ರಾಜ್ಯ ಸರ್ಕಾರದಿಂದ ಗೃಹಿಣಿಯರಿಗೆ ದೀಪಾವಳಿಯ ಬಂಪರ್ ಆಫರ್, ಒಂದು ವರ್ಷದಲ್ಲಿ ಎರಡು ಸಿಲಿಂಡರ್ ಉಚಿತ!!

ಗೃಹಿಣಿಯರಿಗೆ ವರ್ಷದಲ್ಲಿ ಎರಡು ಸಿಲಿಂಡರ್ ಉಚಿತವಾಗಿ ಪಡೆಯುವ ಸರ್ಕಾರದ ನಿರ್ಧಾರವನ್ನು ಗುಜರಾತ್ ಶಿಕ್ಷಣ ಸಚಿವರಾದ ಜಿತುವಾಘನಿ ಸೋಮವಾರದಂದು ಪ್ರಕಟಿಸಿದರು. ಜನಸಾಮಾನ್ಯರು ಹಾಗೂ ಗೃಹಿಣಿಯರು ಈ ಯೋಜನೆಯಿಂದ ಅನುಕೂಲ ಪಡೆಯಬಹುದೆಂದರು.

 

ಸುಮಾರು 38 ಲಕ್ಷ ಗೃಹಿಣಿಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಅಲ್ಲದೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳೂ ಕೂಡ ಈ ಯೋಜನೆಯ ಅನುಕೂಲ ಪಡೆಯಬಹುದಾಗಿದೆ ಮತ್ತು ನೇರವಾಗಿ ಇವರ ಖಾತೆಗೆ ಹಣ ಜಮೆ ಆಗಲಿದೆ ಎಂದಿದ್ದಾರೆ. ಈ ಬಂಪರ್ ಯೋಜನೆಗೆ 650 ಕೋಟಿ ಹಣವನ್ನು ಪರಿಹಾರವಾಗಿ ನೀಡಲಾಗಿದೆ. ಸಾರ್ವಜನಿಕರ ಜೇಬಿಗೆ 1,700 ರೂ ಬೀಳಲಿದೆ ಎಂದು ಸಚಿವರು ಹೇಳಿದರು .

ಸಂಕುಚಿತ ನೈಸರ್ಗಿಕ ಅನಿಲ (ಸಿಎನ್ ಜಿ ) ಮತ್ತುಪೈಪ್ಡ್ ನ್ಯಾಚುರಲ್ ಗ್ಯಾಸ್ ( ಪಿಎನ್ ಜಿ) ಮೇಲಿನ ಶೇ 10ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಿದ್ದಾರೆ.ಸಿಎನ್ ಜಿಯಲ್ಲಿ ಶೇ.10ರಷ್ಟು ಕಡಿತವನ್ನುಪರಿಗಣಿಸಿದರೆ ಪ್ರತಿ ಕೆ.ಜಿ.ಗೆ 6-7 ರಷ್ಟು ಮತ್ತು ಪಿಎನ್ ಜಿಯಲ್ಲಿ ಪ್ರತಿ ಕಿಲೋಗೆ 5-5.50 ಲಾಭವಾಗಲಿದೆ ಎಂದು ಸಚಿವರು ತಿಳಿಸಿದರು.

ಸರ್ಕಾರದ ಈ ನಿರ್ಧಾರದಿಂದ ಗೃಹಿಣಿಯರಿಗೆ ಎರಡು ಸಿಲಿಂಡರ್ ಉಚಿತವಾಗಿ ನೀಡುವುದಲ್ಲದೆ, ಮುಖದಲ್ಲಿ ಮಂದಹಾಸದ ಆಫರನ್ನು ಕೊಟ್ಟಿದ್ದಾರೆ.

Leave A Reply

Your email address will not be published.