Walking : ವಯಸ್ಸಾಗುವಿಕೆಯನ್ನು ತಡೆಯುವ ಈ ಪರಿಣಾಮಕಾರಿ ಮಾರ್ಗದ ಬಗ್ಗೆ ತಿಳಿದುಕೊಳ್ಳಿ
ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ, ಆರೋಗ್ಯ ಕಾಪಾಡಲು ಆಹಾರ ಕ್ರಮದ ಜೊತೆಗೆ ಸರಳ ವ್ಯಾಯಾಮಗಳನ್ನು ಅನುಸರಿಸುವುದು ಕೂಡ ಅವಶ್ಯಕವಾಗಿದೆ. ವಾಕಿಂಗ್ ಮಾಡುವುದರಿಂದ ದೇಹ ಫಿಟ್ ಆಗಿರಲು ನೆರವಾಗುತ್ತದೆ. ಅದರ ಜೊತೆಗೆ ಹೇಗೆ ನಡೆಯುತ್ತೇವೆ ಎಂಬ ಅಂಶವು ಕೂಡ ಮುಖ್ಯವಾಗುತ್ತದೆ. ಸರಿಯಾಗಿ ನಡೆಯುವುದರಿಂದ ಬೆನ್ನು, ಸೊಂಟ, ಕುತ್ತಿಗೆ ಮತ್ತು ಕಾಲು ನೋವು ಕಡಿಮೆಯಾಗುತ್ತದೆ.
ವಯಸ್ಸಾದಂತೆ ಮೂಳೆಗಳ ಜೊತೆಗೆ ಸ್ನಾಯುಗಳ ಬಲ ಕಡಿಮೆಯಾಗುತ್ತದೆ. ವಾಕಿಂಗ್ ಮಾಡಿದರೆ ಸ್ನಾಯುಗಳನ್ನು ಬಲಗೊಳ್ಳುವುದಲ್ಲದೇ, ನಿಯಮಿತವಾಗಿ ನಡೆಯುವುದರಿಂದ ಕಾಲು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸಬಹುದಾಗಿದೆ. ವಾಕಿಂಗ್ ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಹೃದಯ ಮತ್ತು ಹೃದಯ ರಕ್ತನಾಳದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.
ನಡಿಗೆಯಿಂದ ತಲೆಯಿಂದ ಹಿಡಿದು ಕಾಲಿನವರೆಗೆ ದೇಹದ ಪ್ರತಿಯೊಂದು ಭಾಗವನ್ನು ಗುರಿಯಾಗಿಸಿ ಚರ್ಮವನ್ನು ಬಿಗಿಗೊಳಿಸಿ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಇದಲ್ಲದೆ, ರಕ್ತ ಪರಿಚಲನೆಯನ್ನು ಸಹ ಸುಧಾರಿಸಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.
ವಾಕಿಂಗ್ ಮಾಡುವುದರಿಂದ ವ್ಯಕ್ತಿಯ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ವಾಕಿಂಗ್ ನಿಂದ ಮೆದುಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಮತ್ತು ಗ್ಲೂಕೋಸ್ ಪೂರೈಕೆಯಾಗಿ, ಅಪಧಮನಿಗಳನ್ನು ಮುಚ್ಚುವ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಪಾರ್ಶ್ವವಾಯುವಿನ ಅಪಾಯದಿಂದಲು ಕೂಡ ತಪ್ಪಿಸಿಕೊಳ್ಳಬಹುದು.
ವೇಗದ ನಡಿಗೆಯಿಂದ ಅನೇಕ ಪ್ರಯೋಜನಗಳಿವೆ. ವೇಗದ ನಡಿಗೆಯಿಂದ ವ್ಯಕ್ತಿಯ ಹೃದಯ ಬಡಿತ ಹೆಚ್ಚಾಗಿ, ವೇಗವಾಗಿ ನಡೆದಾಗ ಹೆಚ್ಚು ಕ್ಯಾಲೊರಿಗಳನ್ನು ಸುಡಬಹುದಾಗಿದೆ. ರಿವರ್ಸ್ ವಾಕಿಂಗ್, ಹೃದಯ ಮತ್ತು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುವುದರ ಜೊತೆಗೆ ಹೆಚ್ಚು ನಡೆದಂತೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಕೂಡ ಕಡಿಮೆಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಒತ್ತಡ ಸಾಮಾನ್ಯ ಸಮಸ್ಯೆಯಾಗಿದ್ದು, ಒತ್ತಡವು ಬೊಜ್ಜು, ಮೆದುಳು ಸಂಬಂಧಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದರೆ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ದೇಹದಲ್ಲಿನ ಒತ್ತಡ ಕಡಿಮೆಯಾಗುತ್ತದೆ. ಯಾವುದೇ ರೋಗಗಳನ್ನು ತಡೆಗಟ್ಟಲು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಅಗತ್ಯ ವಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಲು ವಾಕಿಂಗ್ ಮಾಡುವುದು ಒಳ್ಳೆಯದು.
ದಿನಕ್ಕೆ ಕನಿಷ್ಠ 30 ನಿಮಿಷ ನಡೆಯುವುದರಿಂದ ರೋಗನಿರೋಧಕ ಹೆಚ್ಚುತ್ತದೆ. ತೂಕ ಇಳಿಕೆ, ಆರೋಗ್ಯ ಕಾಪಾಡಿಕೊಳ್ಳುವುದು ಸೇರಿದಂತೆ ಹಲವು ಸವಾಲುಗಳನ್ನು ಹೊಂದಿದ್ದರೆ ಮಾತ್ರ ಒಬ್ಬ ಮನುಷ್ಯ ಮಾಡುವ ವ್ಯಾಯಾಮಕ್ಕೆ ಬೆಲೆ ದೊರಕುತ್ತದೆ.
ಸಾಮಾನ್ಯವಾಗಿ ಮನೆಯಲ್ಲಿ, ಕಚೇರಿಯಲ್ಲಿ ಲಿಫ್ಟ್ಗಳಿದ್ದರೂ ಕೂಡ ಆದಷ್ಟು ಮೆಟ್ಟಿಲುಗಳನ್ನು ಬಳಸುವುದನ್ನು ಅಭ್ಯಾಸ ಮಾಡಿಕೊಂಡರೆ ಇದರಿಂದ ದೇಹಕ್ಕೆ ಕೊಂಚ ಮಟ್ಟಿಗಾದರೂ ವ್ಯಾಯಾಮ ದೊರೆದಂತಾಗುತ್ತದೆ. ಆಹಾರ ಸೇವಿಸಿದ ನಂತರ ಲಘು ನಡಿಗೆ ಮಾಡುವುದು ಉತ್ತಮವಾಗಿದ್ದು , ಇದು ದೇಹದಲ್ಲಿನ ಇನ್ಸುಲಿನ್ ಮತ್ತು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ನಡಿಗೆಯಿಂದ ಅನೇಕ ಪ್ರಯೋಜನಗಳಿದ್ದು, ದಿನನಿತ್ಯ ಅರ್ಧ ಗಂಟೆಗಳ ಕಾಲ ನಡೆಯುವ ಅಭ್ಯಾಸ ರೂಢಿಸಿಕೊಂಡರೆ ಆರೋಗ್ಯ ಕಾಪಾಡಲು ನೆರವಾಗುವುದರಲ್ಲಿ ಸಂದೇಹವಿಲ್ಲ.