BIGG NEWS : ರಾಮಾಯಣಕ್ಕೆ, ಭಾರತೀಯ ಸಂಸ್ಕೃತಿಗೆ ಅಪಮಾನ | ಟ್ವಿಟ್ಟರ್’ನಲ್ಲಿ #BoycottAdipurush ಟ್ರೆಂಡಿಂಗ್ !!

ಮತ್ತೆ ಬಾಯ್ಕಾಟ್ ಪರ್ವ ಶುರುವಾಗಿದೆ. ನಿರ್ದೇಶಕ ಓಂ ರಾವತ್ ಅವರ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಆದಿಪುರುಷ್ ಚಿತ್ರ ಕೆಲವು ‘ ತಪ್ಪು’ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಅದರ ಸ್ಪೆಷಲ್ ಎಫೆಕ್ಟ್ ಗಾಗಿ ಭಾರಿ ಟ್ರೋಲ್‍ಗೆ ಒಳಗಾಗುವುದರಿಂದ ಹಿಡಿದು, ಈಗ ಭಾರತೀಯ ಸಂಸ್ಕೃತಿಯ ತಪ್ಪಾಗಿ ಬಿಂಬಿಸುವಿಕೆಗಾಗಿ ಆದಿಪುರುಷ್ ನನ್ನ ಅನೇಕರು ಟೀಕಿಸುತ್ತಿದ್ದಾರೆ.

ಏತನ್ಮಧ್ಯೆ, ಬಾಯ್ಕಾಟ್ ಆದಿಪುರುಷ್ ಹ್ಯಾಶ್ಟ್ಯಾಗ್ ಟ್ವಿಟರ್‍ನಲ್ಲಿ 98 ಸಾವಿರಕ್ಕೂ ಹೆಚ್ಚು ಟ್ವೀಟ್‍’ಗಳೊಂದಿಗೆ ಟ್ರೆಂಡಿಂಗ್‍ನಲ್ಲಿದೆ. ಇನ್ನು ನೆಟ್ಟಿಗರು ಟ್ವಿಟ್ಟರ್’ನಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಆದಿಪುರುಷ್ ಚಿತ್ರದ ಟೀಸರ್ ಬಿಡುಗಡೆಯಾದ ಕೆಲವು ದಿನಗಳ ನಂತರ, ಜನರು ಈಗ ಚಿತ್ರವನ್ನು ಬಹಿಷ್ಕರಿಸಲು ಕರೆ ನೀಡುತ್ತಿದ್ದಾರೆ.ರಾಮಾಯಣದ 3ಡಿ ರೂಪಾಂತರವಾದ ಆದಿಪುರುಷ್ ಬರುವ ಜನವರಿ 12, 2023 ರಂದು ಅನೇಕ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. #BoycottAdipurush ಎಂಬ ಹ್ಯಾಶ್ಟ್ಯಾಗ್ ಟ್ವಿಟರ್‍ನಲ್ಲಿ 98 ಸಾವಿರಕ್ಕೂ ಹೆಚ್ಚು ಟ್ವೀಟ್‍ಗಳೊಂದಿಗೆ ಟ್ರೆಂಡಿಂಗ್‍ನಲ್ಲಿದೆ.

ಆದಿಪುರುಷ್ ನನ್ನು ರಾಮಾಯಣ ಮತ್ತು ಭಾರತೀಯ ಸಂಸ್ಕೃತಿಗೆ ಅವಮಾನ ಎಂದು ಕರೆದಿದ್ದಾರೆ. ಈ ಚಿತ್ರವು ರಾಮಾಯಣವನ್ನ ತಪ್ಪಾಗಿ ಬಿಂಬಿಸುತ್ತದೆ ಎಂದು ಒಂದು ವರ್ಗದ ಜನರು ಹೇಳಿದ್ದಾರೆ.

ಆಯ್ದ ಕೆಲವು ಟ್ರೆಂಡಿಂಗ್ ಟ್ವೀಟ್’ಗಳು ಇಲ್ಲಿವೆ ನೋಡಿ !

https://twitter.com/DrSujinEswar1/status/1577182109273231362?ref_src=twsrc%5Etfw%7Ctwcamp%5Etweetembed%7Ctwterm%5E1577182109273231362%7Ctwgr%5Eecfe19bb970e9f3ff5fb51feb221dd7586468a87%7Ctwcon%5Es1_c10&ref_url=https%3A%2F%2Fkannadanewsnow.com%2Fkannada%2Fbigg-news-an-insult-to-indian-culture-boycottadipurush-trend-on-twitter%2F
https://twitter.com/Abhishek98916/status/1577283269472972801?ref_src=twsrc%5Etfw%7Ctwcamp%5Etweetembed%7Ctwterm%5E1577283269472972801%7Ctwgr%5Eecfe19bb970e9f3ff5fb51feb221dd7586468a87%7Ctwcon%5Es1_c10&ref_url=https%3A%2F%2Fkannadanewsnow.com%2Fkannada%2Fbigg-news-an-insult-to-indian-culture-boycottadipurush-trend-on-twitter%2F

Leave A Reply

Your email address will not be published.