ಪರೀಕ್ಷೆಯ ಸಮಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ ಶಿಕ್ಷಕಿ | ನೊಂದ ಬಾಲಕಿ ಆತ್ಮಹತ್ಯೆ !!!

ಗುರು ಬ್ರಹ್ಮ.. ಗುರು ವಿಷ್ಣು.. ಗುರು ದೇವೋ ಮಹೇಶ್ವರ…. ಎಂದು ಗುರುವನ್ನು ಅತ್ಯಂತ ಪೂಜನೀಯ ಹಾಗೂ ಗೌರವಯುತ ಸ್ಥಾನದಲ್ಲಿ ಇಡುವುದು ನಮ್ಮ ಸಂಸ್ಕೃತಿ.

ತಪ್ಪು ಮಾಡಿದರೆ ಶಿಕ್ಷೆ ನೀಡಿ, ತಿದ್ದಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಆದರ್ಶ ವ್ಯಕ್ತಿಯನ್ನು ರೂಪಿಸುವ ಮಹತ್ತರ ಕಾರ್ಯ ನಿರ್ವಹಿಸುವ ಜೊತೆಗೆ ಜ್ಞಾನ ದಾಸೋಹ ಮಾಡುವ ಪುಣ್ಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಪರಿಪಾಠ ಇಂದಿಗೂ ಮುಂದುವರೆದಿದೆ.

ಮತ್ತೊಬ್ಬರನ್ನು ಸರಿ ದಾರಿಗೆ ಒಯ್ಯ ಬೇಕಾದ ಗುರುವೇ ತಪ್ಪು ಮಾಡಿದರೆ??? ಪ್ರಶ್ನಿಸುವವರಾರು??

ವಿದ್ಯಾರ್ಥಿ ತಪ್ಪು ಮಾಡಿದಕ್ಕಾಗಿ ಶಿಕ್ಷೆ ನೀಡುವ ಸಂದರ್ಭದಲ್ಲಿ ಅನುಚಿತವಾಗಿ ನಡೆದುಕೊಂಡ ಘಟನೆ ವರದಿಯಾಗಿದೆ. ವಿದ್ಯಾರ್ಥಿನಿಯೊಬ್ಬಳು (student) ಪರೀಕ್ಷೆಯಲ್ಲಿ ನಕಲು ಮಾಡಿದ್ದಾಳೆ ಎಂದು ಅನುಮಾನ ವ್ಯಕ್ತಪಡಿಸಿ, ತಾನೊಬ್ಬ ಮಹಿಳೆಯಾಗಿದ್ದರೂ ಕೂಡ ಶಿಕ್ಷಕಿ ಯೊಬ್ಬಳು ವಿದ್ಯಾರ್ಥಿನಿಯ ಬಟ್ಟೆ ತೆಗೆಯುವಂತೆ ಒತ್ತಾಯಿಸಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ವಿದ್ಯಾರ್ಥಿನಿಯು ತನ್ನ ಸಮವಸ್ತ್ರದಲ್ಲಿ ಪೇಪರ್ ಚಿಟ್‌ಗಳನ್ನು ಇಟ್ಟಿದ್ದಾಳೆ ಎಂದು ಶಿಕ್ಷಕಿ ಶಂಕಿಸಿದ್ದಲ್ಲದೆ, ವಿದ್ಯಾರ್ಥಿನಿ ನನ್ನ ಬಟ್ಟೆಯಲ್ಲಿ ಏನು ಇಲ್ಲವೆಂದು ಹೇಳಿದರೂ ಕೂಡ ಪರಿಗಣಿಸದೆ, ಬಲವಂತವಾಗಿ ಪಕ್ಕದ ಕೊಠಡಿಯಲ್ಲಿ ಸಮವಸ್ತ್ರ ತೆಗೆಯುವಂತೆ ಹೇಳಿ ಬಟ್ಟೆ ತೆಗೆದು ಪರೀಕ್ಷಿಸಿದ್ದಾರೆ .

ಈ ವಿಚಾರವಾಗಿ ಅತೀವವಾಗಿ ನೊಂದು ಕೊಂಡ 9 ನೇ ತರಗತಿ ವಿದ್ಯಾರ್ಥಿನಿ ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ.

ಈ ಘಟನೆಯ ಬಳಿಕ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಇದೀಗ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಶಿಕ್ಷಕಿಯ ಅನುಚಿತ ನಡೆಯಿಂದ ಅವಮಾನ ತಾಳಲಾರದೆ ಶಾಲೆಯಿಂದ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ವಿದ್ಯಾರ್ಥಿನಿಯ ತಾಯಿ ಪೋಲಿಸ್ ಸ್ಟೇಷನ್ ಮೆಟ್ಟಿಲೇರಿದ್ದು, ದೂರು ನೀಡಿದ್ದಾರೆ.

ಶಿಕ್ಷಕಿಯ ನಡೆಯಿಂದ ಅವಮಾನಿತಳಾಗಿ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ವಿದ್ಯಾರ್ಥಿನಿ ಪೊಲೀಸ್ ಅಧಿಕಾರಿಯವರಿಗೆ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಈ ಕುರಿತು ಶಿಕ್ಷಕಿಯ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶಿಕ್ಷಕಿ ಕೂಡ ಮಹಿಳೆಯಾಗಿ ಮತ್ತೊಂದು ಹೆಣ್ಣು ಮಗಳ ಮೇಲೆ ಅನುಚಿತವಾಗಿ ವರ್ತಿಸಿದ್ದು ನಿಜಕ್ಕೂ ಖೇದಕರ ಸಂಗತಿಯಾಗಿದೆ.

Leave A Reply