ಮೂವತ್ತು ವರ್ಷಗಳ ರಹಸ್ಯ ಬಯಲು-ಹೊಸ ರಕ್ತದ ಗುಂಪು ಪತ್ತೆ!! ಗರ್ಭಿಣಿಯರಲ್ಲಿ ಆತಂಕ-ಸಂಶೋಧಕರು ಹೇಳಿದ್ದೇನು!??
ಅಮೇರಿಕಾದ: ಇಲ್ಲಿನ ಬ್ರಿಸ್ಕಲ್ ವಿಶ್ವವಿದ್ಯಾಲಯದ ಸಂಶೋಧಕರು ಮೂವತ್ತು ವರ್ಷಗಳ ಹಿಂದಿನ ರಹಸ್ಯವೊಂದನ್ನು ಬಹಿರಂಗ ಪಡಿಸುವ ಮೂಲಕ ಹೊಸ ರಕ್ತದ ಗುಂಪನ್ನು ಕಂಡುಹಿಡಿದಿದ್ದಾರೆ.ಆ ಮೂಲಕ ‘ER’ ಎಂಬ ಹೊಸತೊಂದು ರಕ್ತದ ಗುಂಪು ಸೇರ್ಪಡೆಗೊಂಡಿದ್ದು,ಗರ್ಭಾವಸ್ಥೆಯಲ್ಲಿರುವ ಶಿಶುಗಳಿಗೆ ಮಾರಕವಾಗಲಿದೆ ಎನ್ನುವ ಆತಂಕಕಾರಿ ವಿಚಾರವೂ ಬೆಳಕಿಗೆ ಬಂದಿದೆ.
ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಮಹಿಳೆಯರ ಗರ್ಭದಲ್ಲಿದ್ದ ಶಿಶುಗಳು ಸಾವನ್ನಪ್ಪಿದ್ದು,ವಿಜ್ಞಾನಿಗಳು ಈ ಪ್ರಕರಣವನ್ನು ಅಧ್ಯಯನ ನಡೆಸಿದ ಹೊಸ ರಕ್ತದ ಗುಂಪು ಪತ್ತೆಯಾಗಿದೆ ಎನ್ನಲಾಗಿದೆ. ಈಗಾಗಲೇ A, B, AB, O ಗುಂಪುಗಳು ಇದ್ದು, ಇವುಗಳ ಸಾಲಿಗೆ ER ಕೂಡಾ ಸೇರ್ಪಡೆಗೊಂಡಿದೆ.
ಅಲ್ಲದೇ ಈ ಬಗ್ಗೆ ಮಾತನಾಡಿದ ಸಂಶೋಧಕರು,”ದೇಹದಲ್ಲಿ ಒಂದೇ ರಕ್ತದ ಗುಂಪು ಇಲ್ಲದಿದ್ದರೆ ಗಂಭೀರ ಸಮಸ್ಯೆಗಳು ಎದುರಾಗಬಹುದು ಎಂದಿದ್ದಾರೆ. ತಾಯಿ ಮಗು ವಿಭಿನ್ನ ರಕ್ತದ ಗುಂಪುಗಳನ್ನು ಹೊಂದಿದಾಗ ತಾಯಿಯ ರೋಗ ನಿರೋಧಕ ಶಕ್ತಿ ತೀವ್ರವಾಗಿ ಪ್ರತಿಕ್ರಿಯೆ ನೀಡುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.