ಮದುವೆಯ ನಂತರ ಹಣ ಉಳಿತಾಯ ಮಾಡಲು ದಂಪತಿಗಳು ಈ ರೀತಿ ಮ್ಯಾನೇಜ್ ಮಾಡಿಕೊಂಡರೆ ಉತ್ತಮ!!!

ಜೀವನದಲ್ಲಿ ಬದುಕಲು ಹಣ ಅಗತ್ಯಕ್ಕಿಂತ ಹೆಚ್ಚು ಬೇಡ ಅಂದ್ರೂ ಅವಶ್ಯಕತೆಗೆ ಬೇಕಾದಷ್ಟು ಹಣ ಇದ್ದಾಗ ಜೀವನ ಚೆನ್ನಾಗಿರುತ್ತೆ. ಸಿಂಗಲ್ ಆಗಿದ್ದಾಗ ಜೀವನ ಹೇಗೆ ಇದ್ರೂ ನಡೆಯುತ್ತೆ ಅನ್ನೋದು ಒಂದು ಉದ್ಧಟತನ. ಆದರೆ ಮದುವೆ ಅಂದ ಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಅಲ್ಲದೆ ನಮ್ಮ ಆಸೆ ಕನಸು ಆಕಾಂಕ್ಷೆಗಳು ನಮ್ಮ ಜೀವನವನ್ನು ಆಧಾರಿಸಿಕೊಂಡು ಇರುವುದು ಸಹಜ. ಆದರೆ ಆಸೆಗಳನ್ನು ಈಡೇರಿಸಲು ಹಣ ಬೇಕೇ ಬೇಕು. ಅದಕ್ಕಾಗಿ ಗಂಡ ಮತ್ತು ಹೆಂಡತಿ ಇಬ್ಬರೂ ಸಹ ಹೊಂದಾಣಿಕೆಯಿಂದ ಇರಬೇಕಾಗುತ್ತದೆ. ಜೋಡಿಗಳ ನಡುವೆ ಕೇವಲ ಪ್ರೀತಿ, ರೋಮ್ಯಾನ್ಸ್ ಮಾತ್ರ ಇದ್ರೆ ಸಾಕಾಗಲ್ಲ. ಬದಲಾಗಿ ಆರ್ಥಿಕವಾಗಿಯೂ ಒಬ್ಬರಿಗೊಬ್ಬರು ಬೆಂಬಲ ನೀಡಬೇಕು. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಜವಾಬ್ದಾರಿ ಒಬ್ಬ ಸಂಗಾತಿಯ ಮೇಲಿದ್ದರೆ ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಹೆಚ್ಚುತ್ತವೆ. ಹಾಗಾಗಿ ಆರ್ಥಿಕ ವಿಚಾರದಲ್ಲಿ ಮುಕ್ತ ನಿರ್ಧಾರ ಇರುವುದು ಉತ್ತಮ.

 

ನೀವು ದಂಪತಿಗಳಾಗಿ ನಿಮ್ಮ ಜೀವನವನ್ನು ಪ್ರಾರಂಭಿಸಿದಾಗ, ನಿಮ್ಮ ಜೀವನದ ಉಳಿದ ಅಂಶಗಳು ಅಂದರೆ ಪ್ರೀತಿ, ರೊಮ್ಯಾನ್ಸ್ ನಂತೆ, ಹಣಕಾಸು ಸಂಬಂಧಿತ ವಿಷಯಗಳಲ್ಲಿ ಜೊತೆ ಜೊತೆಯಾಗಿ ಸಾಗುವುದು ಬಹಳ ಮುಖ್ಯ. ಇದರಿಂದ ಹಣವನ್ನು ಉತ್ತಮವಾಗಿ ನಿರ್ವಹಿಸಬಹುದು. ಹಣ ಮ್ಯಾನೇಜ್ ಮಾಡೋದರಿಂದ ಅನೇಕ ಪ್ರಯೋಜನಗಳನ್ನು ಹೊಂದಿದೆ.

ಹಣ ಸಂಪಾದಿಸಲು ಹಲವಾರು ಮಾರ್ಗ ಇದೆ ಆದ್ರೆ ಅದೇ ಹಣವನ್ನು ನಾವು ಹೇಗೆ ಉಪಯುಕ್ತವಾಗಿ ಬಳಸಿಕೊಳ್ಳುತ್ತೇವೆ ಅನ್ನೋದು ಪ್ರಮುಖವಾಗಿದೆ.
ಕೆಲವೊಂದು ಹಣದ ಉಳಿತಾಯದ ಸೇಫ್ಟಿ ಸ್ಟೆಪ್ ಗಳು ಇಲ್ಲಿವೆ :

  1. ಹಣಕಾಸು ಖಾತೆಗಾಗಿ ಬ್ಯಾಂಕ್ ಖಾತೆ ಶೇರ್ ಮಾಡಿ ದಂಪತಿ ಒಂದೇ ಬ್ಯಾಂಕಿನಲ್ಲಿ ತಮ್ಮ ಜಂಟಿ ಬ್ಯಾಂಕ್ ಖಾತೆಯನ್ನು (joint bank account)ತೆರೆಯಬೇಕಾಗುತ್ತದೆ. ಇದರ ಮೂಲಕ ನೀವು ಕುಟುಂಬದ ಎಲ್ಲಾ ರೀತಿಯ ವೆಚ್ಚಗಳನ್ನು ಆದೇ ಬ್ಯಾಂಕ್ ಖಾತೆಯ ಮೂಲಕ ಭರಿಸಬೇಕು. ಇದರಿಂದ ಸಮಸ್ಯೆ ಬರೋದಿಲ್ಲ.

2.ಕೆಲವು ಕುಟುಂಬಗಳಲ್ಲಿ ಒಬ್ಬ ಸಂಗಾತಿಯ ಆದಾಯ ಹೆಚ್ಚಾಗಿರುತ್ತದೆ ಮತ್ತು ಇನ್ನೊಬ್ಬ ಸಂಗಾತಿಯ ಆದಾಯವು ಕಡಿಮೆ ಇರುತ್ತದೆ. ಆದರೆ ಅವರು ಒಟ್ಟಿಗೆ ಮನೆಯ ಖರ್ಚುಗಳು ಮತ್ತು ಇತರ ವೆಚ್ಚಗಳನ್ನು ಭರಿಸಿದಾಗ ದಂಪತಿ ಉತ್ತಮವಾಗಿ ಜೀವನ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ವಿಧಾನವನ್ನು ಅನುಸರಿಸಲು ಇಬ್ಬರೂ ತಮ್ಮ ಬ್ಯಾಂಕ್ ಖಾತೆಗಳನ್ನು ಪ್ರತ್ಯೇಕವಾಗಿ ಇಡಬೇಕಾಗುತ್ತದೆ. ಆದರೆ, ನೀವು ತಮ್ಮ ಪರಸ್ಪರ ಒಪ್ಪಿಗೆಯ ಪ್ರಕಾರ ಮನೆಯ ಜವಾಬ್ದಾರಿಗಳನ್ನು (share responsibility) ಸಹ ಹಂಚಿಕೊಳ್ಳಬಹುದು. ಈ ರೀತಿಯಾಗಿ, ಇಬ್ಬರೂ ತಮ್ಮ ಆರ್ಥಿಕತೆಯನ್ನು ಸ್ವತಃ ನಿಯಂತ್ರಿಸಲು
ಈ ವಿಧಾನವನ್ನು ಅನುಸರಿಸಲು, ಇಬ್ಬರೂ ತಮ್ಮ ಬ್ಯಾಂಕ್ ಖಾತೆಗಳನ್ನು ಪ್ರತ್ಯೇಕವಾಗಿ ಇಡಬೇಕಾಗುತ್ತದೆ. ಆದರೆ, ನೀವು ತಮ್ಮ ಪರಸ್ಪರ ಒಪ್ಪಿಗೆಯ ಪ್ರಕಾರ ಮನೆಯ ಜವಾಬ್ದಾರಿಗಳನ್ನು (share responsibility) ಸಹ ಹಂಚಿಕೊಳ್ಳಬಹುದು. ಈ ರೀತಿಯಾಗಿ, ಇಬ್ಬರೂ ತಮ್ಮ ಆರ್ಥಿಕತೆಯನ್ನು ಸ್ವತಃ ನಿಯಂತ್ರಿಸಲು ಸಾಧ್ಯವಾಗುತ್ತದೆ ಮತ್ತು ಅದನ್ನು ತಮಗೆ ಬೇಕಾದಂತೆ ಉತ್ತಮವಾಗಿ ನಿರ್ವಹಿಸಬಹುದು.

  1. ಗಂಡ ಹೆಂಡತಿ ಇಬ್ಬರೂ ಮನೆಯ ಎಲ್ಲಾ ವೆಚ್ಚಗಳನ್ನು ಅರ್ಧದಷ್ಟು ಅಂದರೆ 50% ಜವಾಬ್ದಾರಿಗೆ ಅನುಗುಣವಾಗಿ ವಿಂಗಡಿಸಬೇಕು. ಇದು ಯಾರ ಮೇಲೂ ಹೆಚ್ಚಿನ ಜವಾಬ್ದಾರಿ ಬೀಳುವಂತೆ ಮಾಡೋದಿಲ್ಲ. ಅದನ್ನು ಅವರು ಸುಲಭವಾಗಿ ಹಂಚಿಕೊಳ್ಳಬಹುದು. ಈ ವಿಧಾನದಲ್ಲಿ ಪ್ರತಿಯೊಬ್ಬ ಜೋಡಿ ತಮ್ಮ ಆದಾಯದ ಅನುಪಾತಕ್ಕೆ ಅನುಗುಣವಾಗಿ ಮನೆಯ ಖರ್ಚುಗಳನ್ನು ವಿಂಗಡಿಸಬಹುದು. ಆದಾಯ ಹೆಚ್ಚಾದಷ್ಟೂ ಅವನು ಹೆಚ್ಚು ಜವಾಬ್ದಾರಿಯನ್ನು ಹೊರುತ್ತಾನೆ. ಅದೇ ಸಮಯದಲ್ಲಿ, ಆದಾಯವು ಕಡಿಮೆಯಾದಷ್ಟೂ, ಅವನು ಕಡಿಮೆ ಜವಾಬ್ದಾರಿಯನ್ನು ಹೊರುತ್ತಾನೆ.
    ಈ ವಿಧಾನದ ಮೂಲಕ, ದಂಪತಿಗಳು ತಮ್ಮ ಜೀವನಶೈಲಿಯಲ್ಲಿ ಸ್ವಲ್ಪ ರಾಜಿ ಮಾಡಿಕೊಳ್ಳಬೇಕಾಗಬಹುದು. ಆದರೆ ನಿಮ್ಮ ಜೀವನಶೈಲಿಗೆ ಅನುಗುಣವಾಗಿ ಮನೆಯ ಖರ್ಚುಗಳನ್ನು ಭರಿಸಬಹುದು.
  2. ಮುಖ್ಯವಾಗಿ ಇಲ್ಲಿ ದಂಪತಿಗಳಲ್ಲಿ ಒಬ್ಬರ ಆದಾಯವನ್ನು ಖರ್ಚು ಮಾಡುವ ಮೂಲಕ ಮನೆಯ ಖರ್ಚುಗಳನ್ನು ಪರಿಹರಿಸಿ ಆದರೆ ಇನ್ನೊಬ್ಬ ಸಂಗಾತಿಯ ಸಂಪೂರ್ಣ ಆದಾಯವನ್ನು ಉಳಿತಾಯವಾಗಿ (savings) ಬಳಸಿದಾಗ ಆದಾಯಕ್ಕೆ ಅನುಗುಣವಾಗಿ ನಿಮ್ಮ ಜೀವನಶೈಲಿಯನ್ನು ಸೀಮಿತಗೊಳಿಸಬಹುದು ಅಥವಾ ಹೆಚ್ಚಿಸಬಹುದು.

ಈ ರೀತಿಯಲ್ಲಿ ಸಮತೋಲನ ಕಾಪಾಡಿಕೊಂಡು ಒಬ್ಬರಿಗೊಬ್ಬರು ಮನಪೂರ್ವಕವಾಗಿ ನಿರ್ಧಾರ ತೆಗೆದುಕೊಂಡು ಮನೆಗೆ ಬರುವ ಆದಾಯವನ್ನು ನಿರ್ವಹಿಸಲು ಈ ಸಲಹೆಗಳನ್ನು ಅನುಸರಿಸಬಹುದಾಗಿದೆ. ಆದ್ದರಿಂದ, ನಿಮ್ಮ ಜೀವನದ ಹೊಸ ಪ್ರಾರಂಭ ಮಾಡುವಾಗ ಅವುಗಳನ್ನು ಕಾರ್ಯಗತಗೊಳಿಸುವುದು ನಿಮಗೆ ತುಂಬಾ ಪ್ರಯೋಜನಕಾರಿ ಆಗುತ್ತದೆ.

ಹಿಂದಿನ ಕಾಲದಲ್ಲಿ ಗಂಡ ಹೆಂಡತಿ ಎಂದರೆ ಅವರ ಅನ್ಯೋನ್ಯತೆ ಅಷ್ಟೇ ಶುದ್ಧವಾದುದು. ಯಾವುದೇ ಬೇಧ ಭಾವಾಗಳಿಲ್ಲದೆ ಸುಖವಾಗಿ ನೂರಾರು ಕಾಲ ನೆಮ್ಮದಿಯಿಂದ ಬದುಕುತ್ತಿದ್ದರು. ಹಾಗೆಯೇ ಪ್ರತಿಯೊಂದು ವಿಷಯದಲ್ಲೂ ಅನುಸರಿಸಿಕೊಂಡು ಹೋದಾಗ ಆಸೆ ಕನಸುಗಳನ್ನು ಪೂರೈಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದು.

Leave A Reply

Your email address will not be published.