ಕೇವಲ 8,499 ರೂ. ಬೆಲೆಗೆ ಸಿಗಲಿದೆ Redmi 10 ಮೊಬೈಲ್ | ಭರಪೂರ ಫೀಚರ್ಸ್ ಇರೋ ಈ ಮೊಬೈಲ್ ವಿಶೇಷತೆ ಹೀಗಿದೆ ನೋಡಿ !

Share the Article

ಕಡಿಮೆ ಬೆಲೆಯ ಜತೆ ಹೆಚ್ಚಿನ ಫೀಚರ್ ನೀಡುವುದು ಶಿಯೋಮಿ ಕಂಪನಿಯ ಚಾಳಿ ! ಅದಕ್ಕಾಗೇ ಜನ ಮುಗಿ ಬಿದ್ದು ಶಿಯೋಮಿ ಫೋನುಗಳನ್ನು ಕೊಂಡು ಕೊಳ್ಳುತ್ತಿರುವುದು. ಶಿಯೋಮಿಯ ಸ್ಮಾರ್ಟ್​ಫೋನ್​​ಗಳು ಬರಪೂರ್ ಆಗಿ ಸೇಲ್ ಕಾಣುತ್ತಿದೆ. ಈ ಪೈಕಿ ಇದೀಗ ನಮಗೆ ಕಾಣಸಿಗೋದು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆದ ಹೊಸ ರೆಡ್ಮಿ10. ಅಷ್ಟೇ ಅಲ್ಲದೆ ಈ ಫೋನಿನ ಮೇಲೆ ಭರ್ಜರಿ ಡಿಸ್ಕೌಂಟ್ ಕೂಡಾ ಲಭ್ಯವಿದ್ದು, ದಸರಾ ಬಿಗ್ ಸೇಲ್ ನಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯ.

ಕಡು ಬಲಿಷ್ಠವಾದ ದೀರ್ಘ ಕಾಲಿಕಾ ಬಾಳಿಕೆ ಬರುವ 6,000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್​ಗೆ ಅಳವಡಿಸಲಾಗಿದ್ದು, ವಾಟರ್‌ಡ್ರಾಪ್-ಶೈಲಿಯ ಡಿಸ್‌ಪ್ಲೇ, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ​ನಿಂದ ಕೂಡಿದೆ. ಭರ್ಜರಿ ಫೀಚರ್​ಗಳಿಂದ ತುಂಬಿ ತುಳುಕುತ್ತಿರುವ ಈ ಫೋನ್ ಅನ್ನು ಕೇವಲ 8,999 ರೂ. ಗಳಿಗೆ ಖರೀದಿಸಬಹುದಾಗಿದ್ದು, ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮಾರಾಟ ಶುರು ಮಾಡಿದೆ. ಮೊದಲ ಸೇಲ್ ಆದ ಕಾರಣ ಭರ್ಜರಿ ಆಫರ್​ಗಳನ್ನು ಕೂಡ ನೀಡಲಾಗಿದ್ದು, ಇನ್ನಷ್ಟು ಡಿಸ್ಕೌಂಟ್​​ಗೆ ಈ ಫೋನನ್ನು ನಿಮ್ಮದಾಗಿಸಬಹುದು.

ಭಾರತದ ನಂ.1 ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಶಿಯೋಮಿ ತನ್ನ ಜನಪ್ರಿಯ ‘Redmi 10’ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದ್ದು, ಶಿಯೋಮಿ ಇಂದಿನಿಂದ ಆರಂಭಿಸಿರುವ ‘ದಸರಾ ಬಿಗ್ ಸೇಲ್‌’ ನಲ್ಲಿ 9 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ‘Redmi 10’ ಸ್ಮಾರ್ಟ್‌ಫೋನನ್ನು ಮಾರಾಟಕ್ಕೆ ಇಡಲಾಗಿದೆ.

ಈ ‘Redmi 10’ ಸ್ಮಾರ್ಟ್‌ಫೋನ್ ಬಿಡುಗಡೆ ಯಾದಲ್ಲಿಂದ ಬರೋಬ್ಬರಿ ಆರು ಸಾವಿರ ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿದ್ದು, ಕಳೆದ ಮಾರ್ಚ್ ತಿಂಗಳಿನಲ್ಲಿ ದೇಶದಲ್ಲಿ ಬಿಡುಗಡೆಯಾದಾಗ ಈ 14,999 ರೂ. ಬೆಲೆಯನ್ನು ಹೊಂದಿತ್ತು. ಆದರೆ, ಇದೀಗ ಹಬ್ಬದ ಕೊಡುಗೆಯಾಗಿ 6000 ಸಾವಿರ ರೂ. ಬೆಲೆ ಕಡಿತಗೊಂಡಿದ್ದು, ಇದರ ಜೊತೆಗೆ HDFC ಬ್ಯಾಂಕ್ ಕಾರ್ಡ್‌ಗಳ ಮೇಲೆ ನೀಡಲಾಗಿರುವ 500 ರೂ. ಕ್ಯಾಶ್‌ಬ್ಯಾಕ್ ಸೇರಿ ಕೇವಲ 8499 ರೂ.ಗಳ ಆರಂಭಿಕ ಬೆಲೆಯಲ್ಲಿ ‘Redmi 10’ ಸ್ಮಾರ್ಟ್‌ಫೋನ್ ಅನ್ನು ಮಾರಾಟಕ್ಕಿಡಲಾಗಿದೆ.

ಅಂತಹದೇನಿದೆಯಪ್ಪ ಈ ಫೋನಿನಲ್ಲಿ ವಿಶೇಷತೆ ಇಂದು ನೋಡಿದರೆ, ರೆಡ್ಮಿ10 ಸ್ಮಾರ್ಟ್‌ಫೋನ್‌ 6.7 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ನೀಡಲಾಗಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI 13 ಜೊತೆಗೆ ರನ್ ಆಗುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ 2GB ವರೆಗೆ ಇಂಟರ್‌ಬಿಲ್ಟ್‌ ಸ್ಟೋರೇಜ್‌ ಬಳಸಿಕೊಂಡು ವಾಸ್ತವಿಕವಾಗಿ RAM ಅನ್ನು ವಿಸ್ತರಿಸಬಹುದು.

ವಿಶೇಷವಾಗಿ ಈ ಪೋನ್ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಕ್ಯಾಮರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಒಳಗೊಂಡಿದೆ. ಉಳಿದಂತೆ ಧೀರ್ಘ ಸಮಯ ಬಾಳಿಕೆ ಬರುವ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದಕ್ಕೆ ಪೂರಕವಾಗಿ ಆದಷ್ಟು ಬೇಗ ಚಾರ್ಜ್ ಆಗುವಂತಹ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಬಂಡಲ್ ಚಾರ್ಜರ್ 10W ವರೆಗೆ ಚಾರ್ಜ್ ಮಾಡುವುದನ್ನು ಮಾತ್ರ ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, GPS/ A-GPS, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ.ಇನ್ನೂ ಇಂದಿನಿಂದ ಬಿಗ್ ದಸರಾ ಸೇಲ್ ಆರಂಭವಾಗಿದ್ದು, ಈ ಸೇಲ್ ಅಕ್ಟೋಬರ್ 8 ರವರೆಗೆ ಲಭ್ಯವಿದೆ.

Leave A Reply