SSLC ವಿದ್ಯಾರ್ಥಿಗಳೇ ಗಮನಿಸಿ | ನೋಂದಣಿ ಪ್ರಕ್ರಿಯೆ ಶುರು

ಪ್ರತಿ ವಿದ್ಯಾರ್ಥಿಗು ಕೂಡ ಎಸೆಸೆಲ್ಸಿ ಪರೀಕ್ಷೆ ಜೀವನದ ಅತ್ಯಂತ ಮುಖ್ಯ ಘಟ್ಟವಾಗಿದ್ದು, ಎಸೆಸೆಲ್ಸಿ ನಂತರ ಅವಕಾಶಗಳ ಬಾಗಿಲು ತೆರೆಯುತ್ತಾ ಹೋಗುತ್ತದೆ. ವಿದ್ಯಾರ್ಥಿಯ ಆಸಕ್ತಿಯ ಆಧಾರದಲ್ಲಿ ವಿಭಿನ್ನ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಪರೀಕ್ಷೆ ಪ್ರಕ್ರಿಯೆ ಮಹತ್ತರ ಪಾತ್ರ ವಹಿಸುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಕೊರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಸಿಗದೇ ಇರುವುದರಿಂದ ಸಾಧ್ಯವಾದಷ್ಟು ಬೇಗ ಪರೀಕ್ಷಾ ಸಮಯ ತಿಳಿಸಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದರೆ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲು ಸಹಕಾರಿಯಾಗಲಿದೆ ಎಂಬ ಸದುದ್ದೇಶದಿಂದ ಅಧಿಸೂಚನೆಯನ್ನು ಬೇಗ ಹೊರಡಿಸಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, 2023ರ ಮಾರ್ಚ್‌ / ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದ್ದು, ಮುಂಬರುವ ಎಸೆಸೆಲ್ಸಿ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಆನ್‌ಲೈನ್‌ನಲ್ಲಿ ನೋಂದಣಿಯನ್ನು ಅ.21ರ ವರೆಗೆ ಮಾಡಿಕೊಳ್ಳಬಹುದು.ಅಭ್ಯರ್ಥಿಗಳು ನೋಂದಣಿ ಮಾಹಿತಿಯನ್ನು ಪಡೆಯಲು ಮಂಡಳಿಯ ಜಾಲತಾಣದ http://sslc.karnataka.gov.in/ ಶಾಲಾ ಲಾಗಿನ್‌ ನಲ್ಲಿ ಪಡೆಯಬಹುದು.

ಮಾರ್ಚ್‌-2023ರ ಎಸೆಸೆಲ್ಸಿ ಪರೀಕ್ಷೆಯನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ವಿವರಗಳನ್ನು ಆನ್‌ಲೈನ್‌ ಮೂಲಕ ಅ.21ರೊಳಗೆ ಅಪ್‌ಲೋಡ್‌ ಮಾಡಬಹುದಾಗಿದ್ದು, ಇದಕ್ಕಾಗಿ ರಾಜ್ಯದ ಎಲ್ಲ ಸರಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯಲ್ಲಿ (ಶಾಲಾ ಅಭ್ಯರ್ಥಿ, ಖಾಸಗಿ, ಪುನರಾವರ್ತಿತ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳು ) ವಿವರಗಳನ್ನು ಪಡೆದು ಆನ್ಲೈನ್ ಮೂಲಕ ಮಾಹಿತಿ ಸಲ್ಲಾಸಬೇಕಾಗಿದೆ. ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.

ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ ಮೂಲಕ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಿ ಬಳಸಬೇಕಾದ ಅರ್ಜಿಗಳನ್ನು ಪಡೆದುಕೊಳ್ಳಬಹುದಾಗಿದೆ. ಮುಖ್ಯ ಶಿಕ್ಷಕರು ಮಂಡಳಿಯ ಶಾಲಾ ಲಾಗಿನ್‌ನಲ್ಲಿ ಮಂಡಳಿ ವತಿಯಿಂದ ಈಗಾಗಲೇ ನೀಡಲ್ಪಟ್ಟ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಬಳಸಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ನೋಂದಣಿ ಮಾಡಿಕೊಳ್ಳುವ ಶಾಲಾ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳ ಪೂರ್ಣ ಮಾಹಿತಿ, ಭಾವಚಿತ್ರ ಹಾಗೂ ಸಹಿಯನ್ನು ಹಾಕಿ ಅಪ್‌ಲೋಡ್‌ ಮಾಡಬೇಕಾಗಿದೆ.

ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ನಮೂದಿಸಿ ಸಂಬಂಧಪಟ್ಟ ಮಾಹಿತಿಯನ್ನು ಸಲ್ಲಿಸಿ ಅಪ್‌ಲೋಡ್‌ ಮಾಡಬೇಕು. ಇದರ ಜೊತೆಗೆ ಪೋಷಕರ ಮೊಬೈಲ್‌ ಸಂಖ್ಯೆ, ಭಾವಚಿತ್ರ ಮತ್ತು ಸಹಿಯನ್ನು ಕೂಡ ಅಪ್‌ಲೋಡ್‌ ಮಾಡಬೇಕಾಗಿದೆ.

ವಿದ್ಯಾರ್ಥಿಗಳ ಮಾಹಿತಿಯನ್ನು ಸ್ಯಾಟ್ಸ್‌ ಡೇಟಾಬೇಸ್‌ನಿಂದ ಪಡೆಯಲಾಗುತ್ತಿದ್ದು ಹಾಗಾಗಿ, ವಿದ್ಯಾರ್ಥಿಗಳ ಮಾಹಿತಿಯನ್ನು ತಿದ್ದುಪಡಿ ಮಾಡಬೇಕಾದಲ್ಲಿ ಮೊದಲು ಸ್ಯಾಟ್ಸ್‌ನಲ್ಲಿ ತಿದ್ದುಪಡಿ ಮಾಡಿದ ಬಳಿಕ ಪಡೆಯಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಂಡಳಿ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

Leave A Reply

Your email address will not be published.