ಚೇತನ್ ಗೆ ತಾಕತ್ತಿದ್ದರೆ ಮಂಗಳೂರಿಗೆ ಬಂದು ದೈವಾರಾಧನೆ ಬಗ್ಗೆ ಮಾತನಾಡಲಿ | ತುಳುನಾಡಿನ ಪ್ರತಿ ಹಿಂದೂಗಳ ಮನೆಯಲ್ಲೂ ದೈವಾರಾಧನೆ ಇದೆ – ಗುರುವ, ಬುಲ್ಲನ ಮಾತು

ಎಲ್ಲೆಡೆ ಕಾಂತಾರ ಕಾಂತಾರ ಹವಾ ಹೆಚ್ಚಿದೆ. ಜನ ಈ ಸಿನಿಮಾನ ಬಹಳಷ್ಟು ಇಷ್ಟಪಟ್ಟಿದ್ದಾರೆ. ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಸಿನಿಮಾ ದೇಶ ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಒಂದು ಈ ಸಿನಿಮಾದ ಪರ ವಿರೋಧದ ಚರ್ಚೆಗಳು ಕೂಡಾ ಮುಕ್ತವಾಗಿಯೇ ‌ನಡೆಯುತ್ತಿದೆ. ಸಂದರ್ಶನದ ಸಮಯದಲ್ಲಿ ಕಾಂತಾರ ಸಿನಿಮಾದಲ್ಲಿ ಬಳಸಿರುವ ಭೂತಕೋಲ ಹಿಂದು ಸಂಸ್ಕೃತಿಯ ಆಚರಣೆ ಎಂದು ರಿಷಬ್ ಶೆಟ್ಟಿ ಹೇಳಿದ್ದರು. ಆದರೆ ಭೂತಕೋಲ ಹಿಂದು ಆಚರಣೆಯಲ್ಲ ಎಂದು ನಟ ಚೇತನ್ ಅಹಿಂಸಾ ಅವರು ಟ್ವೀಟ್ ಮಾಡಿದ್ದರು. ಚೇತನ್ ಅವರ ಈ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ಕುರಿತು ಬುಧವಾರ ಸುದ್ದಿಗೋಷ್ಠಿ ನಡೆಸಿ ಸ್ವತಃ ಚೇತನ್ ಸ್ಪಷ್ಟನೆ ಕೊಟ್ಟಿದ್ದಾರೆ.

 

ನಟ ಚೇತನ್ ವಿರುದ್ಧ ಕಾಂತಾರ ಸಿನಿಮಾ ತಂಡ ನಿಜಕ್ಕೂ ಸಿಟ್ಟುಗೊಂಡಿದೆ. ಅಲ್ಲದೇ ಸಿನಿಮಾವನ್ನು ಈ ರೀತಿಯಾಗಿ ಎಳೆದು ತಂದು ವಿವಾದಕ್ಕೆ ಕಾರಣ ಮಾಡಿದ್ದಕ್ಕೆ, ಕಾಂತಾರದ ‘ಗುರುವ’ ಪಾತ್ರಧಾರಿ ಸ್ವರಾಜ್ ಶೆಟ್ಟಿ, ನಟ ಚೇತನ್ ಗೆ ಸವಾಲು ಹಾಕಿದ್ದಾರೆ.

“ತಾಕತ್ತಿದ್ರೆ ಮಂಗಳೂರಿಗೆ ಬಂದು ದೈವಾರಾಧನೆ ಬಗ್ಗೆ ಪ್ರಶ್ನೆ ಮಾಡಿ ಅಂತ ಸವಾಲು ಎಸೆದಿದ್ದಾರೆ.” ಹಿಂದೂ ಸಂಸ್ಕೃತಿ (Hindu Culture) ಅಲ್ಲ ಅಂತ ಹೇಳಲು ಅದು ಯಾವಾಗ ಬಂದಿರೋದು ಅಂತ ಯಾರಿಗಾದ್ರೂ ಗೊತ್ತಿದ್ಯಾ? ದೈವಾರಾಧನೆಯನ್ನು ತುಳುನಾಡಿಗರು (Tulunaadu) ಮಾಡ್ತಾ ಇದಾರೆ. ಆದರೆ ಚೇತನ್ ರ ಹೇಳಿಕೆ ನಮ್ಮ ನಂಬಿಕೆಗೆ ಧಕ್ಕೆ ತರುವಂತಿದೆ. ಭೂತಾರಾಧನೆ ಮತ್ತು ಹಿಂದುತ್ವದ ಸಂಬಂಧದ ಬಗ್ಗೆ ಮಾತನಾಡಬಾರದು. ಅದರ ಬಗ್ಗೆ ನಿಮಗೆ ಗೊತ್ತಿದ್ಯಾ? ನಿಮ್ಮಲ್ಲಿ ಸಾಕ್ಷ್ಯ ಏನಿದೆ? ನಮ್ಮ ಪೂರ್ವಜರು ಹೇಳಿದ್ದನ್ನು ನಾವು ಮಾಡಿಕೊಂಡು ಬರ್ತಾ ಇದೀವಿ, ಅಲ್ಲದೇ ಅವರು ನಟರಾಗಿ ಸಿನಿಮಾವಾಗಿಯೇ ನೋಡಿ ಅದನ್ನ ನೋಡಿ ಖುಷಿ ಪಡಲಿ, ಅದು ಬಿಟ್ಟು ಬೇಳೆ ಬೇಯಿಸಿ ಕೊಳ್ಳುವ ಕೆಲಸ ಬೇಡ. ತುಳುನಾಡಿನಲ್ಲಿ ದೈವಾರಾಧನೆ ಬಗ್ಗೆ
ದಿಗ್ಗಜರು ಪುಸ್ತಕ ಬರೆದಿದ್ದಾರೆ. ಇವರು ಅಂಥದ್ದನ್ನು ಓದಲಿ, ಅವರು ಇವರಿಗೆ ಉತ್ತರ ಕೊಡ್ತಾರೆ.

ಚೇತನ್ ಅವರು ಕೊರಗಜ್ಜನ ಮೇಲೆ ಗೌರವ ಇದೆ ಅಂತ ಹೇಳಿದ್ದಾರೆ. ಆದರೆ ದೈವದ ಬಗ್ಗೆ ಗೌರವ ಅಲ್ಲ, ಭಕ್ತಿ ಇರುವುದು ಮುಖ್ಯ. ಒಂದೆರಡು ಸಲ ಇವರು ನಮ್ಮ ಭೂತಾರಾಧನೆಗಳಿಗೆ ಬರಲಿ, ದೈವ ನಡೆಯನ್ನು ನಿಂತು ಒಮ್ಮೆ ನೋಡಿದರೆ ಭಕ್ತಿ ಬರಬಹುದು. ಶಿವದೂತ ಗುಳಿಗ ಅನ್ನೋ ನಾಟಕದ ಕಥೆ ಒಂದು ಶಕ್ತಿಯ ಕಥೆ. ಗುಳಿಗನ ಕಥೆಯನ್ನ ಜನರ ಮುಂದೆ ತೆರೆದಿಡೋ ಕೆಲಸ ನಾವು ಮಾಡಿದ್ದೇವೆ. ಧರ್ಮವನ್ನು ಹಾಳು ಮಾಡೋರನ್ನು ಈ ದೈವಗಳು ಬಿಡಲ್ಲ. ಕರಾವಳಿಯ ಎಲ್ಲಾ ದೈವಗಳು ಇದೇ ರೀತಿ ಮಾಡುತ್ತದೆ. ದೈವಗಳು ಭೂಮಿಯಲ್ಲಿ ಇರೋದೇ ಧರ್ಮ ರಕ್ಷಣೆಗಾಗಿ, ಅದನ್ನ ದಾಟಿದ್ರೆ ಉಳಿಗಾಲವಿಲ್ಲ. ನಾವು ಪೂರ್ವಜರ ನಂಬಿಕೆಗಳನ್ನು ಉಳಿಸಿ ದೈವಾರಾಧನೆ
ಮಾಡಿಕೊಂಡು ಬಂದಿದ್ದೇವೆ.

ಕಾಂತಾರ ಸಿನಿಮಾ ಬಗ್ಗೆ ಮಾತು ಬೇಡ, ಮಂಗಳೂರಿಗೆ ಬಂದು ಪ್ರಶ್ನೆ ಕೇಳುವ ತಾಕತ್ ಇದ್ರೆ ಬಂದು ಮಾತನಾಡಲಿ. ಸಿನಿಮಾ ಬಂದು 16 ದಿನದ ನಂತರ ಇವರು ಈ ರೀತಿಯ ಮಾತನ್ನಾಡುತ್ತಿದ್ದಾರೆ. ಆದರೆ ದೈವಾರಾಧನೆ ಬಗ್ಗೆ ಮಾತು ಬೇಡ, ಸಿನಿಮಾ ಬದಿಗಿಟ್ಟು ಮಾತನಾಡಿ. ನಾಳೆ ದೈವಕ್ಕೆ ಕೋಪ ಬಂದ್ರೆ ಅವನನ್ನು ಮಾತ್ರ ಖಂಡಿತಾ ಬಿಡಲ್ಲ. ಇದರಿಂದ ಸಿನಿಮಾಗೆ ಡ್ಯಾಮೇಜ್ ಇಲ್ಲ, ಇದರಿಂದ ಪಬ್ಲಿಸಿಟಿ ಅಷ್ಟೇ” ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.

ಕಾಂತಾರ ಬರಹಗಾರ ಹಾಗೂ ಸಿನಿಮಾದ ‘ಬುಲ್ಲಾ’ ಪಾತ್ರಧಾರಿ ಶನಿಲ್ ಗುರು ( sanil guru) ಅವರು ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿನಿಮಾ ಯಶಸ್ವಿಯಾದಾಗ ಮಾತನಾಡೋರು ತುಂಬಾ ಜನ ಇರ್ತಾರೆ. ಅಂತವರಲ್ಲಿ ಚೇತನ್ ಕೂಡ ಒಬ್ಬರು. ಇದಕ್ಕೂ ಮೊದಲು ಚೇತನ್ (Chetan) ಹೀಗೆಲ್ಲಾ ಮಾಡಿದ್ದರು. ಅವರನ್ನ ನಾವು ಅಷ್ಟು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಭೂತಾರಾಧನೆ (bhutaaradhane), ನಾಗಾರಾಧನೆ (Nagaradhane) ಏನು ಅಂತ ಈ‌ ಮಣ್ಣಲ್ಲಿ ಇರೋ ನಮಗೆ ಗೊತ್ತು. ಏಕೆಂದರೆ ಇದನ್ನು ನಾವು ಸಣ್ಣ ಮಕ್ಕಳಿರುವಾಗಲೇ ನೋಡಿಕೊಂಡು ಬಂದಿದ್ದೇವೆ. ದೈವಕ್ಕೆ ಹಿಂದೆ ಮುಂದೆ ಹೇಳಿದವರು ಅನುಭವಿಸಿದ ಉದಾಹರಣೆ ಇದೆ. ನಮ್ಮ ಭಾವನೆ ಬಗ್ಗೆ ಮಾತನಾಡಿದ್ದಾರೆ, ಇದರ ಬಗ್ಗೆ ಬೇಸರವಿದೆ.‌ ಸಿನಿಮಾ (cinema) ಜಾಗತಿಕವಾಗಿ ಹಿಟ್ ಆಗುವಾಗ ಈ ರೀತಿ ಮಾತನಾಡ್ತಿದಾರೆ. ಅವರು ಹೇಳಿರೋದಕ್ಕೆ ಅವರಿಗೆ ಪ್ರತಿಫಲ ಸಿಕ್ಕೇ ಸಿಗುತ್ತೆ. ಇದು ಸಿನಿಮಾದ ಬಗ್ಗೆ ಅಪಸ್ವರ, ಇದು ದೈವದ ಬಗ್ಗೆ ಅಲ್ಲ. ಸಿನಿಮಾದ ಬಗ್ಗೆ ‌ಮಾತನಾಡಿ ಅವರು ಪ್ರಚಾರ ತೆಗೋತಿದಾರೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Leave A Reply

Your email address will not be published.