸಿಡಿಟಿ ಇಂತಹ ಕಾಯಿಲೆಗಳಿಗೆ ತುತ್ತಾಗುವುದು ಹೊಸದೇನಲ್ಲ. ಪ್ರತಿಯೊಂದಕ್ಕೂ ವೈದ್ಯರ ಬಳಿ ಹೋಗದೇ ಮನೆಮದ್ದು ಮೂಲಕ ಸಣ್ಣ ಪುಟ್ಟ ಕಾಯಿಲೆಗಳಿಗೆ ಮದ್ದು ಇದೆ.

 

ಹೊಟ್ಟೆಯ ಕಾಯಿಲೆಗಳಿಗೆ ಒಣದ್ರಾಕ್ಷಿ ಸಹಾಯ ಮಾಡುತ್ತದೆ. ಇದು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು, ಫೈಟೊನ್ಯೂಟ್ರಿಯೆಂಟ್‌ಗಳು, ಪಾಲಿಫಿನಾಲ್‌ಗಳು ಮತ್ತು ಫೈಬರ್‌ನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಹುಳಿ ಪದಾರ್ಥಗಳನ್ನು ತಿಂದರೆ ಅಸಿಡಿಟಿಯಂತಹ ಕಾಯಿಲೆಗಳನ್ನು ಮಾಯ ಮಾಡಬಹುದು. ಹೀಗಾಗಿ ಹೊಟ್ಟೆನೋವು, ಹುಳಿತೇಗು ಕಾಣಿಸಿಕೊಂಡಾಗ ಯಾವುದೇ ಕಾರಣಕ್ಕೂ ಹೊರಗಿನ ತಿಂಡಿಗಳನ್ನು ಸೇವಿಸಲೇಬೇಡಿ. ಇದು ಇನ್ನೆಷ್ಟು ಗ್ಯಾಸ್ಟಿಕ್ ಕಾಯಿಲೆಗಳನ್ನು ಹೆಚ್ಚು ಮಾಡುತ್ತದೆ.

ಆದಷ್ಟು ಹಾಲು ಮೊಸರನ್ನು ಅನ್ನಕ್ಕೆ ಮಿಶ್ರಣ ಮಾಡಿ ಸೇವಿಸಿ. ಸಾಮಾನ್ಯವಾಗಿ ಯಾವುದಾದರೂ ಕಾಯಿಲೆಗಳಿಗೆ ತುತ್ತಾದಾಗ ವೈದ್ಯರು ಇದನ್ನೇ ರೆಫರ್ ಮಾಡುತ್ತಾರೆ. ಯಾಕೆಂದರೆ ಇದು ಅತ್ಯಂತ ಶುದ್ಧ ಆಹಾರ ಎಂದು ಸಂಶೋಧನೆಯ ಪ್ರಕಾರ ತಿಳಿದು ಬಂದಿದೆ. ಈ ರೀತಿಯಾದಂತಹ ಒಂದಷ್ಟು ಟಿಪ್ಸ್ ಗಳನ್ನು ಫಾಲೋ ಮಾಡುವುದರ ಮೂಲಕ ಆರೋಗ್ಯವನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದಾಗಿದೆ.

Leave A Reply

Your email address will not be published.