ಬುರ್ಖಾ ಧರಿಸಿ ಅರ್ಚಕನ ಓಡಾಟ | ರಿಕ್ಷಾ ಚಾಲಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ | ಬುರ್ಖಾ ಧರಿಸಿ ಓಡಾಡಲು ಈತ ನೀಡಿದ ಕಾರಣ ಕೇಳಿ ಪೊಲೀಸರೇ ಶಾಕ್!!!

ವ್ಯಕ್ತಿಯೋರ್ವ ಬುರ್ಖಾ ಧರಿಸಿ ಓಡಾಡುತ್ತಿದ್ದಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಈ ಘಟನೆ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆದಿದೆ. ಇಲ್ಲಿಗೆ ಸಮೀಪದ ಕೊಯಿಲಾಂಡಿಯಲ್ಲಿ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದೇವಸ್ಥಾನದ ಅರ್ಚಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಕ್ಟೋಬರ್ 7 ರಂದು ಈ ಘಟನೆ ನಡೆದಿದೆ. ಜಿಷ್ಣು ನಂಬೂತಿರಿ (28 ವರ್ಷ) ಎಂಬಾತನೇ ಬುರ್ಖಾ ಧರಿಸಿ ಸಿಕ್ಕಿಬಿದ್ದ ವ್ಯಕ್ತಿ. ಕೊಯಿಲಾಂಡಿ ಜಂಕ್ಷನ್ ನಲ್ಲಿ ಆಟೋ ಚಾಲಕರ ಕೈಗೆ ಈತ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಿಕ್ಷಾ ಚಾಲಕರು ಜಿಷ್ಣು ಹೆಂಗಸರ ಹಾಗೆ ಬುರ್ಖಾ ಧರಿಸಿ ಅಲೆದಾಡುತ್ತಿರುವುದನ್ನು ಕಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಯಾವುದೇ ಅಪರಾಧ ಮಾಡಿರುವ ಬಗ್ಗೆ ಆತ‌ನ ವಿರುದ್ಧ ದೂರು ಬಂದಿಲ್ಲ. ಆದ್ದರಿಂದ, ಅರ್ಚಕನ ಸಂಬಂಧಿಕರು ಪೊಲೀಸ್ ಠಾಣೆಗೆ ಬಂದ ನಂತರ ನಾವು ಅವನನ್ನು ಬಿಟ್ಟಿದ್ದೇವೆ ಎಂದು ಪೊಲೀಸರು ಹೇಳಿದರು.

ಇಲ್ಲಿನ ಮೆಪ್ಪಯೂರು ಬಳಿಯ ದೇವಸ್ಥಾನವೊಂದರಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ, ತನಗೆ ಚಿಕನ್ ಗುನ್ಯಾ ಇರುವ ಕಾರಣ ಬುರ್ಖಾ ಹಾಕಿಕೊಂಡಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಪ್ರಾಥಮಿಕ ಪರೀಕ್ಷೆಯಲ್ಲಿ ಚಿಕನ್ ಗುನ್ಯಾದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅರ್ಚಕನ ಹೆಸರು, ವಿಳಾಸ ಮತ್ತು ಇತರ ವಿವರಗಳನ್ನು ಪರಿಶೀಲಿಸಿ, ಬಿಡುಗಡೆ ಮಾಡಿದ್ದಾರೆ.

Leave A Reply

Your email address will not be published.