UAE Visa Rules : UAE ಬದಲಾಸ ವಲಸೆ ನಿಯಮ | ಭಾರತೀಯರಿಗೆ ಅನುಕೂಲ

ಸೋಮವಾರ ( ಅ.3) ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸುಧಾರಿತ ಹೊಸ ವೀಸಾ ನಿಯಮ ಜಾರಿಗೆ ಬಂದಿದೆ. ಈ ಹೊಸ ವ್ಯವಸ್ಥೆಯಲ್ಲಿ ವಿಸ್ತರಿಸಲಾದ ಗೋಲ್ಡನ್ ವೀಸಾ, ಕೆಲಸಗಾರರಿಗೆ ಅನುಕೂಲವಾಗುವ ಐದು ವರ್ಷಗಳ ಗ್ರೀನ್ ವೀಸಾ, ಬಹು ಪ್ರವೇಶ ಪ್ರವಾಸಿ ವೀಸಾ ಒಳಗೊಂಡಿದೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಎಮಿರೆಟ್ಸ್ ಸಂಪುಟ ಒಪ್ಪಿಗೆ ನೀಡಿದ್ದ ಹೊಸ ವೀಸಾ ನೀತಿಯನ್ನು ಸೋಮವಾದಿಂದ ಅಧಿಕೃತವಾಗಿ ಜಾರಿಗೊಳಿಸಿದೆ. ಹೆಚ್ಚಿನ
ಪ್ರಮಾಣದಲ್ಲಿ ಜನರು ಭಾರತದಿಂದ ವಿವಿಧ ವಲಯಗಳ ಉದ್ಯೋಗಕ್ಕಾಗಿ ಯುಎಇಗೆ ( UAE) ತೆರಳುತ್ತಾರೆ. ಈ ಹೊಸ ವಲಸೆ ನೀತಿಯಿಂದ ಭಾರತೀಯರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎನ್ನಲಾಗಿದೆ. ಹೊಸ ನೀತಿಗೆ ಎಮಿರೇಟ್ಸ್‌ನ ಗುರುತು, ಪೌರತ್ವ, ಸುಂಕ ಮತ್ತು ಬಂದರು ಭದ್ರತಾ ಪ್ರಾಧಿಕಾರ ಒಪ್ಪಿಗೆ ನೀಡಿದೆ.

ಐದು ವರ್ಷಗಳ ಬಹು ಪ್ರವೇಶ ಪ್ರವಾಸಿ ವೀಸಾ ಪಡೆದವರು ದೇಶದಲ್ಲಿ ಇನ್ನು ಮುಂದೆ 180 ದಿನಗಳವರೆಗೆ ಯಾವುದೇ ಪ್ರಾಯೋಜಕರ ಅನುಮತಿ ಇಲ್ಲದೇ ಉಳಿಯಬಹುದಾಗಿದೆ.

ಉದ್ಯೋಗಕ್ಕಾಗಿ ಯುಎಇಗೆ ಬರುವವರಿಗೆ ಈ ಹೊಸ ವೀಸಾ ನೀತಿ ಮತ್ತಷ್ಟು ಸರಳವಾಗಿದೆ. ಹಾಗಾಗಿ ಯಾವುದೇ ಪ್ರಾಯೋಜಕರಿಲ್ಲದೆ ಪ್ರವಾಸಿ ವೀಸಾ ಪಡೆಯಬಹುದಾಗಿದ್ದು, ವಿಶ್ವದ 500 ವಿವಿಗಳ ವಿದ್ಯಾರ್ಥಿಗಳು ಇದರ ಸಲವತ್ತು ಪಡೆಯಲು ಅನುಮತಿ ನೀಡಿದೆ.

ಹೊಸ ವೀಸಾ ನೀತಿಯಲ್ಲಿ ಯುಎಇಗೆ ಬರುವ ಪ್ರವಾಸಿಗರು ಈ ಹಿಂದೆ ಇದ್ದ 30 ದಿನದ ಬದಲು 60 ದಿನಗಳ ಕಾಲ ಉಳಿಯಬಹುದಾಗಿದೆ.

ಯುಎಇಗೆ ಬರುವ ಪ್ರವಾಸಿಗರು 20 ಲಕ್ಷ ಧಿರಂ ಮೌಲ್ಯದ ಆಸ್ತಿ ಖರೀದಿಸಿದರೆ ಗೋಲ್ಡನ್ ವೀಸಾಗೆ ಅರ್ಹರು.

ಗೋಲ್ಡನ್ ವೀಸಾ ಇರುವವರು ಮಕ್ಕಳು ಹಾಗೂ ಕುಟುಂಬ ಸದಸ್ಯರನ್ನು ಕರೆದೊಯ್ಯಲು ಅವಕಾಶವಿದೆ.

10 ವರ್ಷಗಳವರೆಗೆ ಗೋಲ್ಡನ್ ವೀಸಾ ಪಡೆದವರಿಗೆ ಉಳಿದುಕೊಳ್ಳಲು ಅವಕಾಶ. ಇದನ್ನು ಪಡೆಯಲು ಈ ಹಿಂದೆ ಇದ್ದ ಕನಿಷ್ಠ ವೇತನ ಪ್ರಮಾಣವನ್ನು 50 ಸಾವಿರ ಧಿರಂನಿಂದ 30 ಸಾವಿರ ಧಿರಂಗೆ ಇಳಿಕೆ ಮಾಡಲಾಗಿದೆ.
ವಿದ್ಯಾರ್ಥಿಗಳು, ಹೂಡಿಕೆದಾರರು, ಉದ್ಯಮಿಗಳು, ಪ್ರತಿಭಾವಂತ ವ್ಯಕ್ತಿಗಳು ಗೋಲ್ಡನ್ ವೀಸಾಗೆ ಅರ್ಹರಾಗಿರುತ್ತಾರೆ.

ಹಸಿರು ವೀಸಾ ಹೊಂದಿದವರು ಹೆಚ್ಚುವರಿಯಾಗಿ ತಮ್ಮ ಕುಟುಂಬದ ಸದಸ್ಯರನ್ನು ಜೊತೆಗೆ ಕರೆದೊಯ್ಯಬಹುದು.

ಒಂದು ವೇಳೆ ಈ ವೀಸಾ ಅವಧಿ ಮುಗಿದರೆ ಆರು ತಿಂಗಳ ಕಾಲ ಗ್ರೇಸ್ ಅವಧಿ ನೀಡಲಾಗುತ್ತದೆ. ಬಳಿಕ ಸ್ವಯಂ ವೀಸಾ ಅನುಮತಿ ರದ್ದುಗೊಳ್ಳುತ್ತದೆ.

ಯುಎಇ ಅಥವಾ ಯಾವುದೇ ಉದ್ಯೋಗದಾತರ ಸಹಾಯವಿಲ್ಲದೇ ಐದು ವರ್ಷಗಳ ಹಸಿರು ವೀಸಾದಲ್ಲಿ
ವಿದೇಶಿಯರಿಗೆ ಉಳಿದುಕೊಳ್ಳಲು ಅನುಮತಿ ನೀಡಿದೆ.

Leave A Reply

Your email address will not be published.