ಕುಂಟಾರು ರವೀಶ್ ತಂತ್ರಿಯವರ ಆರೋಗ್ಯದಲ್ಲಿ ಏರುಪೇರು | ಆಸ್ಪತ್ರೆಗೆ ದಾಖಲು

Share the Article

ಪುತ್ತೂರು : ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ತಂತ್ರಗಳು, ಕಾಸರಗೋಡು ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಬ್ರಹ್ಮಶ್ರೀ ರವೀಶತಂತ್ರಿಗಳ ಆರೋಗ್ಯದಲ್ಲಿ ಏರುಪೇರು ಸಂಭವಿಸಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅನಾರೋಗ್ಯ ಕಂಡುಬಂದ ಕಾರಣ, ಪುತ್ತೂರಿನ ಡಾ.ಎಂ.ಕೆ. ಪ್ರಸಾದ್ ಅವರು ಆರೋಗ್ಯ ತಪಾಸಣೆ ನಡೆಸಿದಾಗ ವ್ಯತ್ಯಯ ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಯಾವುದೇ ಭಯ ಪಡಬೇಕಾದ ಅಗತ್ಯವಿಲ್ಲ ಎಂದು ತಂತ್ರಿಗಳ ಆಪ್ತ ವಲಯದವರು ಮಾಹಿತಿ ನೀಡಿದ್ದಾರೆ.

Leave A Reply