McDonald ನಲ್ಲಿ ಊಟ ಮಾಡುತ್ತಿದ್ದ ಯುವಕನ ಮೇಲೆ ಗುಂಡು ಹಾರಿಸಿದ ಪೊಲೀಸ್ !!!
ಅಮೇರಿಕಾದಲ್ಲಿ ನಡೆದ ಘಟನೆಯೊಂದು ಆಶ್ಚರ್ಯಗೊಳಿಸಿದೆ. ಮೆಕ್‌ಡೊನಾಲ್ಡ್ (McDonald) ರೆಸ್ಟೋರೆಂಟ್ ಎಂಬ ಹೋಟೆಲ್ ಪಾರ್ಕಿಂಗ್ ಲಾಟ್‌ನಲ್ಲಿ ಕಾರು ನಿಲ್ಲಿಸಿ ಬಾಲಕನೊಬ್ಬ ಊಟ ಮಾಡುತ್ತಿದ್ದ. ಆದರೆ ಏಕಾಏಕಿ ಪೊಲೀಸ್ ಅಧಿಕಾರಿಯೊಬ್ಬರು ಬಾಲಕನ ಮೇಲೆ ಇತ್ತೀಚೆಗೆ ನೇಮಕಗೊಂಡ ಪೊಲೀಸ್ ಅಧಿಕಾರಿಯೊಬ್ಬರು 10 ಬಾರಿ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿ ನಡೆಸಿರುವ ವಿಡಿಯೊ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಪೋಲೀಸರ ವರದಿ ಪ್ರಕಾರ ಸ್ಯಾನ್ ಅಂಟೋನಿಯೋದಲ್ಲಿರುವ ಮೆಕ್‌ಡೊನಾಲ್ಡ್ ರೆಸ್ಟೋರೆಂಟ್‌ನ ಪಾರ್ಕಿಂಗ್ ಲಾಟ್‌ನಲ್ಲಿ ಕಾರು ನಿಲ್ಲಿಸಿ ಬಾಲಕ ಹಾಗೂ ಆತನ ಗೆಳೆಯ ಊಟ ಮಾಡುತ್ತಿದ್ದರು. ಆ ವೇಳೆ ಬ್ರೆನೆಂಡ್ ಎಂಬ ಪೊಲೀಸ್ ಅಧಿಕಾರಿಯು ಕಾರಿನ ಬಳಿ ಬಂದು ಮೊದಲಿಗೆ ಐದು ಸುತ್ತು ಗುಂಡು ಹಾರಿಸಿದ್ದಾರೆ. ಇದರಿಂದ ವಿಚಲಿತಗೊಂಡ ಬಾಲಕನು ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಕೂಡಲೇ ಪೊಲೀಸ್ ಅಧಿಕಾರಿಯು ಮತ್ತೆ ಐದು ಸುತ್ತು ಗುಂಡು ಹಾರಿಸಿದ್ದಾರೆ. ಪಾರ್ಕಿಂಗ್ ಲಾಟ್‌ನಲ್ಲಿ ಪೊಲೀಸ್ ಅಧಿಕಾರಿಗೆ ಅನಾಮಧೇಯ ಕರೆ ಹಾಗೂ ವಿಚಿತ್ರ ಸದ್ದು ಕೇಳಿಸಿದೆ. ಅಲ್ಲದೆ, ಬಾಲಕನು ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದಾಗಿ ಹೆಚ್ಚಿನ ಪೊಲೀಸರು ರೆಸ್ಟೋರೆಂಟ್‌ಗೆ ಬರಬೇಕು ಎಂಬುದಾಗಿ ಕರೆ ಮಾಡಿ ನೂತನ ಪೊಲೀಸ್ ಅಧಿಕಾರಿ ಮನವಿ ಮಾಡಿದ್ದಾರೆ. ಈ ವೇಳೆ ಬಾಲಕ ಕಾರು ಚಲಾಯಿಸಿದ ಕಾರಣ ಗುಂಡು ಹಾರಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ತಿಳಿಸಿದ್ದಾರೆ
ಆದರೆ ಪೊಲೀಸ್ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಪೊಲೀಸ್ ಅಧಿಕಾರಿ ಫೈರ್ ಮಾಡಿದ್ದಾರೆ ಎಂದು ಸಹ ಸುದ್ದಿಯಾಗಿದೆ. ಅಲ್ಲದೆ ಬಾಲಕನಿಗೆ ಗಂಭೀರವಾಗ ಗಾಯಗಳಾಗಿದ್ದು ಆತನಿಗೆ ಆದ ಗಾಯಗಳಿಗಾಗಲಿ ಅಥವಾ ಮಾನ ನಷ್ಟಗಳಿಗೆ ಹೊಣೆ ಯಾರು ಎಂಬ ಹಲವಾರು ರೀತಿಯ ಗೊಂದಲ ಸೃಷ್ಟಿ ಮಾಡುವ ಕಾಮೆಂಟ್ಗಳು ಜಾಲತಾಣದಲ್ಲಿ ಹರಿದಾಡುತ್ತಿದೆ. ಮತ್ತು ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು. ಬಾಲಕನಿಗೆ ಹೆಚ್ಚಿನ ಚೇತರೀಕೆಯಾದಾಗ ಘಟನೆ ಬಗ್ಗೆ ವಿಚಾರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.