FD ದರದಲ್ಲಿ ಮಹತ್ತರ ಬದಲಾವಣೆ ಮಾಡಿದ ಬ್ಯಾಂಕ್, ಗ್ರಾಹಕರಿಗೆ ಗುಡ್ ನ್ಯೂಸ್ !

RBI ಸೆಪ್ಟೆಂಬರ್ 30 ರಂದು ರೆಪೊ ದರವನ್ನು 5.9% ಕ್ಕೆ ಏರಿಸಿದೆ. ಇದರ ಬೆನ್ನಲ್ಲೇ ಸಾರ್ವಜನಿಕ ವಲಯದ ಬ್ಯಾಂಕ್ ಕೂಡ ನಿಶ್ಚಿತ ಠೇವಣಿ ಬಡ್ಡಿಯನ್ನು ಹೆಚ್ಚಿಸಿದೆ. ಈಗ ಇಂಡಿಯನ್ ಬ್ಯಾಂಕ್ ಸ್ಥಿರ ಠೇವಣಿ ಯೋಜನೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಹೊಸ ಬಡ್ಡಿದರಗಳು ಅಕ್ಟೋಬರ್ 4 ರಿಂದ ಜಾರಿಗೆ ಬಂದಿವೆ. ಅದರಂತೆ ಬಡ್ಡಿದರಗಳನ್ನು 0.05% ರಿಂದ 0.50% ಕ್ಕೆ ಹೆಚ್ಚಿಸಲಾಗಿದೆ.

 

ಅಷ್ಟೇ ಅಲ್ಲದೆ ಇಂಡಿಯನ್ ಬ್ಯಾಂಕ್ ಹಿರಿಯ ನಾಗರಿಕರಿಗೆ 610 ದಿನಗಳವರೆಗೆ 6.25% ಬಡ್ಡಿಯಲ್ಲಿ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು ಸಹ ನೀಡುತ್ತದೆ. ಸೂಪರ್ ಹಿರಿಯ ನಾಗರಿಕರಿಗೆ (80 ವರ್ಷಕ್ಕಿಂತ ಮೇಲ್ಪಟ್ಟವರು): 6.50%
ಈ ಹೊಸ ಬಡ್ಡಿ ದರಗಳ ಹೆಚ್ಚಳ ಹೊಸ ಹೂಡಿಕೆಗಳಿಗೆ ಮಾತ್ರ ಇರಲಿವೆ. ಹಳೆಯ ಬಡ್ಡಿದರಗಳು ಈ ಹಿಂದೆ ಇದ್ದಂತೆ ಇರುತ್ತವೆ.

ಹೊಸ ಬಡ್ಡಿ ದರಗಳು ಇಂತಿವೆ:
121 – 189 ದಿನಗಳು : 3.85%
181 ದಿನಗಳು – 9 ತಿಂಗಳುಗಳು : 4.5%
9 ತಿಂಗಳು – 1 ವರ್ಷ : 4.75%
1 ವರ್ಷ: 5.5%
2 ವರ್ಷ: 5.6%

610 ದಿನಗಳ ಹಿರಿಯ ನಾಗರಿಕ ಯೋಜನೆ:

ಈ ಬಡ್ಡಿ ದರ ಸಾಮಾನ್ಯ ಗ್ರಾಹಕರಿಗೆ 6.10 % ಇದ್ದರೆ,
ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರು): 6.25%
ಸೂಪರ್ ಹಿರಿಯ ನಾಗರಿಕರಿಗೆ (80 ವರ್ಷಕ್ಕಿಂತ ಮೇಲ್ಪಟ್ಟವರು): 6.50% ಇರಲಿದೆ. ಬಡ್ಡಿ ದರದಲ್ಲಿ ಸಣ್ಣ ಮಟ್ಟದ ಏರಿಕೆ ಥರ ಕಂಡು ಬರುತ್ತಿದ್ದರೂ, ಲಕ್ಷಾಂತರ ಹೂಡಿಕೆ ಮಾಡಿದಾಗ ಬರುವ ಲಾಭ ಅಂಶದಲ್ಲಿ ದೊಡ್ಡ ವ್ಯತ್ಯಾಸ, ಅಂದರೆ ಲಾಭ ಗೋಚರಿಸಲಿದೆ.

Leave A Reply

Your email address will not be published.