‘ ನನ್ನನ್ನ ಕತ್ತೆ ಅಂತ ಬೇಕಾದ್ರೆ ಕರೀರಿ, ಹಿಂದೂ ಅಂತ ಮಾತ್ರ ಕರೀಬೇಡಿ ‘ ಅಂದಿದ್ರು ನೆಹರು; ರಾಹುಲ್ ಅಮ್ಮ ಮದುವೆಯಲ್ಲೂ ಕುಂಕುಮ ಇಟ್ಟಿದ್ರೋ ಇಲ್ವೋ ಗೊತ್ತಿಲ್ಲ – ಸಿ.ಟಿ. ರವಿಯ ಈಟಿ ಏಟಿನ ಟೀಕಾಸ್ತ್ರ !

ಬೆಂಗಳೂರು: ರಾಹುಲ್ ಗಾಂಧಿ ಮತ್ತು ಫ್ಯಾಮಿಲಿಯನ್ನು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಕತ್ತಾಗಿ ತರಾಟೆಗೆ ತೆಗೆದುಕೊಂಡಿದ್ದು, ರಾಹುಲ್ ಫ್ಯಾಮಿಲಿಯ ಎರಡು ಜನರೇಶನ್ ಅನ್ನು ಎಳೆದು ತಂದಿದ್ದಾರೆ. ನಮ್ಮ ಕಡೆ ಮದುವೆಯಲ್ಲಾದರೂ ಅರಿಶಿನ ಕುಂಕುಮ ಇಡ್ತಾರೆ. ಆದರೆ ರಾಹುಲ್ ಗಾಂಧಿ ಅವರ ಅಮ್ಮ ಮದುವೆಯಲ್ಲೂ ಹಣೆಗೆ ಕುಂಕುಮ ಇಟ್ಟಿದ್ರೋ ಇಲ್ಲವೋ ಗೊತ್ತಿಲ್ಲ, ಈಗ ಹಣೆ ಪೂರ್ತಿ ಮುಚ್ಚುವಂತೆ ಕುಂಕುಮ ಇಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.ಅವರು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಸೋಮನಾಥಪುರ ದೇಗುಲ ಪುನರುತ್ಥಾನ ಮಾಡೋದಕ್ಕೆ ವಿರೋಧ ಮಾಡಿದ ಕುಟುಂಬ ಯಾವುದು ಅಂತ.ಎಲ್ಲರಿಗೂ ಗೊತ್ತಿದೆ. ಕುಂಕುಮ ಕಂಡ್ರೆ ಹೆದರುವವರು, ಎಲೆಕ್ಷನ್ ಬಂದಾಗ ಹಿಂದೂ, ಹಣೆ, ಶಿವಭಕ್ತ ಬೊಟ್ಟು ಎಲ್ಲವೂ nenapaagutte ಎಂದು ಕುಟುಕಿದ್ದಾರೆ.

 

ಅಲ್ಲದೆ, ನನ್ನ ಶಕ್ತಿ ಶಿವ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ಅಕಸ್ಮಾತ್ ಅವರು ಹಾಗೆ ಹೇಳಿದ್ದಿದ್ರೆ, ರಾಮಮಂದಿರ ನಿರ್ಮಿಸಲು ಮೋದಿಯೇ ಬರಬೇಕು ಅಂತಿರ್ಲಿಲ್ಲ. ಶಿವನನ್ನೇ ನಂಬಿದ್ದಾರೆ ಅಂದ್ರೆ ಪುನರುತ್ಥಾನ ಯಾವಾಗಲೋ ಆಗಿಹೋಗ್ತಿತ್ತು. ಅವರ ಬಾಯಲ್ಲಿ ತಾವೊಬ್ಬ ಶಿವಭಕ್ತ ಅಂತ ಹೇಳಿಕೊಳ್ಳುವ ಮಟ್ಟಕ್ಕೆ ಬೆಳವಣಿಗೆ ಆಗಿರೋದು ತುಂಬಾ ಸ್ವಾಗತಾರ್ಹ. ಆದರೆ ಈ ಹೇಳಿಕೆಯನ್ನು ಅವರು ರಾಜಕೀಯವಾಗಿ ಬಳಕೆ ಮಾಡಿಕೊಳ್ಳೋದು ಬೇಡ ಎಂದು ಸಲಹೆ ನೀಡಿದ್ದಾರೆ. ಅವರು ಪಾದಯಾತ್ರೆಯಲ್ಲಿ ಮೋದಿಯನ್ನು ಬೈಯುತ್ತಾ ರಾಹುಲ್ ಗಾಂಧಿ ವಿದೂಷಕನ ಪಾತ್ರ ಮಾಡಿದ್ದಾರೆ. ಭಸ್ಕಿ ಮಾಡುವ ಚೀಪ್ ಮೆಂಟಾಲಿಟಿ ತೋರಿಸಿದ್ದಾರೆ. ಇದು ಬಿಟ್ಟು ಪಾದಯಾತ್ರೆಯಲ್ಲಿ ಇನ್ನೇನಿದೆ? ‘ ಎಂದು ಪ್ರಶ್ನಿಸಿದ್ದಾರೆ ಸಿ.ಟಿ. ರವಿ.

‘ ನನ್ನನ್ನ ಕತ್ತೆ ಅಂತ ಬೇಕಾದ್ರೆ ಕರೀರಿ, ಹಿಂದೂ ಅಂತ ಮಾತ್ರ ಕರೀಬೇಡಿ ‘ ಅಂದಿದ್ರು ಚಾಚಾ ನೆಹರು. ಈಗ ರಾಹುಲ್ ಗಾಂಧಿ ಶಿವ ಭಕ್ತ ಅಂತ ಹೇಳ್ತಿದ್ದಾರೆ. ಶಿವನ ಭಕ್ತಿ ನಿಜವಾಗಿಯೂ ಇದ್ರೆ ಒಳ್ಳೆಯದು. ಅದು ನಾಟಕ ಆಗಬಾರದು. ಈಗ ಎಲ್ಲಾರೂ ಪಕ್ಕಾ ಹಿಂದೂಗಳ ಔಟ್ ಲುಕ್ ಕೊಡ್ತಿದ್ದಾರೆ ಎಂದು ಈಟಿ ಕುಟ್ಟಿದ್ದಾರೆ ಸೀಟಿ ರವಿ.

Leave A Reply

Your email address will not be published.