UPI ಪಾವತಿ ಮಿತಿ : ನೀವು ಒಂದು ಬಾರಿಗೆ ಎಷ್ಟು ಹಣ ವರ್ಗಾಯಿಸಬಹುದು? ಇಲ್ಲಿದೆ ಉತ್ತರ

ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟು ವಿಧಾನವನ್ನು ಪರಿಚಯಿಸಿದೆ. ಯುಪಿಐ ಅಥವಾ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಮತ್ತು ಸುಲಭವಾಗಿ ಮಾಡಬಹುದಾದ ಪಾವತಿ ವಿಧಾನವಾಗಿದೆ.

 

ಯುಪಿಐ ಡೆವಲಪರ್ ಎನ್‌ಪಿಸಿಐ ಪ್ರಕಾರ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಎಂಬುದು ಆರ್‌ಬಿಐ ನಿಯಂತ್ರಿತ ಘಟಕವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ತ್ವರಿತ ಪಾವತಿ ವ್ಯವಸ್ಥೆಯಾಗಿದೆ.

UPI ಅನ್ನು IMPS ಅಡಿಯಲ್ಲಿ ಅಭಿವೃದ್ದಿಪಡಿಸಲಾಗಿದೆ. ಯಾವುದೇ ಎರಡು ಬ್ಯಾಂಕ್‌ ಖಾತೆಗಳ ನಡುವೆ ತಕ್ಷಣವೇ ಹಣವನ್ನು ವರ್ಗಾವಣೆ ಮಾಡಲು ಈ ಪಾವತಿ ವ್ಯವಸ್ಥೆ ಸಹಕಾರಿಯಾಗಿದೆ.


ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (NPCI) ಕಳೆದ ಆಗಸ್ಟ್ ವರದಿಯ ಪ್ರಕಾರ, ದೇಶದಲ್ಲಿ ಮೊದಲ ಬಾರಿಗೆ ಯುಪಿಐ ವಹಿವಾಟುಗಳ ಸಂಖ್ಯೆ 650 ಕೋಟಿಗಳನ್ನು ಮೀರಿದ್ದು ವರದಿಯಾಗಿದೆ.

ಆರ್‌ಬಿಐ ನಿಯಂತ್ರಿತ ಸಂಸ್ಥೆಯಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ಏಕೀಕೃತ ಪಾವತಿ ಇಂಟರ್ಫೇಸ್ ಆಗಿರುವ UPI, ತ್ವರಿತ ಪಾವತಿ ವ್ಯವಸ್ಥೆಯಾಗಿದ್ದು, UPI IMPS ಮೂಲಸೌಕರ್ಯವನ್ನು ಆಧರಿಸಿದೆ.
NPCI ಪ್ರಕಾರ, “ಪೀರ್ ಟು ಪೀರ್” ಸಹ ಸಾಮೂಹಿಕ ವಿನಂತಿಯನ್ನು ಒದಗಿಸುತ್ತದೆ.

ಈ ವಿಧಾನದ ಮೂಲಕ ಹಣವನ್ನು ವರ್ಗಾಯಿಸಲು, ಗ್ರಾಹಕರು BHIM UPI ಅಪ್ಲಿಕೇಶನ್, ಹಾಗೆಯೇ ಗ್ರಾಹಕರ ಬ್ಯಾಂಕ್‌ಗಳ ಮೊಬೈಲ್ ಅಪ್ಲಿಕೇಶನ್, ಹಾಗೆಯೇ PhonePay, Paytm ಮತ್ತು GooglePay ವಿವಿಧ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ.

ಪ್ರತಿದಿನ 200 ಮಿಲಿಯನ್‌ಗಿಂತಲೂ ಹೆಚ್ಚು ಯುಪಿಐ(UPI) ವಹಿವಾಟುಗಳು ನಡೆಯುತ್ತವೆ. UPI ಅತ್ಯಂತ ವೇಗವಾದ ಪಾವತಿ ವಿಧಾನಗಳಲ್ಲಿ ಒಂದಾಗಿದ್ದು, RBI ಮತ್ತು NPCI ಯುಪಿಐ ದಿನನಿತ್ಯದ ವಹಿವಾಟಿನ ಮೇಲೆ ನಿರ್ಬಂಧಗಳನ್ನು ಹೇರಿದ್ದು, ಪ್ರತಿ ಗ್ರಾಹಕರು ದಿನಕ್ಕೆ 2 ಲಕ್ಷದವರೆಗೆ ಮಾತ್ರ ವರ್ಗಾವಣೆ ಮಾಡಲು ಅವಕಾಶವಿದೆ. ಇದೆ ರೀತಿ ವಿವಿಧ ಬ್ಯಾಂಕ್‌ ಗಳು ವಹಿವಾಟಿನ ಮೇಲೆ ನಿರ್ಬಂಧ ಹೇರುತ್ತವೆ.


ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯುಪಿಐ ವಹಿವಾಟಿನ ಮಿತಿಯನ್ನು 1 ಲಕ್ಷ ರೂ. ಇರಿಸಿದೆ. ಹೊಸ ಗ್ರಾಹಕರಿಗೆ ಮೊದಲ 24 ಗಂಟೆಗಳ ವಹಿವಾಟಿನ ಮಿತಿ 5,000 ರೂ. ಇರಲಿದೆ.
ಇನ್ನು ಯುಪಿಐ ಮೂಲಕ ಐಪಿಒ(IPO) ಅಪ್ಲಿಕೇಶನ್‌ನಲ್ಲಿ ಪ್ರತಿ ವಹಿವಾಟಿಗೆ 5 ಲಕ್ಷ ರೂಪಾಯಿಗಳ ಮಿತಿ ಇದೆ.


ಆಕ್ಸಿಸ್ ಯುಪಿಐ ರೂ. 1 ಲಕ್ಷದವರೆಗೆ ವಹಿವಾಟು ನಡೆಸಬಹುದಾಗಿದೆ. ಅಲ್ಲದೆ ದೈನಂದಿನ UPI ಮಿತಿಯನ್ನು ಒಟ್ಟಾರೆಯಾಗಿ ನಿರ್ಧರಿಸಲಾಗುತ್ತದೆ.
ICICI ದೈನಂದಿನ UPI ವಹಿವಾಟು ಮಿತಿಯನ್ನು 10,000 ರೂ.ಗೆ ನಿಗದಿಪಡಿಸಲಾಗಿದೆ. Google Pay ಗ್ರಾಹಕರಿಗೆ, ICICI ಬ್ಯಾಂಕ್ ಈ 25,000 ರೂ. ಮಿತಿ ನೀಡಲಾಗಿದೆ. ಐಸಿಐಸಿಐ ಬ್ಯಾಂಕ್ ತನ್ನ ಬಳಕೆದಾರರಿಗೆ ಯುಪಿಐನ ವಹಿವಾಟಿನ ಮಿತಿಯನ್ನು 10,000 ರೂ. ವರೆಗೆ ನಿಗದಿಪಡಿಸಿದೆ.

ಒಂದು ವೇಳೆ ನೀವು Google Pay ಅಪ್ಲಿಕೇಶನ್ ಮೂಲಕ ಪಾವತಿಸುತ್ತಿದ್ದರೆ 25,000 ರೂ.ವರೆಗೆ ಬಳಸಬಹುದಾಗಿದೆ.
ಭಾರತದ ಖಾಸಗಿ ಬ್ಯಾಂಕ್ ಆಗಿರುವ HDFC ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, HDFC ಬ್ಯಾಂಕ್ UPI ಸಹಾಯದಿಂದ ದಿನಕ್ಕೆ 10 ಬಾರಿ UPI ಮೂಲಕ ಪಾವತಿಗಳನ್ನು ಮಾಡಬಹುದು, ಇದರ ಒಟ್ಟು ಮೌಲ್ಯವು 1 ಲಕ್ಷ ರೂಪಾಯಿಗಳನ್ನು ಮೀರಬಾರದು.


UPI ಮೂಲಕ ಹಣಕಾಸಿನ ವಹಿವಾಟುಗಳನ್ನು ಬಹಳ ಸುಲಭವಾಗಿ ಮಾಡಬಹುದು. ನಿಮಿಷಗಳಲ್ಲಿ ಖಾತೆಗೆ ಹಣವನ್ನು ವರ್ಗಾಯಿಸಬಹುದಾಗಿದೆ.

Leave A Reply

Your email address will not be published.