ಅರ್ಬಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.13ರಂದು ಮಹಾಪೂಗಪೂಜೆ : ಆಮಂತ್ರಣ ಪತ್ರ ಬಿಡುಗಡೆ
ಕಡಬ : ನ.13ರಂದು ಅರ್ಬಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಮಹಾಪೂಗಪೂಜೆಯ ಆಮಂತ್ರಣ ಪತ್ರವನ್ನು ಬಿಡುಗಡೆ ಕಾರ್ಯಕ್ರಮ ನಡೆಯಿತು.
ವೇದಮೂರ್ತಿ ನಾಗರಾಜ್ ಭಟ್ ಸುಳ್ಯ ಇವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ, ಮಹಾಪೂಗಪೂಜೆಯ ಮಹತ್ವ, ಹಿನ್ನೆಲೆ ಹಾಗೂ ವಿಶೇಷವನ್ನು ತಿಳಿಸಿದರು. ಮಹಾಪೂಜೆಯನ್ನು ನಡೆಸುವ ಕುರಿತು ಮಾರ್ಗದರ್ಶನ ಹಾಗೂ ಮಾಹಿತಿಯನ್ನು ನೀಡಿದರು.
ದೇವಸ್ಥಾನದ ಡಿಜಿಟಲ್ ಪಾವತಿಯ QR code ನ್ನು ಮಹಾಪೂಗಪೂಜಾ ಸಮಿತಿಯ ಸಂಚಾಲಕರು ಆದ ಮೋಹನ ಗೌಡ ಇಡ್ಯಾಡ್ಕ ಬಿಡುಗಡೆಗೊಳಿಸಿ, ಪೂಗಪೂಜೆ ಸಮಾಜದಲ್ಲಿ ದೇವರ ಕುರಿತು ಭಕ್ತಿ ಸಮರ್ಪಣಾ ಭಾವವನ್ನು ಮತ್ತೊಮ್ಮೆ ಜಾಗೃತಿಗೊಳಿಸುತ್ತದೆ ಎಂದು ಹೇಳಿದರು.
ಮಹಾಪೂಗಸಮಿತಿ ಅಧ್ಯಕ್ಷರಾದ ಶ್ರೀಮತಿ ಯಮುನ ಯಸ್ ರೈ ಊರಿನ ಹಾಗೂ ಪರವೂರಿನ ಸರ್ವರೂ ಮಹಾಪೂಗಪೂಜೆಯಲ್ಲಿ ಪಾಲ್ಗೊಂಡು ಯಶಸ್ವೀಗೊಳಿಸಬೇಕಾಗಿ ಕೇಳಿಕೊಂಡರು.
ಪೂಗಪೂಜೆಯ ಗೌರವಾಧ್ಯಕ್ಷರಾದ ಶ್ರೀಗೋಪಾಲಕೃಷ್ಣ ಪಡ್ಡಿಲಾಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು, ಈ ಆಸುಪಾಸಿನಲ್ಲಿ ವಿಶೇಷವಾದ ಪೂಜೆ ಆಗಿದೆ, ಆದರೆ ಶಾಸ್ತ್ರದಲ್ಲಿ ಉಲ್ಲೇಖ ಇದೆ. ಆದುದರಿಂದ ಶಿವ ದೇವರಿಗೆ ಅತ್ಯಂತ ಪ್ರೀಯವಾದ ಪೂಜೆಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕೃಷ್ಣಕುಮಾರ ಅತ್ರಿಜಾಲು, ಪೂಗಪೂಜೆ ಸಮಿತಿ ಸಂಚಾಲಕರಾದ ಮಹಾಬಲ ಶೆಟ್ಟಿ ಬಾಲಾಜೆ ದೇವಸ್ಥಾನದ ಅರ್ಚಕರಾದ ಕೃಷ್ಣಪ್ರಸಾದ ಉಪಾಧ್ಯಾಯರು ಉಪಸ್ಥಿತಿಯಿದ್ದರು