ಪೊಲೀಸರಿಗೆ ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು : ಸಿದ್ದರಾಮಯ್ಯಗೆ ಕಡಕ್ ಆಗಿ ‘ ಟೋಕಿದ ‘ ಪೊಲೀಸ್​ ಪೇದೆ !​

Share the Article

” ಪೊಲೀಸರಿಗೆ ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು ” ಎಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್‌ಸ್ಟೆಬಲ್‌ ರಾಜಶೇಖರ ಖಾನಾಪುರ ಸವಾಲು ಹಾಕಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪರ, ವಿರೋಧ ಚರ್ಚೆ ನಡೆಯುತ್ತಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಪೊಲೀಸ್ ಪೇದೆ (Constable Challenge) ಒಬ್ಬರು ಮಾಡಿರುವ ಕಾಮೆಂಟ್ ಭಾರೀ ವೈರಲ್​ ಆಗಿದೆ. ” ಭಾರತ ಜೋಡೊ ಪಾದಯಾತ್ರೆಗೆ ಅಡ್ಡಿ ಪಡಿಸುವ ಬಿಜೆಪಿ ಹುನ್ನಾರದಲ್ಲಿ ಪೊಲೀಸ್‌ನವರೇನಾದರೂ ಶಾಮೀಲಾದ್ರೆ….” ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಅದರ ವಿರುದ್ಧ ಪೊಲೀಸಪ್ಪ ದೊಣ್ಣೆ ಇಲ್ಲದೆ ಸಿದ್ದರಾಮಯ್ಯನವರಿಗೆ ಟೋಕಿ ದ್ದಾರೆ. ವಿಜಯಪುರ ಗ್ರಾಮೀಣ ಠಾಣೆ ಪೇದೆ, ಸಿದ್ದು ಮಾತು ಖಂಡಿಸಿ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಉಡಾಫೆ ಮತ್ತು ಒರಟು ಮಾತು ಆಡುವುದರಲ್ಲಿ ಸಿದ್ದರಾಮಯ್ಯನವರದು ಎತ್ತಿದ ಕೈ. ಅದರಲ್ಲೂ ಪೊಲೀಸರನ್ನು ಹೀಯಾಳಿಸುವುದು ಬೈಯುವುದು ಸಿದ್ದರಾಮಯ್ಯನವರಿಗೆ ಜನ್ಮ ಜಾತವಾಗಿ ಬಂದಿದೆ. ಅವರು ಅದನ್ನು ಹಲವು ದಶಕಗಳಿಂದ ಮಾಡಿಕೊಂಡು ಬಂದಿದ್ದಾರೆ ಎನ್ನುವುದು ಹಿರಿಯ ಪತ್ರಕರ್ತರಿಗೆ ಚೆನ್ನಾಗಿ ಗೊತ್ತು. ಅವರು ಪೊಲೀಸರನ್ನು ಮತ್ತು ಪೊಲೀಸ್ ಕಾನ್ಸ್ಟೇಬಲ್ ಗಳನ್ನು’ ಏ ಪ್ಯಾದೆ, ಬಾರೋ ಇಲ್ಲಿ ‘ ಅಂತಲೇ ಕರ್ಯೋದು! ಮೊನ್ನೆ ಕೂಡಾ ಅವರು ಒಟ್ಟಾರೆ ಪೊಲೀಸರನ್ನು ಅವಮಾನಿಸಿದ್ದರು. ಆಗ ವಿಜಯಪುರದ ದಿಟ್ಟ ಪೊಲೀಸ್​ ಎದ್ದು ನಿಂತಿದ್ದರು. ಅವರು ಆಗ ಮಾಡಿದ ಕಾಮೆಂಟ್​ ವೈರಲ್​ ಆಗಿದೆ !!

‘ಪೊಲೀಸರಿಗೆ ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು’ ಎಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್ ಸ್ಟೇಬಲ್ ರಾಜಶೇಖರ ಖಾನಾಪುರ ಸವಾಲು ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪರ, ವಿರೋಧ ಚರ್ಚೆ ನಡೆಯುತ್ತಿದೆ. ಒಂದು ಕಡೆ ಪೇದೆ ವಿರುದ್ಧ ಕ್ರಮಕೈಗೊಳ್ಳಲು ಸಿದ್ದು ಅಭಿಮಾನಿಗಳ ಆಗ್ರಹ ಪಡಿಸಿದ್ದಾರೆ. ಪೇದೆ ಹಾಕಿರುವ ಸವಾಲ್​ ಪೋಸ್ಟ್​ ವಿರುದ್ಧ ಸಿದ್ದು ಅಭಿಮಾನಿಗಳು ಕಿಡಿಕಾರಿದ್ದಾರೆ. ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಪಕ್ಷಾತೀತವಾಗಿ ಕೆಲಸ ಮಾಡುವುದು ಬಿಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರ ಹೇಳಿಕೆ ನೀಡಿರುವುದು ಖಂಡನೀಯ. ಅವರ ವಿರುದ್ಧ ಕ್ರಮಕೈಗೊಳ್ಳಬೇಕೂ ಎಂದು ಸಿದ್ದರಾಮಯ್ಯ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಮಾತನಾಡಿ, ‘ಕಾನ್‌ಸ್ಟೆಬಲ್‌ ತಮ್ಮ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಮಾಡಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಸಂಬಂಧ ಇದುವರೆಗೆ ಯಾರೂ ದೂರು ಕೊಟ್ಟಿಲ್ಲ. ಕೊಟ್ಟರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

Leave A Reply