ನೀವು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ, ಬಿಜೆಪಿ ದುರ್ಬಲ ಆದರೆ ಮತ್ತೆ ನಮ್ಮ ಹಿಂದೆ ಬರ್ತೀರಾ ‘| ಹಿಂದೂಗಳನ್ನು ಟೀಕಿಸಿದ್ದ ಶೌಕತ್ ಅಲಿ ವಿರುದ್ಧ ಕೇಸ್
ಹಿಂದೂಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಎಐಎಂಐಎಂ ಅಧ್ಯಕ್ಷ ಶೌಕತ್ ಅಲಿ ವಿರುದ್ಧ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಉತರಪ್ರದೇಶದ ಸಂಭಾಲ್‍ನಲ್ಲಿ ನಡೆದ ರ್ಯಾಲಿಯಲ್ಲಿ ಶೌಕತ್ ಅಲಿ ಹಿಂದುಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈಗ ಆ ಬಗ್ಗೆ ಕೇಸ್ ದಾಖಲಿಸಲಾಗಿದೆ.
ಅಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಶೌಕತ್ ಅಲಿ,” ಮುಸ್ಲಿಮರು ಎರಡು ಬಾರಿ ಮದುವೆಯಾಗುತ್ತಾರೆ. ಇಬ್ಬರನ್ನೂ ಗೌರವದಿಂದ ನೋಡಿಕೊಳ್ಳುತ್ತಾರೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ, ಮೂವರು ಪ್ರೇಯಸಿಯರನ್ನ ಇಟ್ಟುಕೊಳ್ಳುತ್ತಾರೆ ” ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಮುಂದುವರಿದು ಮಾತನಾಡಿದ ಅಲಿ, ” 832 ವರ್ಷಗಳ ಕಾಲ ಮುಸ್ಲಿಮರು ಹಿಂದೂಗಳ ಮೇಲೆ ಆಳ್ವಿಕೆ ನಡೆಸಿದರು. ಆಗ ಹಿಂದೂಗಳು ಮುಸ್ಲಿಂ ದೊರೆಗಳ ಮುಂದೆ ಕೈ ಜೋಡಿಸಿ `ಜಿ, ಹುಜೂರ್’ ಎಂದು ತಲೆಬಾಗುತ್ತಿದ್ದರು. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದುತ್ತಾರೆ, ಎರಡು ಮದುವೆಯಾಗುತ್ತಾರೆ ಎಂದು ಹಿಂದೂಗಳು ಆರೋಪಿಸುತ್ತಾರೆ. ನಾವು ಎರಡು ಬಾರಿ ಮದುವೆಯಾಗುತ್ತೇವೆ ನಿಜ. ಆದರೆ ಇಬ್ಬರು ಹೆಂಡತಿಯರಿಗೂ ಗೌರವ ನೀಡುತ್ತೇವೆ. ಆದರೆ ನೀವು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಇಟ್ಟುಕೊಳ್ಳುವುದು ಯಾರಿಗೂ ತಿಳಿದಿಲ್ಲ. ಅವರಲ್ಲಿ ಯಾರಿಗೂ ನೀವು ಗೌರವ ಕೊಡುವುದಿಲ್ಲ ” ಎಂದು ಕಿಡಿಕಾರಿದರು.
ಮುಂದೆ ಬಿಜೆಪಿ ದುರ್ಬಲವಾದಾಗ ಹಿಂದೂಗಳು ಮುಸ್ಲಿಮರ ಹಿಂದೆ ಬರುತ್ತಾರೆ ಎಂದು ತಿಳಿಸಿದ್ದಾರೆ. ಆ ಮೂಲಕ ಬಿಜೆಪಿಗೆ ಚುನಾವಣಾ ವಸ್ತುವೊಂದು ದೊರಕಿದೆ. ” ಭಾರತದಲ್ಲಿ ಬಿಜೆಪಿ ದುರ್ಬಲವಾದರೆ ಮತ್ತೆ ಮುಸ್ಲಿಮರ ಆಕ್ರಮಣ ನಡೆಯಲಿದೆ ” ಎನ್ನುವುದಾಗಿ ಸೂಕ್ಷ್ಮವಾಗಿ ಮುಸ್ಲಿಂ ನಾಯಕನೊಬ್ಬನು ಹೇಳಿದ್ದು ಈಗ ದೊಡ್ಡದಾಗಿ ಚರ್ಚೆಯಾಗುತ್ತಿದೆ.