ಸೌರ ಜ್ವಾಲೆ ಯ ಅದ್ಭುತ ಚಿತ್ರ ಹಂಚಿಕೊಂಡ ನಾಸಾ | ಭೂಮಿಯ ಮೇಲೆ ಅದರ ಪರಿಣಾಮ ಏನು ಗೊತ್ತಾ ? 

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ(NASA) ಭಾನುವಾರ (ಅಕ್ಟೋಬರ್ 2) ಸೂರ್ಯನು ಶಕ್ತಿಯುತವಾದ ಶಕ್ತಿಯನ್ನು ಬಾಹ್ಯಾಕಾಶಕ್ಕೆ ಬಿಡುಗಡೆ ಮಾಡಿದ ರೌದ್ರ ಮನೋಹರ ಕ್ಷಣವನ್ನು ಸೆರೆಹಿಡಿದಿದೆ.

ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ NASA ಅಕ್ಟೋಬರ್ 2 ರಂದು ಸೂರ್ಯನ ಮೇಲ್ಮೈಯಿಂದ ದೈತ್ಯ ಸೌರ ಜ್ವಾಲೆ(Solar Flare) ಯನ್ನು ಹೊರಚೆಲ್ಲಿದೆ ಎಂದು ವರದಿ ಮಾಡಿದೆ. ಆ ಸಂದರ್ಭದಲ್ಲಿ ನಾಸಾದ ಸೌರ ಡೈನಾಮಿಕ್ ಅಬ್ಸರ್ವೇಟರಿಯು ಈ ಘಟನೆಯ ಚಿತ್ರವನ್ನು ಯಶಸ್ವಿಯಾಗಿ ಚಿತ್ರಿಕರಿಸಿಕೊಂಡು ಭೂಮಿಗೆ ಕಳುಹಿಸಿದೆ.

ಸೂರ್ಯನಂದರೆ ಧಗಧಗಿಸಿ ಉರಿಯುವ ಒಂದು ಮಹಾ ಗೋಳ. ಸೂರ್ಯನು ಬಾಹ್ಯಾಕಾಶಕ್ಕೆ ಶಕ್ತಿಯುತವಾದ ಸ್ಫೋಟಗಳನ್ನು ಎಮಿಟ್ ಮಾಡುವುದನ್ನು ಗಮನಿಸಿರುವುದು ಇದೇ ಮೊದಲಲ್ಲ. ಇಂತಹ ಸೌರ ವಿದ್ಯಮಾನಗಳು ಆಗಾಗ ನಡೆಯುತ್ತಿರುತ್ತವೆ. ಆದರೆ ಏಪ್ರಿಲ್‌ನಲ್ಲಿ ನಾಸಾ ತನ್ನ ಸೌರ ಡೈನಾಮಿಕ್ಸ್ ಅಬ್ಸರ್ವೇಟರಿಯನ್ನು ಬಳಸಿಕೊಂಡು ಸೌರ ಜ್ವಾಲೆಯ ಚಿತ್ರವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಸೌರ ಜ್ವಾಲೆಗಳು ಸೂರ್ಯನ ಮೇಲ್ಮೈಯಲ್ಲಿ ಕಾಂತೀಯ ಶಕ್ತಿಯ ಬಿಡುಗಡೆಯಿಂದ ಬರುವ ವಿಕಿರಣದ ತೀವ್ರವಾದ ಸ್ಫೋಟಗಳಾಗಿವೆ.

ಈ ಸೌರ ಜ್ವಾಲೆಗಳು ಮತ್ತದರ ಸೌರ ಸ್ಫೋಟಗಳು ರೇಡಿಯೋ ಸಂವಹನಗಳು, ಎಲೆಕ್ಟ್ರಿಕ್ ಪವರ್ ಗ್ರಿಡ್‌ಗಳು, GPS gala ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳಿಗೆ ವಿಕಿರಣದ ಅಪಾಯವನ್ನು ಉಂಟು ಮಾಡಬಹುದು ಎಂದು ಶಂಕಿಸಲಾಗಿದೆ. ಆದರೆ ಭೂಮಿಯ ಮೇಲೆ ವಾಸ ಮಾಡುತ್ತಿರುವ ಮನುಷ್ಯರಿಗೆ ಈ ಸೌರ ಜ್ವಾಲೆಗಳು ಅಥವಾ ಸೌರ ಸ್ಫೋಟಗಳು ಯಾವುದೇ ರೀತಿಯ ಪರಿಣಾಮವನ್ನು ಉಂಟುಮಾಡುವುದಿಲ್ಲ. ಸೌರ ಜ್ವಾಲೆಗಳು ಮಾನವರ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಏಕಕಾಲಕ್ಕೆ ಅತ್ಯಂತ ಪ್ರಬಲ ಕಾಂತೀಯ ಶಕ್ತಿಯ ಬಿಡುಗಡೆಯ ಕಾರಣದಿಂದಾಗಿ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಮತ್ತು ತಂತ್ರಜ್ಞಾನಕ್ಕೆ ಹಾನಿಯನ್ನು ಉಂಟುಮಾಡಬಹುದು ಎಂದಿದ್ದಾರೆ ವಿಜ್ಞಾನಿಗಳು. ಈ ಸೌರ ಜ್ವಾಲೆಗಳ ಹೊಡೆತದಿಂದಾಗಿ ಬಾಹ್ಯಾಕಾಶ ನೌಕೆಗಳು ಮತ್ತು ಮಾನವ ನಿರ್ಮಿತ ಆಕಾಶಕಾಯಗಳಿಗೆ ತೀವ್ರ ಹಾನಿ ಉಂಟಾಗಬಹುದು.

Leave A Reply

Your email address will not be published.