SSB ಇಂದ ಉದ್ಯೋಗವಕಾಶ | ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ | 10th ಪಾಸಾದವರಿಗೆ ಆದ್ಯತೆ

Share the Article

ಸಶಸ್ತ್ರ ಸೀಮಾ ಬಲವು ( SSB) ಭಾರತ ಸರ್ಕಾರದ ಗೃಹ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಸಂಸ್ಥೆ. ಇಲ್ಲಿ ಖಾಲಿ ಇರುವ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಕ್ರೀಡಾ ಕೋಟಾದಡಿ ನೇಮಕ ಮಾಡಲಿದ್ದು ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಇಂದಿನಿಂದ 30 ದಿನಗಳೊಳಗಾಗಿ ಅರ್ಜಿ ಸಲ್ಲಿಸಿ.

ಉದ್ಯೋಗ ಪ್ರಾಧಿಕಾರ: ಸಶಸ್ತ್ರ ಸೀಮಾ ಬಲ ಹುದ್ದೆ ಹೆಸರು : ಕಾನ್ ಸ್ಟೇಬಲ್
ಹುದ್ದೆಗಳ ಸಂಖ್ಯೆ : 399
ವಿದ್ಯಾರ್ಹತೆ : 10ನೇ ತರಗತಿ ಪಾಸ್.
ವಯೋಮಿತಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 23 ವರ್ಷ ವಯಸ್ಸು ಮೀರಿರಬಾರದು.

ಒಬಿಸಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಈ ಹುದ್ದೆಗಳನ್ನು ಕ್ರೀಡಾ ಕೋಟಾದಡಿ ನೇಮಕ ಮಾಡಲಾಗುತ್ತದೆ. ಡೀಟೇಲ್ ಅಪ್ಲಿಕೇಶನ್ ಅನ್ನು www.ssbrectt.gov.in ಲಭ್ಯವಿದೆ. ನಂತರ ಅರ್ಜಿ ನಮೂನೆ ಪ್ರಿಂಟ್ ತೆಗೆದುಕೊಂಡು ಭರ್ತಿ ಮಾಡಿಕೊಳ್ಳಿ. ರೂ.100 ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಡಿಡಿ ತೆಗೆದು, ಅದರೊಂದಿಗೆ ಕ್ರೀಡಾ ಸಾಧನೆಗಳ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.

ವೇತನ : ಎಸ್‌ಎಸ್‌ಬಿ ಕಾನ್ ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.21,700 ರಿಂದ ರೂ.69,100 ರವರೆಗೆ ಮಾಸಿಕ ಸಂಭಾವನೆ ನೀಡಲಾಗುತ್ತದೆ.

ಎಸ್‌ಎಸ್ಎಬಿಯು ಕಾನ್‌ಸ್ಟೆಬಲ್ ಹುದ್ದೆಗಳನ್ನು ಡ್ರೈವರ್, ಲ್ಯಾಬೋರೇಟರಿ ಅಸಿಸ್ಟಂಟ್, ವೆಟೆರಿನರಿ, ಕಾರ್ಪೆಂಟರ್, ಪ್ಲಂಬರ್, ಪೇಂಟರ್, ಟೇಲರ್, ಕಾಬರ್, ಗಾರ್ಡೆನರ್, ಕ್ಲರ್ಕ್, ವಾಶರ್‌ಮನ್, ಬಾರ್ಬರ್, Aayah ಸಫಾಯಿವಾಲಾ, ವಾಟರ್ ಕ್ಯಾರಿಯರ್ ಮತ್ತು ವೇಟರ್ ಡಿಪಾರ್ಟ್‌ಮೆಂಟ್‌ಗಳಲ್ಲಿ ನೇಮಕ ಮಾಡುವ ಅವಕಾಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ.

Leave A Reply