LIC Dhan Varsha 866 Plan : ಎಲ್ ಐಸಿ ಧನ್ ವರ್ಷ 866 ಒಂದು ಬಾರಿ ಹೂಡಿಕೆ ಮಾಡಿ, ಲಾಭ ಗಳಿಸಿ!!!
ಭಾರತೀಯ ಜೀವ ವಿಮಾ ನಿಗಮವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಹೊಸ ಪಾಲಿಸಿಯ ಯೋಜನೆಯು ವಿಮಾ ಸುರಕ್ಷತೆಯೊಂದಿಗೆ ಉಳಿಯತಾಯದ ಉದ್ದೇಶವನ್ನೂ ಒಳಗೊಂಡಿರುವ ಯೋಜನೆಯಾಗಿದೆ. ಯೋಜನೆಯು ಹಣಕಾಸು ಉಳಿತಾಯಕ್ಕೆ ಸಂಬಂಧಿಸಿದ್ದು ಮಾತ್ರವಾಗಿರದೆ, ಅಕಾಲಿಕ ಮರಣ ಹೊಂದಿದರೆ ಕುಟುಂಬದವರಿಗೆ ವಿಮೆ ನೀಡುವುದರ ಜತೆಗೆ ಹೂಡಿಕೆಯ ದುಪ್ಪಟ್ಟು ಗಳಿಸಲು ಅವಕಾಶ ಮಾಡಿಕೊಡುತ್ತದೆ.
ಭಾರತೀಯ ಜೀವ ವಿಮಾ ನಿಗಮವು ಧನ್ ವರ್ಷ 866′ ಎಂಬ ಹೊಸ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಭಾರತೀಯ ಜೀವ ವಿಮಾ ನಿಗಮದ ಪ್ರಕಾರ ಮೆಚ್ಯೂರಿಟಿ ದಿನಾಂಕದಂದು ಖಾತರಿಪಡಿಸಿದ ಒಟ್ಟು ಮೊತ್ತ ನೀಡುವ ಮೂಲಕ ಪಾಲಿಸಿದಾರರಿಗೆ ಹೂಡಿಕೆಯ ದುಪ್ಪಟ್ಟಿಗಿಂತಲೂ ಹೆಚ್ಚು ಗಳಿಸಲು ಅವಕಾಶವಿದೆ ಎಂದು ತಿಳಿಸಿದೆ.
‘ಧನ್ ವರ್ಷ 866’ರ ಪ್ರಯೋಜನಗಳು:
ಈ ಯೋಜನೆಯಲ್ಲಿ ಪಾಲಿಸಿ ಆರಂಭವಾದ ದಿನದಿಂದಲೇ ಡೆತ್ ಬೆನಿಫಿಟ್ ಪಡೆಯಬಹುದಾಗಿದೆ.
ಮೆಚ್ಯೂರಿಟಿಗೂ ಮುನ್ನ ಮರಣ ಸಂಭವಿಸಿದಲ್ಲಿ ಖಾತರಿಪಡಿಸಿದ ಪ್ರತಿಫಲದ ಮೊತ್ತಕ್ಕಿಂತಲೂಹೆಚ್ಚಿನ ಡೆತ್ ಬೆನಿಫಿಟ್ ನಿಗದಿಪಡಿಸಲಾಗಿದೆ.
ಮೆಚ್ಯೂರಿಟಿ ಪ್ರಯೋಜನಗಳು:
ಈ ಯೋಜನೆಯಲ್ಲಿ ಮೆಚ್ಯೂರಿಟಿ ಪೂರ್ತಿಯಾದಾಗ ಮೂಲ ಮೊತ್ತದ ಜತೆಗೆ ನಿಗದಿ ಪಡಿಸಿದ ಪ್ರತಿಫಲದ ಮೊತ್ತವನ್ನೂ ಪಡೆಯಬಹುದಾಗಿದೆ.
ನಿಗದಿ ಪಡಿಸಿದ ಪ್ರತಿಫಲ:
ಪಾಲಿಸಿಯ ಪ್ರತಿ ವರ್ಷದ ಕೊನೆಗೆ ನಿಗದಿ ಪಡಿಸಿದ ಪ್ರತಿಫಲದ ಮೊತ್ತವು ಸೇರ್ಪಡೆಯಾಗುತ್ತದೆ. ಇದು ನಮ್ಮ ಪಾಲಿಸಿ ಆಯ್ಕೆ, ಮೂಲ ಮೊತ್ತ ಹಾಗೂ ಪಾಲಿಸಿಯ ಅವಧಿಗೆ ಅನುಗುಣವಾಗಿ ಪಾಲಿಸಿಯ ಮೆಚ್ಯೂರಿಟಿ ಅವಧಿಯ ವರೆಗೂ ಮುಂದುವರಿಯುತ್ತದೆ. 15 ವರ್ಷ ಅವಧಿಯ ಪಾಲಿಸಿ ಹೊಂದಲು ಕನಿಷ್ಠ 3 ವರ್ಷ ವಯಸ್ಸಾಗಿರಬೇಕು. 10 ವರ್ಷ ಅವಧಿಯ ಪಾಲಿಸಿಗೆ ಕನಿಷ್ಠ 8 ವರ್ಷ ವಯಸ್ಸಾಗಿರಬೇಕು ಎಂದು ಎಲ್ಐಸಿ ತಿಳಿಸಿದೆ.
ಪಾಲಿಸಿ ಆಧಾರದಲ್ಲಿ ಸಾಲ ಸೌಲಭ್ಯ:
ಪಾಲಿಸಿ ಅವಧಿ ಆರಂಭಗೊಂದ ಮೂರು ತಿಂಗಳು ಅಥವಾ ಫ್ರೀ ಲುಕ್ ಅವಧಿಯ ಮುಕ್ತಾಯ ಈ ಎರಡರಲ್ಲಿ ಮೊದಲು ಯಾವುದು ಬರಲಿದೆಯೋ ಆ ದಿನಾಂಕದ ಬಳಿಕ ಸಾಲ ಸೌಲಭ್ಯವೂ ದೊರೆಯುತ್ತದೆ.
ಎಲ್ಐಸಿ ‘ಧನ್ ವರ್ಷ 866’ರ ಗಳಿಕೆ ಲೆಕ್ಕಾಚಾರ:
ಈ ಪಾಲಿಸಿಯಲ್ಲಿ ಎರಡು ಆಯ್ಕೆಗಳಿವೆ. ಮೊದಲಪಾಲಿಸಿ ಆಯ್ಕೆಯ ಕುರಿತ ಲೆಕ್ಕಾಚಾರ ಪ್ರಕಾರ :
30 ವರ್ಷ ವಯಸ್ಸಿನ ಒಬ್ಬ ವ್ಯಕ್ತಿ ಒಂದು ಬಾರಿ 8,86,750 ರೂ. (ಜಿಎಸ್ಟಿ ಸೇರಿ 9,26,654 ರೂ. ಆಗುತ್ತದೆ) ಪಾವತಿ ಮೂಲಕ ಎಲ್ಐಸಿ ‘ಧನ್ ವರ್ಷ 866’ ಪಾಲಿಸಿ ಮಾಡುತ್ತಾರೆ ಎಂದಿಟ್ಟುಕೊಳ್ಳೋಣ. ಅವರಿಗೆ ಖಾತರಿಸಿಪಡಿಸಿದ ಮೊತ್ತ 11,08,438 ರೂ. ಆಗಿರಲಿದೆ. ಇದರ ಜತೆಗೆ ಪಾಲಿಸಿ ಅವಧಿ ಮುಕ್ತಾಯಗೊಂಡಾಗ 10 ಲಕ್ಷ ಬೇಸಿಕ್ ಮೊತ್ತವೂ ದೊರೆಯಲಿದೆ. ಅಂದರೆ, ಇತರ ಪ್ರಯೋಜನಗಳೂ ಸೇರಿದಂತೆ ಅವರಿಗೆ ಒಟ್ಟು 21,25,000 ರೂ. ದೊರೆಯಲಿದೆ. ಪಾಲಿಸಿಯ ಮೊದಲ ವರ್ಷದಲ್ಲಿ ಸಾವು ಸಂಭವಿಸಿದರೆ ಅವರ ಕುಟುಂಬದವರಿಗೆ 11,83,438 ರೂ. ಹಾಗೂ ಪಾಲಿಸಿಯ ಕೊನೆಯ ವರ್ಷದಲ್ಲಿ ಮರಣ ಹೊಂದಿದರೆ 22,33,438 ರೂ. ದೊರೆಯಲಿದೆ.
ಎರಡನೇ ಪಾಲಿಸಿ ಆಯ್ಕೆಯ ಲೆಕ್ಕಾಚಾರ ಪ್ರಕಾರ:
ವ್ಯಕ್ತಿಯೊಬ್ಬರು 8,34,642 ರೂ. (ಜಿಎಸ್ಟಿ ಸೇರಿ) ಹೂಡಿಕೆ ಮಾಡಿದರೆ, 10 ಲಕ್ಷ ರೂ. ಬೇಸಿಕ್ ಮೊತ್ತ ದೊರೆಯಲಿದೆ. ಮರಣ ಸಂಭವಿಸಿದಲ್ಲಿ 79,87,000 ರೂ. ನಿಗದಿಪಡಿಸಲಾಗಿದೆ. ಅವಧಿಗೂ ಮುನ್ನ ಪಾಲಿಸಿ ಕೊನೆಗೊಳಿಸುವುದಿದ್ದಲ್ಲಿ ಅದು ಪೂರ್ಣಗೊಳಿಸಿದ ತಿಂಗಳುಗಳ ಆಧಾರದಲ್ಲಿ ಖಾತರಿಪಡಿಸಿದ ಹೆಚ್ಚುವರಿ ಪ್ರಯೋಜನಗಳನ್ನೂ ನೀಡಲಾಗುತ್ತದೆ.