Ramya and Raj B Shetty : ರಮ್ಯಾ ಜೊತೆ “ಸ್ವಾತಿ ಮುತ್ತಿನ ಮಳೆ ಹನಿಯೇ” ಎನ್ನಲಿದ್ದಾರೆ ರಾಜ್ ಬಿ ಶೆಟ್ಟಿ |

Share the Article

ಅಂತೂ ಇಂತೂ ನಟಿ ರಮ್ಯಾ (Ramya) ಅವರು ಚಿತ್ರರಂಗಕ್ಕೆ ಬಹಳ ಗ್ಯಾಪ್ ನಂತರ ಪಾದಾರ್ಪಣೆ ಮಾಡಿದ್ದಾರೆ. ಸಿನಿಮಾ ರಾಜಕೀಯದಿಂದ ದೂರ ಉಳಿದುಕೊಂಡಿರುವ ರಮ್ಯಾ ಬಣ್ಣದ ಲೋಕದ ಕಡೆಗೆ ಮತ್ತೆ ಬಂದಿದ್ದಾರೆ. ರಮ್ಯಾ (Ramya Divya Spandana) ಇತ್ತೀಚೆಗಷ್ಟೇ ನಿರ್ಮಾಪಕಿಯಾಗಿ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಅವರ ಮೊದಲ ನಿರ್ಮಾಣದ ಸಿನಿಮಾಗೆ ಈಗ ಶೀರ್ಷಿಕೆ ಅನೌನ್ಸ್ ಮಾಡಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂಬುದು ಇದರ ಟೈಟಲ್. ಮೊದಲೇ ರಾಜ್ ಬಿ ಶೆಟ್ಟಿ ಮತ್ತು ರಮ್ಯಾ ಅವರು ಜೊತೆಗೇ ಸಿನಿಮಾ ಮಾಡುತ್ತಾರೆ ಎಂಬ ಗುಮಾನಿ ಇತ್ತು. ಈಗ ಅದು ನಿಜವಾಗಿದೆ. ರಮ್ಯಾ ಬ್ಯಾನರ್ ನ ಈ ಸಿನಿಮಾಗೆ ರಾಜ್ ಬಿ. ಶೆಟ್ಟಿ (Raj B Shetty) ಅವರು ನಿರ್ದೇಶನ ಮಾಡಲಿದ್ದಾರೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾಗೆ ರಮ್ಯಾ ಕೇವಲ ನಿರ್ಮಾಪಕಿ ಮಾತ್ರ ಅಲ್ಲ. ಈ ಚಿತ್ರದಲ್ಲಿ ಅವರು ಮುಖ್ಯ ಪಾತ್ರ ಕೂಡ ಮಾಡಲಿದ್ದಾರೆ. ಅವರ ಜೊತೆ ರಾಜ್ ಬಿ. ಶೆಟ್ಟಿ ನಟಿಸಲಿದ್ದಾರೆ. ಈ ವಿಷಯ ಕೇಳಿ ಫ್ಯಾನ್ಸ್ ಅಂತೂ ನಿಜಕ್ಕೂ ಥ್ರಿಲ್ ಆಗಿದ್ದಾರೆ.

ರಾಜ್ ಬಿ. ಶೆಟ್ಟಿ ಅವರು ನಟನೆ ಮತ್ತು ನಿರ್ದೇಶನದ ಮೂಲಕ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಪಡೆದಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಹಾಗೂ ‘ಗರುಡ ಗಮನ ವೃಷಭ ವಾಹನ ಸಿನಿಮಾಗಳು ಜನಮನ ಗೆದ್ದವು. ಈಗ ಅವರು ರಮ್ಯಾ ಜೊತೆಗಿನ ಸಿನಿಮಾದಲ್ಲಿ ಯಾವ ಕಥೆ ಹೇಳಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ನಿಜಕ್ಕೂ ಜನರಿಗಿದೆ.

ರಮ್ಯಾ ಒಡೆತನದ ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಮೂಲಕ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ನಿರ್ಮಾಣ ಆಗಲಿದೆ. ‘ಲೈಟರ್ ಬುದ್ಧ ಫಿಲ್ಮ್ ‘ ಸಂಸ್ಥೆ ಕೂಡ ನಿರ್ಮಾಣದಲ್ಲಿ ಕೈ ಜೋಡಿಸುತ್ತಿದೆ. ಈಗ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಶೂಟಿಂಗ್ ಪ್ರಾರಂಭವಾಗಲಿದೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ಕೆಲಸ ಮಾಡಿದ ಹಲವು ತಂತ್ರಜ್ಞರೇ ಈ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ.

Leave A Reply