ಗಮನಿಸಿ : ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ವಾಣಿಜ್ಯ ಪರೀಕ್ಷೆಯ ಫಲಿತಾಂಶ ಪ್ರಕಟ

Share the Article

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಜುಲೈ 2022 ವಾಣಿಜ್ಯ ಪರೀಕ್ಷೆಯ ಬೆರಳಚ್ಚು, ಶೀಘ್ರಲಿಪಿ ಹಾಗೂ ಬರವಣಿಗೆ ವಿಷಯಗಳ ಫಲಿತಾಂಶ ಪ್ರಕಟವಾಗಿದ್ದು, ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ ನಲ್ಲಿ ಫಲಿತಾಂಶ ನೋಡಬಹುದು.

ವಾಣಿಜ್ಯ ಪರೀಕ್ಷೆಯ ಬೆರಳಚ್ಚು, ಶೀಘ್ರಲಿಪಿ ಹಾಗೂ ಬರವಣಿಗೆ ವಿಷಯಗಳ ಫಲಿತಾಂಶ ಪ್ರಕಟವಾಗಿದ್ದು, ದಿನಾಂಕ 07-10-2022 ರಂದು ಸಂಬಂಧಿಸಿದ ಸಂಸ್ಥೆಗಳ ಲಾಗಿನ್ ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಸದರಿ ಫಲಿತಾಂಶವನ್ನು ಎಲ್ಲ ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರು ಫಲಿತಾಂಶ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಂಡು ತಮ್ಮ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು.

ಫಲಿತಾಂಶವು ಪರೀಕ್ಷೆಯಲ್ಲಿ ವಂಚನೆ, ಅನುಚಿತ ವರ್ತನೆ, ನಕಲು ಮಾಡಿರುವುದು ಮೊದಲಾದವುಗಳಿಂದ ಪ್ರಭಾವಿತವಾಗಿದೆ ಎಂದು ಕಂಡುಬಂದಲ್ಲಿ ಅಂತಹ ಫಲಿತಾಂಶವನ್ನು ಫಲಿತಾಂಶ ಪ್ರಕಟವಾದ ನಂತರವೂ ನಿಯಮಾನುಸಾರ ತಡೆಹಿಡಿಯುವ, ರದ್ದುಪಡಿಸುವ, ಮಾರ್ಪಡಿಸಿ ಪ್ರಕಟಿಸುವ ಅಧಿಕಾರವನ್ನು ಮಂಡಳಿ ಹೊಂದಿರುತ್ತದೆ.

Leave A Reply