ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ಇದು ಕೊಲೆಯಲ್ಲ ಎಂದ ಸಿಬಿಐ ವರದಿ !

Share the Article

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕಳೆದ ಐದು ವರ್ಷಗಳ ಹಿಂದೆ ಕಾಣೆಯಾಗಿ ಸಾವಿಗೀಡಾಗಿದ್ದ ಪರೇಶ್ ಮೇಸ್ತಾ ಎಂಬ ಯುವಕನ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಂಭವಿಸಿದೆ.

ಪರೇಶ್ ಮೇಸ್ತನನ್ನು ಯಾರೂ ಕೊಲೆಗೈದಿಲ್ಲ. ಇದು ಆಕಸ್ಮಿಕವಾಗಿ ಸಂಬಂಧಿಸಿದ ಸಾವು ಎಂದು ಸಿಬಿಐ, ಹೊನ್ನಾವರ ನ್ಯಾಯಾಲಯಕ್ಕೆ ಇಂದು ವರದಿ ಸಲ್ಲಿಸಿದೆ. ವರದಿ ಪರಿಶೀಲಿಸಿದ ಹೊನ್ನಾವರ ನ್ಯಾಯಾಲಯ, ನವೆಂಬರ್ 16ಕ್ಕೆ ತೀರ್ಪು ಮುಂದೂಡಿದೆ.

ಪರೇಶ್ ಮೇಸ್ತಾನನ್ನು ಅನ್ಯ ಧರ್ಮದವರು ಕೋಮು ಸಂಘರ್ಷದ ಉದ್ದೇಶದಿಂದ ಕೊಂದಿದ್ದಾರೆ ಎಂದು ಬಿಜೆಪಿಯು ಆರೋಪಿಸಿತ್ತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸುದೀರ್ಘ ತನಿಖೆಯ ಬಳಿಕ ಇಂದು ಸಿಬಿಐ, ಹೊನ್ನಾವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯೊಂದರಲ್ಲಿ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದು, ಎರಡು ದಿನದ ಬಳಿಕ ಹೊನ್ನಾವರ ನಗರದ ದೇವಸ್ತಾನವೊಂದರ ಹಿಂಭಾಗದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ.

Leave A Reply