ಅಡಿಕೆ ಬೆಳೆಗಾರರೇ ಗಮನಿಸಿ | ರೈತರಿಗಾಗಿ ಅಡಿಕೆ ಸುಲಿಯುವ ಯಂತ್ರ ಜೊತೆಗೆ ದೋಟಿಗಳು ಉಚಿತ!
ಅಡಿಕೆಯ ಬೆಲೆ ದಿನ ದಿನ ಹೆಚ್ಚಾಗುತ್ತಿದ್ದು ಅಡಿಕೆಯ ವಿಸ್ತೀರ್ಣ ಕೂಡ ಜಾಸ್ತಿಯಾಗುತ್ತಿದೆ. ಅಡಿಕೆ ಬೆಳೆಯನ್ನು ಬೆಳೆಯಲು ಮತ್ತು ಅಡಿಕೆಯನ್ನು ರಾಶಿಯಾಗಿ ಮಾಡಲು ಕೆಲಸಗಾರರು ಬೇಕಾಗುತ್ತಾರೆ. ಆದರೆ ಇಂದಿನ ಸಮಯದಲ್ಲಿ ಕೂಲಿಗಾರರ ಕೊರತೆ ಹೆಚ್ಚಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ನೀಗಿಸಲು ಮಾರುಕಟ್ಟೆಯಲ್ಲಿ ಹೊಸ ಹೊಸ ಯಂತ್ರೋಪಕರಣಗಳು ಬರುತ್ತಿದೆ. ಹೊಸ ಹೊಸ ಖಾಸಗಿ ಉದ್ಯಮಿಗಳು ಹೊಸ ಹೊಸ ಆವಿಷ್ಕಾರದೊಂದಿಗೆ ಬರುತ್ತಿರುವುದರಿಂದ ಯಂತ್ರೋಪಕರಣಗಳ ಬೆಲೆ ಕೂಡಾ ಕಮ್ಮಿಯಾಗುತ್ತಾ ಬರುತ್ತಿದೆ.
ಇಂಥದ್ದೇ ಒಂದು ಯಂತ್ರದ ಬಗ್ಗೆ, ಶಿವಮೊಗ್ಗದಲ್ಲಿ ತೈವಾನ್ ಟೆಕ್ನಾಲಜಿಯ ಯಂತ್ರ ಮಾರಾಟಕ್ಕೆ ಚಾಲನೆ ನೀಡಿದ್ದಾರೆ ಬಿವೈಆರ್. “ಕೃಷಿಯಲ್ಲಿ ಸುಧಾರಿತ ಯಂತ್ರೋಪಕರಣಗಳ ಆವಿಷ್ಕಾರ ನಡೆದು ನಿರ್ವಹಣಾ ವೆಚ್ಚ ಕಡಿಮೆಯಾಗುತ್ತಿದೆ. ಅಡಕೆ ಸುಲಿಯುವ ನೂತನ ಮಾದರಿಯ ಯಂತ್ರದಿಂದ ಕೃಷಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಕಾರ್ಮಿಕರ ಸಮಸ್ಯೆ ನೀಗುವ ಅಡಕೆ ಸುಲಿಯುವ ಯಂತ್ರ ಉಪಯೋಗವಾಗಲಿದೆ
ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
“ಕೃಷಿ ಆದಾಯ ದ್ವಿಗುಣಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ತಕ್ಕಂತೆ ತಂತ್ರಜ್ಞಾನ ಬೆಳೆಯುತ್ತಿರುವುದು ಆಶಾದಾಯಕ ಎಂದರು ತೈವಾನ್ ಟೆಕ್ನಾಲಜಿಯ ಅಡಕೆ ಸುಲಿಯುವ ಯಂತ್ರದಿಂದ ಅಡಕೆ ಸಂಸ್ಕರಣೆಗೆ ಕಡಿಮೆ ಸಮಯ ತಗುಲುತ್ತದೆ” ಎಂದು ಪ್ರಥಮ ಸ್ಥಾನದಲ್ಲಿರುವ ತೈವಾನ್ ಟೆಕ್ನಾಲಜಿಯ ಅಡಕೆ ಸುಲಿಯುವ ಯಂತ್ರ ಮಾರಾಟಕ್ಕೆ ಶಿವಮೊಗ್ಗದಲ್ಲಿ ಚಾಲನೆ ನೀಡಿ ಮಾತನಾಡುತ್ತಾ ಹೇಳಿದ್ದಾರೆ.
ತೈವಾನ್ ಟೆಕ್ನಾಲಜಿಯ ನೂತನ ಯಂತ್ರ ಅಡಕೆ ಬೆಳೆಗಾರರಿಗೆ ಸ್ನೇಹಿಯಾಗಿದೆ. 3,4,6,8 ಹಾಗೂ 10 ಬೆಲ್ಟ್ ಗಳೊಂದಿಗೆ ಲಭ್ಯವಿದೆ. 6,8,10 ಬೆಲ್ಟಿನ ಯಂತ್ರ ಖರೀದಿಸಿದವರಿಗೆ ಉಚಿತವಾಗಿ 60 ಅಡಿಯ ಕಾರ್ಬನ್ ಫೈಬರ್ ದೋಟಿ ನೀಡಲಾಗುತ್ತದೆ . 6 ಬೆಲ್ಟ್ ನ ಯಂತ್ರದಿಂದ ಗಂಟೆಗೆ 14 -15 ಕ್ವಿಂಟಾಲ್ ಅಡಕೆ ಸುಲಿಯಬಹುದು. 8 ಬೆಲ್ಟ್ ನ ಯಂತ್ರ ಗಂಟೆಗೆ 18 ರಿಂದ 19 ಕ್ವಿಂಟಾಲ್ ಸುಲಿಯುವ ಸಾಮರ್ಥ್ಯ ಹೊಂದಿದೆ . 10 ಬೆಲ್ಟ್ ನ ಯಂತ್ರ ತಾಸಿಗೆ 20-22 ಕ್ವಿಂಟಾಲ್ ಅಡಕೆ ಸುಲಿಯಬಲ್ಲದು .
ಶಿವಮೊಗ್ಗ ಸಾಗರ ರಸ್ತೆಯ ಮಲೆನಾಡು ಸಿರಿ ಎದುರಿನ ಮೆಬೆನ್ಸ್ ಇಂಜಿನಿಯರಿಂಗ್ ಸಲ್ಯೂಷನ್ಸ್ ನಲ್ಲಿ ತೈವಾನ್ ಟೆಕ್ನಾಲಜಿಯ ಅಡಕೆ ಸುಲಿಯುವ ಯಂತ್ರಗಳು ಲಭ್ಯವಿವೆ. ಸಂಪರ್ಕ ಸಂಖ್ಯೆ : 8762143591 ಹಾಗೂ 6363271820.