ಮಳಲಿ ಮಸೀದಿಯಲ್ಲಿ ದೇವಾಲಯ ಹೋಲುವ ರಚನೆ :ನ್ಯಾಯಾಲಯದ ಆದೇಶ ನ.9 ಕ್ಕೆ ಮುಂದೂಡಿಕೆ

ಮಂಗಳೂರು : ಮಳಲಿ ಮಸೀದಿ ಕಟ್ಟಡದಲ್ಲಿ ದೇವಾಲಯ ಹೋಲುವ ರಚನೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ಸಂಬಂಧದ ತೀರ್ಪನ್ನು ಮಂಗಳೂರಿನ ನ್ಯಾಯಾಲಯ ನ.9ಕ್ಕೆ ಮುಂದೂಡಿದೆ.

 

ಕೋರ್ಟ್ ಕಮಿಷನರ್ ಮೂಲಕ ಸರ್ವೆ ಮಾಡುವಂತೆ ವಿಎಚ್‌ಪಿ ಮನವಿ ಮಾಡಿತ್ತು. ಆ ಬಳಿಕ ಮಸೀದಿಯ ಜಾಗಕ್ಕೆ ಸಂಬಂಧಿಸಿದಂತೆ ವಕ್ಫ್ ಮತ್ತು ಸಿವಿಲ್ ನ್ಯಾಯಾಲಯದ ಅಧಿಕಾರದ ಬಗ್ಗೆ ವಾದ ವಿವಾದ ನಡೆದಿತ್ತು. ಈ ಕುರಿತಾದ ಆದೇಶವನ್ನು ನ್ಯಾಯಾಲಯ ಅ.17ಕ್ಕೆ ನಿಗದಿಗೊಳಿಸಿತ್ತು.

ಇದೀಗ ಆದೇಶವನ್ನು ಮತ್ತೊಮ್ಮೆ ಮುಂದೂಡಲಾಗಿದೆ.

ಈ ಹಿಂದೆ ಸೆಪ್ಟೆಂಬರ್ 27ರಂದು ಮಂಗಳೂರು ಕೋರ್ಟ್ ತೀರ್ಪನ್ನು ಮುಂದೂಡಿತ್ತು. ಇದೀಗ ಮತ್ತೆ ಮಂಗಳೂರು ಕೋರ್ಟ್‌ ತೀರ್ಪನ್ನು ಮುಂದೂಡಿದೆ.

Leave A Reply

Your email address will not be published.