Kantara : ಇನ್ನೇನು ‘ಕಾಂತಾರ 2’ ಬರುವ ಎಲ್ಲಾ ಸೂಚನೆ | ಸಿನಿಮಾದ ಕೈಮ್ಯಾಕ್ಸ್ನಲ್ಲಿ ಶೆಟ್ರು ಕೊಟ್ಟ ಹಿಂಟ್ ಗಳೇನು?
ಕನ್ನಡ ಚಿತ್ರರಂಗದ ಲೇಟೆಸ್ಟ್ ಬ್ಲಾಕ್ಬಸ್ಟರ್ ‘ಕಾಂತಾರ’ ಸಿನಿಮಾ ಎಲ್ಲೆಡೆ ಅಬ್ಬರಿಸುತ್ತಿದೆ. ‘ಕಾಂತಾರ’ ಎಲ್ಲಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿದೆ. ‘ಕಾಂತಾರ’ ಬಿಡುಗಡೆಯಾಗಿ ಇಂದಿಗೆ (ಅಕ್ಟೋಬರ್ 14) 15 ದಿನಗಳಾಗಿವೆ. ಆದರೂ ಇದರ ಅಬ್ಬರ ಇನ್ನೂ ಕಡಿಮೆಯಾಗಿಲ್ಲ.
ಬಹುತೇಕ ಕಡೆಗಳಲ್ಲಿ ಕಾಂತಾರ ಬಿಡುಗಡೆಯಾಗಿಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರತಿಯೊಂದು ಶೋಗಳೂ ಹೌಸ್ಫುಲ್ ಹೌಸ್ ಫುಲ್. ಸ್ಯಾಂಡಲ್ವುಡ್ನಲ್ಲಿ ಈ ಸಿನಿಮಾ ಈಗಾಗಲೇ ಹಲವು ದಾಖಲೆಗಳನ್ನು ಮುರಿದಿದೆ.
ತೆಲುಗು, ತಮಿಳು, ಹಿಂದಿ ಸೇರಿದಂತೆ ಮಲಯಾಳಂ ಭಾಷೆಯ ಸಿನಿಪ್ರಿಯರೂ ಕೂಡ ಈ ಸಿನಿಮಾನ ಮೆಚ್ಚಿಕೊಂಡಿದ್ದು, ಈ ಸಿನಿಮಾ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಷ್ಟೊಂದು ಸಕ್ಸಸ್ ಕಾಣುವ ಈ ಸಿನಿಮಾ ಈ ಮಟ್ಟಿಗೆ ಸೌಂಡ್ ಮಾಡಬೇಕಾದರೆ, ‘ಕಾಂತಾರ 2’ ಬರುತ್ತಾ? ಅನ್ನೋ ಪ್ರಶ್ನೆ ಸಿನಿಪ್ರಿಯರನ್ನು ಕಾಡದೇ ಇರೋದಿಲ್ಲ. ‘ಕಾಂತಾರ’ ಸೀಕ್ವೆಲ್ ಬಗ್ಗೆ ಚಿತ್ರತಂಡ ಹಲವು ಸುಳಿವುಗಳನ್ನು ನೀಡಿದೆ. ಅಸಲಿಗೆ ಆ ಸುಳಿವುಗಳೇನು?
ಸಿನಿಮಾ ಮುಗಿಯಿತು ಎಂದು ಪ್ರೇಕ್ಷಕ ಅಂದುಕೊಳ್ಳುವಾಗಲೇ ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದಾರೆ. ಹೌದು, ‘ಕಾಂತಾರ’ ಕೊನೆಯಲ್ಲಿ ಶಿವನ ಪತ್ನಿ ಗರ್ಭಿಣಿಯಾಗಿದ್ದಾರೆ. ಇಲ್ಲಿಂದ ‘ಕಾಂತಾರ 2’ಗೆ ಲೀಡ್ ಕೊಡುವಂತಹ ಒಂದಿಷ್ಟು ಸೀನ್ಗಳು ಪ್ರೇಕ್ಷಕರಿಗೆ ಎದುರಾಗುತ್ತಲೇ ಇರುತ್ತೆ.
ಅಪ್ಪನಿಂದ ಮಗನಿಗೆ.. ಮಗನಿಂದ ಮೊಮ್ಮಗನಿಗೆ… ಹೀಗೆ ‘ಕಾಂತಾರ’ ಸಿನಿಮಾ ಮುಂದುವರೆಯುತ್ತಾ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ. ಹೀಗಾಗಿ ‘ಕಾಂತಾರ 2’ಗೆ ಶಿವನ ಮಗ ಸಾರಥ್ಯವಿರುತ್ತಾ? ಅನ್ನೋದು ಕೇವಲ ಗೆಸ್ಸಿಂಗ್ ಅಷ್ಟೇ. ಆದರೆ, ಈ ಆಲೋಚನೆಯನ್ನು ತಳ್ಳಿ ಹಾಕುವಂತಿಲ್ಲ