ಮೊಬೈಲ್, ಟ್ಯಾಬ್ಲೆಟ್ ಗಳಿಗೆ ಒಂದೇ ಚಾರ್ಜರ್ – ಹೊಸ ಕಾನೂನು
2024 ರ ಹೊತ್ತಿಗೆ ಮೊಬೈಲ್ ಫೋನ್ಗಳು ಮತ್ತು ಟ್ಯಾಬ್ಲೆಟ್ಗಳಿಗೆ ಯುಎಸ್ಬಿ ( ಮಾದರಿ(ಟೈಪ್-ಸಿ) ಸಾಮಾನ್ಯ ಚಾರ್ಜರ್ ಆಗಿರಬೇಕು ಎಂಬ ಹೊಸ ಕಾನೂನನ್ನು ಯುರೋಪಿಯನ್ ಯೂನಿಯನ್ (ಯುರೋಪಿಯನ್ ಒಕ್ಕೂಟ) ಅಂಗೀಕರಿಸಿದೆ. ಮಂಗಳವಾರ ಹೊಸ ಕಾನೂನಿಗೆ ಅಂಗೀಕಾರ ನೀಡಲಾಯಿತು.
ಹೊಸ ನಿಯಮಗಳ ಅಡಿಯಲ್ಲಿ, ಗ್ರಾಹಕರು ಹೊಸ ಸಾಧನವನ್ನು ಖರೀದಿಸಿದಾಗ ಪ್ರತಿ ಬಾರಿಯೂ ವಿಭಿನ್ನ ಚಾರ್ಜರ್ ಖರೀದಿಸುವ ಅಗತ್ಯವಿಲ್ಲ. ಏಕೆಂದರೆ ಅವರು ಸಣ್ಣ ಮತ್ತು ಮಧ್ಯಮ ಗಾತ್ರದ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳ ಸಂಪೂರ್ಣ ಶ್ರೇಣಿಗೆ ಒಂದೇ ಚಾರ್ಜರ್ ಅನ್ನು ಬಳಸಲು ಸಾಧ್ಯವಾಗುತ್ತದೆ.
ಇದರಿಂದ ಇ-ತ್ಯಾಜ್ಯವನ್ನು ಕಡಿಮೆ ಮಾಡುವ ಮತ್ತು ಹೆಚ್ಚು ಸಮರ್ಥನೀಯ ಆಯ್ಕೆಗಳನ್ನು ಆಯ್ದುಕೊಳ್ಳುವ ಗ್ರಾಹಕರಿಗೆ ಹೆಚ್ಚಿನ ಅವಕಾಶವನ್ನು ನೀಡುವ ಯುರೋಪಿಯನ್ ಒಕ್ಕೂಟದ ಭಾಗವಾಗಿದೆ.
ಪರಿಸರ ಸ್ನೇಹಿ ನಿಯಮ ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ. ಯುಎಸ್ಬಿ ಟೈಪ್-ಸಿ ಪೋರ್ಟ್ ಪೋರ್ಟಬಲ್ ಸಾಧನಗಳಿಗೆ ಹೊಸ ಮಾನದಂಡವಾಗಿದೆ, ಉತ್ತಮ ಗುಣಮಟ್ಟದ ಚಾರ್ಜಿಂಗ್ ಮತ್ತು ದತ್ತಾಂಶ ವರ್ಗಾವಣೆಯ ಅವಕಾಶವನ್ನು ನೀಡುತ್ತದೆ.
ಎಲ್ಲಾ ಹೊಸ ಮೊಬೈಲ್ ಫೋನ್ಗಳು, ಟ್ಯಾಬ್ಲೆಟ್ಗಳು, ಡಿಜಿಟಲ್ ಕ್ಯಾಮೆರಾಗಳು, ಹೆಡ್ಫೋನ್ಗಳು ಮತ್ತು ಹೆಡ್ಸೆಟ್ಗಳು, ಹ್ಯಾಂಡ್ಹೆಲ್ಡ್ ವೀಡಿಯೊಗೇಮ್ ಕನ್ಫೋಲ್ಗಳು ಮತ್ತು ಪೋರ್ಟಬಲ್ ಸ್ಪೀಕರ್ಗಳು, ಇ ರೀಡರ್ಗಳು, ಕೀಬೋರ್ಡ್ಗಳು, ಮೈಸ್, ಪೋರ್ಟಬಲ್ ನ್ಯಾವಿಗೇಷನ್ ಸಿಸ್ಟಮ್ಗಳು, ಇಯರ್ಬಡ್ಗಳು ಮತ್ತು ಲ್ಯಾಪ್ಟಾಪ್ಗಳು ಹಾಗೂ 100 ವ್ಯಾಟ್ಗಳವರೆಗೆ ಚಾರ್ಜಿಂಗ್ ಮಾಡುವ ಎಲ್ಲ ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿರಬೇಕು.