ಮೊಡವೆ ಅಂತ ಟೆನ್ಶನ್ ಆಗಬೇಡಿ, ಹೀಗೆ ಟ್ರೈ ಮಾಡಿ
ಅಂದ ಚಂದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೀತಿಯ ಸ್ಕಿನ್ ಕೇರ್ ಉತ್ಪನ್ನಗಳನ್ನು ಹಚ್ಚುವುದು ಸಾಮಾನ್ಯವಾಗಿದೆ. ಒಬ್ಬೊಬ್ಬರ ತ್ವಚೆಯು ವಿಭಿನ್ನವಾಗಿರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಲೋಷನ್ಗಳನ್ನು ಮುಖದ ಚರ್ಮಕ್ಕೆ ಅಪ್ಲೈ ಮಾಡುವುದು ಸೂಕ್ತವಲ್ಲ. ಇದರಲ್ಲಿ ಹಲವು ರಾಸಾಯನಿಕಗಳಿರುತ್ತದೆ. ಹಾಗಾಗಿ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಉಪಯೋಗಿಸಿ ಅದರಲ್ಲಿ ಲೋಶನ್ ಗಳನ್ನು ನೀವೇ ತಯಾರಿಸಿ ಮುಖಕ್ಕೆ ಹಚ್ಚಿ.
ಬೇವಿನ ಪ್ರಯೋಜನಗಳುಆರೋಗ್ಯಕರವಾದಂತಹ ಚರ್ಮಕ್ಕೆ ಬೇವು ಆಂಟಿಆಕ್ಸಿಡೆಂಟ್ ಗಳು ಮತ್ತು ಖನಿಜಗಳ ಅಂಶಗಳನ್ನು ಬೇವು ನೀಡುತ್ತದೆ. ಕೇವಲ ತಲೆ ಕೂದಲಿಗೆ ಮಾತ್ರವಲ್ಲದೆ ಮುಖದ ಪೂಜೆಯ ರಹಸ್ಯಕ್ಕೂ ಕೂಡ ಬೇವು ಸಾಕ್ಷಿಯಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಯಲ್ಲಿ ಸಮೃದ್ಧವಾಗಿದೆ.
ಹೀಗಾಗಿ ಮುಖದಲ್ಲಿರುವ ಸುಕ್ಕುಗಟ್ಟು, ಪಿಂಪಲ್ ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಅಲ್ಲದೆ ವೈಟ್ ಹೆಡ್ಸ್, ಬ್ಲಾಕ್ ಹೆಡ್ ಗಳನ್ನು ತೆಗೆದು ಹಾಕಿ ತ್ವಚೆಯನ್ನು ಹೈಡ್ರೇಟ್ ಆಗಿ ಇಡಲು ಸಹಾಯಮಾಡುತ್ತದೆ.
ಅಲೋವೆರಾಕೂದಲಿಗೆ ಮಾತ್ರ ಸೀಮಿತವಲ್ಲದೆ ಮುಖದ ಕಾಂತಿಗೂ ಇದು ಬ್ಯೂಟಿ ನೀಡುತ್ತದೆ. ಪ್ರತಿದಿನ ರಾತ್ರಿ ನಿಮ್ಮ ತ್ವಚೆಗೆ ಹಚ್ಚಿ ನಂತರ ಮರುದಿನ ಬೆಳಗ್ಗೆ ತೊಳೆದರೆ ನಿಮ್ಮ ಹತ್ತಿರ ಹೊಳೆಯುತ್ತದೆ. ಸುಕ್ಕು ಕಟ್ಟಿದಂತಹ ಕಾಣುವ ಚರ್ಮಕ್ಕೆ ಒಳ್ಳೆಯ ತ್ವಚೆಯನ್ನು ನೀಡುತ್ತದೆ.
ಅಲೋವೆರಾದಲ್ಲಿ ನಾನಾ ರೀತಿಯ ಜೆಲ್ ಗಳು ಬರುತ್ತದೆ ಆದರೆ ಅವುಗಳನ್ನು ಪರಿಶೀಲಿಸಿ, ನಂತರ ತೆಗೆದುಕೊಳ್ಳುವುದು ಸೂಕ್ತ. ತುಂಬಾ ಉಷ್ಣವಾದಾಗ ಮುಖದಲ್ಲಿ ಮೊಡವೆಗಳು ಹುಟ್ಟುವುದು ಸಾಮಾನ್ಯ ಅವುಗಳಿಗೆ ತಂಪನ್ನು ನೀಡುತ್ತದೆ ಈ ಅಲೋವೆರಾ. ಮನೆಯಲ್ಲಿ ಬೆಳೆಸಿದ ಅಲೋವೆರವನ್ನು ಹಚ್ಚಿದರೆ ಇನ್ನೂ ಒಳಿತು. ಅರಿಶಿನ ಪುಡಿ ಮತ್ತು ವಿಟಮಿನ್ ಇಕ್ವಿಡ್ ಜೊತೆಗೆ ಅಲೋವೆರಾ ಜೆಲ್ ಬಳಸಿದರೆ ಕಣ್ಣಿನ ಡಾರ್ಕ್ ಸರ್ಕಲ್ ಮಾಯವಾಗುತ್ತದೆ.