ಈರುಳ್ಳಿ ಸಿಪ್ಪೆ ತೆಗೆಯದೇ ಈ ರೀತಿ ಮಾಡಿ
ಈರುಳ್ಳಿ ಹೆಚ್ಚೋದು ಒಂದು ಕಲೆ. ಕಣ್ಣಲ್ಲಿ ನೀರು ಬರುತ್ತೆ ಅನ್ನೋ ಕಾರಣ ಕೊಟ್ಟು ಎಸ್ಕೇಪ್ ಆಗೋ ಸೋಂಬೇರಿ ಕೆಲಸಗಾರರು ಇರ್ತಾರೆ. ಈರುಳ್ಳಿ ಸಿಪ್ಪೆಯನ್ನು ಸ್ವಲ್ಪ ತುಂಡು ಮಾಡಿ ತಲೆಗೆ ಇಟ್ಕೊಂಡು ಹೆಚ್ಚಿದರೆ ಕಣ್ಣಲ್ಲಿ ನೀರು ಬರಲ್ವಂತೆ.ಟ್ರೈ ಮಾಡಿ ನೋಡಿ ಒಮ್ಮೆ.
ಇನ್ನು ಸಿಪ್ಪೆಯನ್ನು ಎಸೆಯುವ ಬದಲು ಅದನ್ನು ಕೂಡ ಸೇವಿಸಬಹುದು. ಈ ವಿಷ್ಯ ಕೇಳ್ತಾ ನಿಮಗೆ ಆಶ್ಚರ್ಯವಾಗಬಹುದು. ಇನ್ನು ಇದೆ ಇದರ ಬಗ್ಗೆ ನೆಕ್ಸ್ಟ್ ಓದಿ.
ಹೌದು. ಚಹಾ ಕುಡಿಯುವವರು ಈರುಳ್ಳಿ ಸಿಪ್ಪೆಯನ್ನು ಬಳಸಿ ಚಹಾ ಮಾಡಬಹುದು. ಈ ಚಹಾ ಕಡಿಮೆ ಕ್ಯಾಲೋರಿ ಹೊಂದಿದೆ. ಹೆಚ್ಚಿನ ಕ್ಯಾಲೋರಿ ಪಾನೀಯಗಳಿಗೆ ಹೋಲಿಸಿದರೆ ಈರುಳ್ಳಿ ಸಿಪ್ಪೆಯಿಂದ ಮಾಡಿದ ಚಹಾವು ಹೆಚ್ಚು ಪ್ರಯೋಜನಕಾರಿಯಾಗಿದೆ.
ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ ಎ ಇರುತ್ತದೆ. ಹಾಗಾಗೀ ದೃಷ್ಟಿಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ವಿಟಮಿನ್ ಸಿ ಮತ್ತು ಇ ಸಹ ಒಳಗೊಂಡಿದೆ. ಅವುಗಳನ್ನು ಚರ್ಮದ ಆರೈಕೆಯಲ್ಲಿಯೂ ಬಳಸಲಾಗುತ್ತದೆ.
ಗಾಯ ಆದಾಗ ಅಥವಾ ದೇಹದಲ್ಲಿ ಬಿಳಿ ಅಲರ್ಜಿಗಳು ಕಂಡು ಬಂದಿದ್ದಾರೆ ಈರುಳ್ಳಿ ರಸವನ್ನು ರುಬ್ಬಿ ಹಚ್ಚಿದರೆ ತುಂಬಾ ಒಳಿತು. 1 ತಿಂಗಳಲ್ಲಿ ಕಮ್ಮಿ ಆಗುವ ಗಾಯ 1 ವಾರದಲ್ಲಿ ಉರಿ ಮತ್ತು ಗಾಯವು ಕಮ್ಮಿ ಆಗುತ್ತದೆ.
ನಿಮಗೆ ಶೀತ ಕೆಮ್ಮು ಗಂಟಲು ನೋವು ಇದ್ದರೆ ಸಿಪ್ಪೆಯನ್ನು ಸ್ವಲ್ಪ ಬೇಯಿಸಿ. ನೀರಿಗೆ ಹಾಕಿ ನೀರನ್ನು ಮಾತ್ರ ಸೇವಿಸಿ. ಸಿಪ್ಪೆಯನ್ನು ತಿನ್ನಬೇಡಿ. ಸಿಪ್ಪೆಯಿಂದ ಹೊರ ಬಿಡುವ ಅಂಶಗಳನ್ನು ನೀವು ಸೇವಿಸಿ.
ಮೊದಲ ಬಾರಿಗೆ ಈ ಪ್ರಯತ್ನಗಳನ್ನು ಮಾಡುವಾಗ ನಿಮಗೆ ಅಸಾಧ್ಯ ಅಂತ ಅನಿಸಿದರೂ ಇದು ತುಂಬಾ ಉತ್ತಮ. ಟ್ರೈ ಮಾಡ್ಲೆ ಬೇಕು.