ಕಾರಾಗೃಹದ ತೆಂಗಿನ ಮರದಲ್ಲಿ ಮೊಬೈಲ್ ಫೋನ್ ಪತ್ತೆ: ಪೊಲೀಸರಿಂದ ತನಿಖೆ
ಜೈಲುಗಳಲ್ಲಿ ಫೋನ್ ಬಳಕೆ ನಿಷಿದ್ಧ. ಹಾಗಾಗಿ ಫೋನ್ ಬಳಕೆಗೆ ಕಠಿಣ ಕಾನೂನು ಕ್ರಮಗಳಿವೆ. ಅದನ್ನು ಮೀರಿ ಕೆಲವೊಂದು ಕಡೆ ಮೊಬೈಲ್ ಉಪಯೋಗಿಸುವ ಬಗ್ಗೆ ವರದಿಗಳು ಆಗುತ್ತಾ ಇರುತ್ತದೆ. ಅಂತಹ ಒಂದು ಫೋನ್ ಬಳಕೆ ಮಾಡಿದ ವಿಚಿತ್ರ ಘಟನೆಯೊಂದು ನಡೆದಿದೆ. ಅದೂ ಎಲ್ಲಿ ಗೊತ್ತೇ ? ತೆಂಗಿನ ಮರದಲ್ಲಿ. ಬನ್ನಿ ಈ ಕುತೂಹಲ ಮಾಹಿತಿಯ ಒಂದು ಸಣ್ಣ ವಿವರಣೆ ಇಲ್ಲಿದೆ.
ಪಿಎಫ್‌ಐ ಹರತಾಳ ದಿನದಂದು ವಿವಿಧೆಡೆ ಹಿಂಸಾಚಾರ ನಡೆಸಿ ಬಂಧನಕ್ಕೊಳಗಾಗಿ ರಿಮಾಂಡ್‌ನಲ್ಲಿರುವ 40 ಮಂದಿ ಪಾಪ್ಯುಲರ್ ಫ್ರಂಟ್ ಕಾರ‍್ಯಕರ್ತರನ್ನು ಬಂಧಿಸಲಾಗಿತ್ತು. ಹಾಗಾಗಿ ರಿಮಾಂಡ್‌ನಲ್ಲಿರುವ ಪಾಪ್ಯುಲರ್ ಫ್ರಂಟ್ ಕಾರ‍್ಯಕರ್ತರನ್ನು ಭೇಟಿಯಾಗಲು ಬಂದಿದ್ದ ಕಣ್ಣೂರು ವಳಪಟ್ಟಣಂ ನಿವಾಸಿ ಅಬ್ದುಲ್ ಅಜೀಜ್ (40) ಬೀಡಿ ಸಮೇತ ಜೈಲು ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದ. ಈತನನ್ನು ವಿಚಾರಣೆಗೊಳಪಡಿಸಿದಾಗ ರಿಮಾಂಡ್‌ನಲ್ಲಿರುವ ವ್ಯಕ್ತಿ ಮೊಬೈಲ್ ಫೋನ್ ಕರೆ ಮಾಡಿ ಬೀಡಿ ತರುವಂತೆ ಹೇಳಿದ್ದು, ಹಾಗಾಗಿ ತಾನು ಬಂದಿರುವುದಾಗಿ ಹೇಳಿಕೆ ನೀಡಿದ್ದ. ಇದರೊಂದಿಗೆ ಜೈಲ್‌ನಲ್ಲಿರುವ ಕೈದಿಗಳು ಮೊಬೈಲ್ ಫೋನ್ ಬಳಕೆ ಮಾಡಿದ್ದಾರೆ ಎಂಬ ಮಾಹಿತಿ ದೊರಕಿದೆ.
ಇದರಂತೆ ಜೈಲು ಸಿಬ್ಬಂದಿ ಇಡೀ ಬ್ಲಾಕ್ ಹುಡುಕಿದರೂ ಕೈದಿಗಳ ದೇಹ ತಪಾಸಣೆ ನಡೆಸಿದರೂ ಫೋನ್ ಸಿಗಲಿಲ್ಲ. ಲಭಿಸಿರಲಿಲ್ಲ. ತಪಾಸಣೆಯ ಮಾಹಿತಿ ಅರಿತ ಕೈದಿಗಳು ತೆಂಗಿನ ಮರವೇರಿ ಹೊರಗಿನಿಂದ ಕಾಣದಂತೆ ಫೋನ್ ಬಚ್ಚಿಟ್ಟಿದ್ದರು. ಆದರೆ ಅನಂತರ ತೆಂಗಿನ ಮರದಲ್ಲಿ ತಪಾಸಣೆ ನಡೆಸಲು ಪ್ರಾರಂಭ ಮಾಡಿದಾಗ ಮೊದಲು ಎರಡು ಫೋನ್‌ಗಳು ಪತ್ತೆಯಾಗಿದ್ದು, ನಂತರ ಮತ್ತೊಂದು ಫೋನ್ ಪತ್ತೆಯಾಗಿದೆ.
ಇವರನ್ನು ಕೂಡಿ ಹಾಕಲಾದ 6ನೇ ಬ್ಲಾಕ್‌ನ ತೆಂಗಿನ ಮರದಲ್ಲಿದ್ದ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆನೇ ಇವರುಗಳು ಫೋನ್‌ಗಳನ್ನು ಬಳಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ಫೋನ್ ಗಳು ಬ್ಯಾಟರಿಯನ್ನು ಬದಲಾಯಿಸಬಹುದಾದ ಫೋನ್ ಗಳಾಗಿದ್ದು, ಜೈಲಿನಲ್ಲಿ ಕೈದಿಗಳನ್ನು ಭೇಟಿಯಾಗಲು ಬಂದವರು ವಿವಿಧ ಹಂತಗಳಲ್ಲಿ ಮೊಬೈಲ್ ಫೋನ್ ಕೊಟ್ಟಿದ್ದಾರೆ ಎಂಬುದು ಪೊಲೀಸರ ಗಮನಕ್ಕೆ ಬಂದಿದೆ.
ಜೈಲಿನೊಳಗೆ ಫೋನ್ ಲಭಿಸಿರುವುದು ಗಂಭೀರ ಭದ್ರತಾ ಲೋಪ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ಒಂದು ಬ್ಲಾಕ್‌ನಲ್ಲಿ 40 ಮಂದಿ ರಿಮಾಂಡ್ ಆರೋಪಿಗಳಿದ್ದು, ಹೆಸರಿಗೆ ಮಾತ್ರ ತಪಾಸಣೆ ನಡೆಸಲಾಗಿದೆಯೇ ಎಂಬ ಆರೋಪ ಬಂದಿದೆ. ಹಾಗೆನೇ ಜೈಲಿನಲ್ಲಿರುವ ಹಿರಿಯ ಕೈದಿಗಳಿಗೆ ಬೀಡಿ ಕೊಟ್ಟರೆ ಯಾವ ಕೆಲಸಗಳನ್ನೂ ಮಾಡಿಸಬಹುದಾಗಿದ್ದು, ಇದಕ್ಕಾಗಿಯೇ ಬೀಡಿ ತಲುಪಿಸಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.