ಕಾಮುಕ ವೈದ್ಯನಿಂದ 19 ರ ಯುವತಿಯ ಮೇಲೆ ಕ್ಲಿನಿಕ್ ನಲ್ಲೇ ಕಾಮಚೇಷ್ಠೆ | ಅಣ್ಣಂದಿರಿಗೆ ಹೇಳಿದ ಯುವತಿ, ನಂತರ ನಡೆದಿದ್ದೇನು?

ವೈದ್ಯರೆಂದರೆ ದೇವರಿಗೆ ಸಮ. ಅದೇ ನಂಬಿಕೆ ಹಾಗೂ ವಿಶ್ವಾಸದಿಂದ ಜನ ಬರುತ್ತಾರೆ. ಅದೇ ನಂಬಿಕೆಯಿಂದ ಓರ್ವ ಯುವತಿಯೊಬ್ಬಳು ಡಾಕ್ಟರ್ ಹತ್ತಿರ ಹೋಗಿದ್ದಾಳೆ. ಆದರೆ ಆ ವೈದ್ಯ ಆ ಯುವತಿಯ ಮೇಲೆ ಲೈಂಗಿಕ ಚೇಷ್ಟೆ ಮಾಡಿರುವ ಘಟನೆ ನಡೆದಿದೆ. ಈ ವಿಷಯ ಊರಿನವರಿಗೆ ತಿಳಿದು ಸಿಟ್ಟಿಗೆದ್ದಾಗ ಡಾಕ್ಟರ್ ಪರಾರಿಯಾಗಿದ್ದಾನೆ.

 

ಈ ಕಾಮುಕ ಡಾಕ್ಟರ್‌ಗೆ ತನ್ನಲ್ಲಿ ಚಿಕಿತ್ಸೆಗೆಂದು ಬರುವ ಹೆಣ್ಣು ಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ.

ಚಂದ್ರಾ ಲೇಔಟ್ ನಲ್ಲಿ ಆರುಂಧತಿ ನಗರದಲ್ಲಿ ಕ್ಲಿನಿಕ್ ಇಟ್ಟಿದ್ದ ಈತ, ಚಿಕಿತ್ಸೆ ನೀಡುವ ನೆಪದಲ್ಲಿ ಲೈಂಗಿಕ ಚೇಷ್ಟೆ ತೀರಿಸಿಕೊಳ್ಳುತ್ತಿದ್ದ. ಇತ್ತೀಚೆಗೆ ಈತನ ಕ್ಲಿನಿಕ್ ಗೆ 19ರ ಯುವತಿಯೊಬ್ಬಳು ಹೊಟ್ಟೆ ನೋವು ಎಂದು ಚಿಕಿತ್ಸೆಗೆ ಹೋಗಿದ್ದಳು. ಯುವತಿಯ ಜತೆ ಬಂದಿದ್ದ ಅಜ್ಜಿಯನ್ನು ಹೊರಗೆ ಕೂರಿಸಿ ಯುವತಿಗೆ ಗ್ಲುಕೋಸ್ ಹಾಕಿಸಿ ಮಲಗಿಸಿದ್ದ ವೈದ್ಯ ಉಬೇದುಲ್ಲ. ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

ಆದರೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವತಿಗೆ, ಎದ್ದರೆ ಗ್ಲುಕೋಸ್ ಹಾಕಿದ ಕೈಯಿಂದ ರಕ್ತ ಬರುತ್ತೆ ಎಂದು ಹೆದರಿಸಿದ್ದ. ಇದನ್ನು ಇತರರಿಗೆ ಹೇಳಬಾರದು ಎಂದು ಬೆದರಿಕೆ ಹಾಕಿದ್ದ ಕೂಡಾ ಎನ್ನಲಾಗಿದೆ. ಬೆದರಿಕೆ ಹಾಕಿ ಮನೆಗೆ ಕಳಿಸಿದ್ದ. ವೈದ್ಯನಿಗೆ ಹೆದರಿ ಯುವತಿ ಮನೆಯಲ್ಲಿ ಯಾರಿಗೂ ಹೇಳದೆ ಸುಮ್ಮನಿದ್ದಳು. ಅನಂತರ ಘಟನೆ ಬಗ್ಗೆ ನೆನೆದೇ ಯುವತಿಗೆ ಮತ್ತೆ ಜ್ವರ ಬಂದಿತ್ತು. ಮತ್ತೆ ಅದೇ ಕ್ಲಿನಿಕ್ ಗೆ ಹೋಗೋಣ ಎಂದು ಮತ್ತೆ ಹೋಗಲು ಮನೆಯವರು ಮುಂದಾಗಿದ್ದರು. ಇದರಿಂದ ಹೆದರಿದ ಯುವತಿ ಆ ಕ್ಲಿನಿಕ್‌ಗೆ ಬರಲು ಒಪ್ಪಿರಲಿಲ್ಲ. ಯುವತಿಯ ಅಣ್ಣಂದಿರು ಕಾರಣ ಕೇಳಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ. ಆಕ್ರೋಶಗೊಂಡ ಯುವತಿಯ ಅಣ್ಣಂದಿರು ಕ್ಲಿನಿಕ್‌ಗೆ ದಾಳಿ ಮಾಡಿ ಧ್ವಂಸ ಮಾಡಿದ್ದಾರೆ.

Leave A Reply

Your email address will not be published.