ಬೆಡ್ ರೆಸ್ಟ್ ಇಲ್ಲ, ಯಾವುದೇ ಸಮಸ್ಯೆಯಿದ್ದಲ್ಲಿ ಬಾರ್‌ಗೆ ಹೋಗಿ | ಕಾಲು ನೋವು ಎಂದು ಬಂದ ದಂಪತಿಗೆ ಔಷಧಿ ಚೀಟಿಯಲ್ಲಿ ಅಣಕಿಸಿದ ವೈದ್ಯ..! ನಂತರ ಏನಾಯ್ತು ಗೊತ್ತಾ?

ಯಾರೇ ವ್ಯಕ್ತಿಯಾಗಲಿ ತನಗೇನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಮೊದಲಿಗೆ ಹೋಗುವುದೇ ಡಾಕ್ಟರ್ ಹತ್ತಿರ. ಆದರೆ ಅದೇ ಡಾಕ್ಟರ್ ನಮ್ಮ ನೋವು ಹೇಳಿದಾಗ ಅಣಕವಾಡಿದರೆ ಏನಾಗಬೇಡ ಹೇಳಿ? ಅಂಥಹುದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಹೌದು, ಕಾಲು ನೋವು ಎಂದು ಔಷಧಿಗಾಗಿ ವೈದ್ಯರ ಬಳಿ ಬಂದ ದಂಪತಿಗಳಿಗೆ ಅಣಕಿಸುವಂತೆ ಚೀಟಿಯಲ್ಲಿ ಬರೆದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಈ ಚೀಟಿ ಈಗ ಭಾರೀ ವೈರಲ್ ಆಗಿದೆ

 

ಕಳೆದ ಗುರುವಾರ ಮಮ್ಮಿಯಾರ್ ನಿವಾಸಿ (44) ಮತ್ತು ಅಕೆಯ ಪತಿ ಅನಿಲ್‌ಕುಮಾರ್ ತ್ರಿಸೂರುನಲ್ಲಿರುವ ದಯಾ ಆಸ್ಪತ್ರೆಯಲ್ಲಿ ನಾಳೀಯ ಶಸ್ತ್ರಚಿಕಿತ್ಸೆ ವಿಭಾಗದ ಡಾ. ರಾಯ್ ವಾರ್ಫೀಸ್ ಎಂಬುವರರನ್ನು ಭೇಟಿ ಮಾಡಿದ್ದರು. ಪ್ರಿಯಾ ಅವರು ವದಕ್ಕೇಕದ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದಾರೆ. ಕಳೆದ ಎರಡು ವರ್ಷದಿಂಂದ ಅವರು ಕಾಲು ನೋವಿನಿಂದ ಬಳಲುತ್ತಿದ್ದಾರೆ.

ಅನಂತರ ಡಾಕ್ಟರ್ ಪರಿಶೀಲನೆ ಮಾಡಿ ದಂಪತಿಗೆ ಎಕ್ಸ್‌ರೇ ವರದಿ ತರುವಂತೆ ಹೇಳಿದ್ದಾರೆ. ಎಕ್ಸ್‌ರೇ ವರದಿ ಪಡೆದು ಮರಳಿ ಡಾಕ್ಟರ್ ಬಳಿ ಬಂದಾಗ ಎಕ್ಸರೇ ನೋಡಿ ನಿಮಗೆ ಏನಾದರೂ ಅರ್ಥವಾಯಿತಾ ಎಂದು ಕೇಳಿದ್ದಾರೆ. ಪ್ರಿಯಾ ಅವರು ಕಾಲು ಊದಿಕೊಂಡಿದ್ದರಿಂದ ಮತ್ತೊಬ್ಬ ವೈದ್ಯರನ್ನು ಸಂಪರ್ಕಿಸುವಂತೆ ದಂಪತಿಗೆ ಡಾಕ್ಟರ್ ಹೇಳಿದ್ದಾರೆ.

ಪತ್ನಿಗೆ ನಡೆಯಲು ಆಗುತ್ತಿಲ್ಲ. ತಾತ್ಕಲಿಕ ಪರಿಹಾರಕ್ಕಾಗಿ ಏನಾದರೂ ಔಷಧ ಬರೆದುಕೊಡಿ ಎಂದು ಅನಿಲ್ ಕುಮಾರ್, ಡಾ. ವಾರ್ಫೀಸ್ ರನ್ನು ಕೇಳಿಕೊಂಡಿದ್ದಾರೆ. ಈ ವೇಳೆ ಔಷಧ ಬರೆದುಕೊಡುವ ಬದಲು ಈ ಡಾಕ್ಟರ್ ದಂಪತಿಯನ್ನು ಅಣಕಿಸುವಂತೆ ಚೀಟಿಯಲ್ಲಿ ಬರೆದಿದ್ದಾರೆ.

ಇದ್ಯಾವುದನ್ನೂ ಅರಿಯದ ದಂಪತಿ ಆ ಚೀಟಿಯನ್ನು ತಗೊಂಡು, ಹೋಗಿ ಮೆಡಿಕಲ್‌ ನವರತ್ರ ನೀಡಿದರೆ ಆತ ಕೂಡಾ ಇದನ್ನು ಓದಿ ನಕ್ಕಿದ್ದಾನೆ. ಅಲ್ಲಿಯೂ ದಂಪತಿಗೆ ಅವಮಾನವಾಗಿದೆ. “ಯಾವುದೇ ಬೆಡ್ ರೆಸ್ಟ್ ಇಲ್ಲ. (ಪತಿ) ಯಾವುದೇ ಸಮಸ್ಯೆಯಿದ್ದಲ್ಲಿ ಬಾರ್‌ಗೆ ಭೇಟಿ ನೀಡಿ” ಎಂದು ಔಷಧ ಚೀಟಿಯಲ್ಲಿ ಬರೆಯಲಾಗಿದೆ.

ಔಷಧ ಚೀಟಿಯ ಕೊನೆಯಲ್ಲಿ ಸಾಮಾನ್ಯ ವೈದ್ಯರನ್ನು ಕಾಣುವಂತೆ ಬರೆಯಲಾಗಿದೆ. ನೊಂದ ದಂಪತಿಯ ನೋವು ಇನ್ನಷ್ಟು ಹೆಚ್ಚಳ ಮಾಡಲು ಈ ಡಾಕ್ಟರ್ ಕಾರಣರಾಗಿದ್ದಾರೆ ಎಂದೇ ಹೇಳಬಹುದು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗುವುದು ಎಂದು ಅನಿಲ್ ಕುಮಾರ್ ಹೇಳಿದ್ದಾರೆ. ಆದರೆ ಮಾಡಿದುಣ್ಣೋ ಮಹಾರಾಯ ಎಂಬಂತೆ, ಇದೇ ಸಂದರ್ಭದಲ್ಲಿ ದಯಾ ಆಸ್ಪತ್ರೆ ಡಾ. ವರ್ಫೀಸ್‌ನ್ನು ಕರ್ತವ್ಯದಿಂದಲೇ ವಜಾಗೊಳಿಸುವ ಮೂಲಕ ಡಾಕ್ಟರ್‌ಗೆ ಶಾಕ್ ನೀಡಿದ್ದಾರೆ. ಇದು ದಂಪತಿಗಳಿಗೆ ಸ್ವಲ್ಪ ಸಮಾಧಾನ ನೀಡಿದೆ ಎಂದೇ ಹೇಳಬಹುದು.

Leave A Reply

Your email address will not be published.