ಮೆರವಣಿಗೆಯಲ್ಲಿ ಸೆಲ್ಫಿ ತೆಗೆಯಲು ಹೋದ 13 ರ ಬಾಲಕಿ | ಜನರೇಟರ್ ಗೆ ಕೂದಲು ಸಿಲುಕಿ ಗಂಭೀರ ಗಾಯ!!!
ಈಗ ಎಲ್ಲೆಡೆ ಸೆಲ್ಫಿ ಹವಾನೇ ಜಾಸ್ತಿ. 13 ರ ಬಾಲಕಿಯೋರ್ವಳು ಮೆರವಣಿಗೆಯ ಸಂದರ್ಭದಲ್ಲಿ ಸೆಲ್ಫಿ ತೆಗೆಯಲು ಹೋಗಿ ದುರಂತ ಸಂಭವಿಸಿದ ಘಟನೆ ಆಲಿಘಡದಲ್ಲಿ ನಡೆದಿದೆ. ಹದಿಹರೆಯದ ಬಾಲಕಿ ಮೆರವಣಿಗೆ ವೇಳೆ ಸೆಲ್ಫಿ ತೆಗೆಯುವಾಗ, ಆಕೆಯ ಕೂದಲು ಜನರೇಟರ್‌ನ ಫ್ಯಾನ್‌ಗೆ ಸಿಲುಕಿಕೊಂಡಿದೆ. ಪರಿಣಾಮ ಆಕೆಯ ಚರ್ಮ ಸೇರಿ ಕೂದಲು ಕಿತ್ತು ಹೋಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಹಾರಾಜ ಅಗ್ರಸೇನ್ ಜಯಂತಿ ಹಿನ್ನೆಲೆ ಭಾನುವಾರ ಮೆರವಣಿಗೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಈ ಮೆರವಣಿಗೆಯಲ್ಲಿ ಬಾಲಕಿಯೊಬ್ಬಳು ತನ್ನ ಕುಟುಂಬ ಸದಸ್ಯರೊಂದಿಗೆ ತೆರಳುತ್ತಿದ್ದಳು. ಆಗ ಬಾಲಕಿ ಸೆಲ್ಫಿ ತೆಗೆಯಲು ಹೋದಾಗ ಆಕೆಯ ಕೂದಲು, ಮೆರವಣಿಗೆಯಲ್ಲಿ ಅಳವಡಿಸಲಾದ ಜನರೇಟರ್‌ನ ಫ್ಯಾನ್‌ಗೆ ಸಿಕ್ಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಬಾಲಕಿ ಜೋರಾಗಿ ಕಿರುಚಿದ ತಕ್ಷಣ ಅಲ್ಲಿದ್ದ ಜನ ಆಕೆಯನ್ನು ರಕ್ಷಿಸಿ, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಗ್ರಸೇನ್ ಅವರ ಮೆರವಣಿಗೆಯು ನಗರದ ರೈಲ್ವೆ ರಸ್ತೆಯ ಮೂಲಕ ಮಾಮು – ಭಂಜಾ ಪ್ರದೇಶವನ್ನು ತಲುಪಿತ್ತು. ಈ ಸಮಯದಲ್ಲಿ, ಅಮಿತ್ ಅಗರ್ವಾಲ್, ತಮ್ಮ 13 ವರ್ಷದ ಮಗಳು ಆರುಷಿಯೊಂದಿಗೆ ಮಹಾರಾಜ ಅಗ್ರಸೇನ್ ಅವರ ಆರತಿ ವೀಕ್ಷಿಸುತ್ತಿದ್ದರು. ಈ ನಡುವೆ ಬಾಲಕಿ ಕೂದಲು ಜನರೇಟರ್ ಫ್ಯಾನ್‌ಗೆ ಸಿಲುಕಿದೆ. ಚರ್ಮ ಸೇರಿದಂತೆ ತಲೆಯ ಮೇಲಿನ ಕೂದಲು ಕಿತ್ತು ಹೋಗಿದ್ದು, ತೀವ್ರ ರಕ್ತಸ್ರಾವವಾಗಿತ್ತು.